ಜಿಂಬಾಬ್ವೆಗೆ ದೊಡ್ಡ ಸವಾಲು
ಹರಾರೆ: ತೀವ್ರ ಕುತೂಹಲ ಮೂಡಿಸಿದ್ದ ಹರಾರೆ ಟೆಸ್ಟ್ ನಿರ್ಣಾಯಕ ಘಟ್ಟ ಮುಟ್ಟಿದೆ. ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಪ್ರವಾಸಿ ಬಾಂಗ್ಲಾದೇಶ, ತನ್ನ ದ್ವಿತೀಯ ಇನಿಂಗ್ಸ್ನಲ್ಲಿ 9 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿ, ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡು, ಜಿಂಬಾಬ್ವೆಗೆ ಪಂದ್ಯ ಗೆಲ್ಲಲು 401 ರನ್ಗಳ ಗುರಿ ನೀಡಿತು.
ನಂತರ, ಕ್ರೀಸ್ಗೆ ಇಳಿದ ಜಿಂಬಾವ್ವೆ ದಿನಾಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿದೆ.
ಪಂದ್ಯದ ಮೂರನೇ ದಿನವಾದ ಶನಿವಾರ, ಜಿಂಬಾವ್ವೆ ತಂಡದ ಮೊದಲ ಇನಿಂಗ್ಸ್ ಅನ್ನು 282 ರನ್ಗಳಿಗೆ ನಿಯಂತ್ರಿಸಿ, 109 ರನ್ಗಳ ಲೀಡ್ ಪಡೆದಿದ್ದ ಬಾಂಗ್ಲಾದೇಶ, ಆನಂತರ, ಜಿಂಬಾಬ್ವೆ ಬೌಲಿಂಗ್ಗೆ ತತ್ತರಿಸಿ, ದಿನಾಂತ್ಯಕ್ಕೆ 163 ರನ್ ಪೇರಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತ್ತು.
ಆದರೆ, ಭಾನುವಾರದ ದಿನದಾಟದಲ್ಲಿ ಕೊಂಚ ಪ್ರತಿರೋಧ ತೋರಿದ ಬಾಂಗ್ಲಾ, ತನ್ನ ಮೊತ್ತವನ್ನು 291 ರನ್ಗಳಿಗೆ ಹೆಚ್ಚಿಸಿಕೊಂಡಿತು. ಶನಿವಾರದ ದಿನದಾಟದಲ್ಲಿ ಶತಕಾರ್ಧ ಗಳಿಸಿ, ಅಜೇಯರಾಗುಳಿದಿದ್ದ ಬಾಂಗ್ಲಾದೇಶದ ಮಧ್ಯಮ ಕ್ರಮಾಂಕದ, ಮಷ್ಫಿಕರ್ ರಹೀಮ್, 93 ರನ್ ಗಳಿಸಿದರು. ಅವರೊಂದಿಗೆ, 6 ರನ್ ಗಳಿಸಿ ಶನಿವಾರ ದಿನಾಂತ್ಯಕ್ಕೆ ಅಜೇಯರಾಗುಳಿದಿದ್ದ ನಾಸಿರ್ ಹುಸೇನ್, ಅಜೇಯ 67 ರನ್ ಗಳಿಸಿದರು. 6ನೇ ವಿಕೆಟ್ಗೆ ಈ ಇಬ್ಬರೂ ಸೇರಿಸಿದ 84 ರನ್ಗಳ ಜೊತೆಯಾಟದಿಂದ ಬಾಂಗ್ಲಾದೇಶಕ್ಕೆ ಜಿಂಬಾಬ್ವೆ ವಿರುದ್ಧ ಉತ್ತಮ ಮೊತ್ತ ಪೇರಿಸುವತ್ತ ಹೆಜ್ಜೆಯಿಟ್ಟಿತು.
ಇನಿಂಗ್ಸ್ನ 70ನೇ ಓವರ್ನಲ್ಲಿ ಮುಷ್ಫೀಕರ್ ರಹೀಂ ಔಟಾದರು. ಆದರೆ, ಆನಂತರ ಬಂದ ಬಾಂಗ್ಲಾ ಬ್ಯಾಟ್ಸ್ಮನ್ಗಳಾದ ಜಿಯುರ್ ರೆಹಮಾನ್ (0), ಸೊಹಾಗ್ ಗಾಝಿ (11), ಸಾಜಿದುಲ್ ಇಸ್ಲಾಂ (4), ರೊಬಿದುಲ್ ಇಸ್ಲಾಂ (4) ಹೆಚ್ಚೇನೂ ಆಡಲಿಲ್ಲ. ಆದರೆ, ಕ್ರೀಸ್ನಲ್ಲಿ ಗಟ್ಟಿಯಾಗಿ ಬೇರೂರಿದ ನಾಸಿರ್ ಹುಸೇನ್ ಉತ್ತಮವಾಗಿ ಬ್ಯಾಟ್ ಬೀಸಿದರು. ಇದರಿಂದ ಬಾಂಗ್ಲಾದೇಶದ ಮೊತ್ತವೂ ಹೆಚ್ಚುತ್ತಾ ಸಾಗಿತು.
ದೊಡ್ಡ ಮೊತ್ತದ ಗುರಿ ನೀಡುವ ಅವಕಾಶ ಸಿಕ್ಕಿದ ಕೂಡಲೇ ಬಾಂಗ್ಲಾ ತಂಡದ ನಾಯಕ ಮುಷ್ಫೀಕರ್ ರಹೀಮ್ ಇನಿಂಗ್ಸನ್ನು ಡಿಕ್ಲೇರ್ ಮಾಡಿಕೊಂಡರು.
ಸಂಕಷ್ಟದಲ್ಲಿ ಜಿಂಬಾಬ್ವೆ: ಪಂದ್ಯ ಗೆಲ್ಲಲು 401 ರನ್ ಗುರಿಯೊಂದಿಗೆ ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ ಜಿಂಬಾಬ್ವೆ, ದಿನಾಂತ್ಯದ ಹೊತ್ತಿಗೆ ಸಂಕಷ್ಟಕ್ಕೆ ಸಿಲುಕಿದೆ. ಕೇವಲ 36 ರನ್ಗಳಿಗೆ ಚಕಬ್ವಾ (22) ಅವರನ್ನು ಕಳೆದುಕೊಂಡ ಅದು, ಆನಂತರ ನಿಗದಿತ ಅಂತರದಲ್ಲಿ ಸಿಬಂದಾ (32), ಟೇಲರ್ (10) ಅವರನ್ನು ಕಳೆದುಕೊಂಡಿತು. ಆನಂತರ, ಕೆಲವೇ ಹೊತ್ತಿನಲ್ಲಿ ವಾಲರ್ (15) ಅವರನ್ನೂ ಕಳೆದುಕೊಂಡಿತು.
ದಿನಾಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿರುವ ಜಿಂಬಾಬ್ವೆ, ಗೆಲವಿಗೆ 263 ರನ್ ಗಳಿಸಬೇಕಿದೆ. ಸೋಮವಾರ ಪಂದ್ಯದ ಅಂತಿಮ ದಿನವಾಗಿದ್ದು, ಜಿಂಬಾಬ್ವೆ ಇನ್ನೂ 6 ವಿಕೆಟ್ ಹೊಂದಿದೆ.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ ಪ್ರಥಮ ಇನಿಂಗ್ಸ್ 391
ಜಿಂಬಾಬ್ವೆ ಪ್ರಥಮ ಇನಿಂಗ್ಸ್ 282
ಬಾಂಗ್ಲಾದೇಶ ದ್ವಿತೀಯ ಇನಿಂಗ್ಸ್ 291/9 (ಡಿ)
(ಶನಿವಾರ ದಿನಾಂತ್ಯಕ್ಕೆ 163/5)
ಮುಷ್ಫೀಕರ್ ರಹೀಮ್ 93, ನಾಸಿರ್ ಹುಸೇನ್ ಅಜೇಯ 67
ಬೌಲಿಂಗ್: ಶಿಂಗಿ ಮಸಕಾದ್ಸಾ 58/4, ಹ್ಯಾಮಿಲ್ಟನ್ ಮಸಕಾದ್ಸಾ 24/3
ಜಿಂಬಾಬ್ವೆ ದ್ವಿತೀಯ ಇನಿಂಗ್ಸ್ 134/4
(ಭಾನುವಾರ ದಿನಾಂತ್ಯಕ್ಕೆ)
ಸಿಬಂದಾ 32, ಹ್ಯಾಮಿಲ್ಟನ್ ಮಸಕಾದ್ಸಾ ಅಜೇಯ 46
ಬೌಲಿಂಗ್: ಶಕೀಬ್ ಅಲ್ ಹಸನ್ 45/2, ಜಿವುರ್ ರಹಮಾನ್ 36/2
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

