ಪಂಜಾಬ್ಗೆ ಮುಂಬೈ ಪಂಚ್
ಮುಂಬೈ: ಅಂಕಪಟ್ಟಿಯಲ್ಲಿ ಉನ್ನತ ಸ್ಥಾನಕ್ಕೇರಲು ಹವಣಿಸುತ್ತಿರುವ ಮುಂಬೈ ತಂಡವು ಸೋಮವಾರ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 4 ರನ್ಗಳಿಂದ ರೋಚಕ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಲು ನಿರ್ಧರಿಸಿದ ಮುಂಬೈ ತಂಡ ನಿಧಾನಗತಿಯ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಡ್ವೇನ್ ಸ್ಮಿತ್ ಹಾಗೂ ಸಚಿನ್ ತೆಂಡೂಲ್ಕರ್ ತಂಡಕ್ಕೆ ಕೇವಲ 11 ರನ್ ಜತೆಯಾಟ ನೀಡಿದರು. ಈ ವೇಳೆ 9 ರನ್ಗಳಿಸಿದ್ದ ಸಚಿನ್, ಪ್ರವೀಣ್ ಕುಮಾರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ನಂತರ 19 ಎಸೆತಗಳಲ್ಲಿ 25 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ದಿನೇಶ್ ಕಾರ್ತಿಕ್, ಗೋನಿ ಎಸೆತದಲ್ಲಿ ಬೌಲ್ಡ್ ಆದರು. ನಂತರ 32 ಎಸೆತದಲ್ಲಿ 33 ರನ್ಗಳಿಸಿ ಉತ್ತಮ ಆರಂಭ ಪಡೆದಿದ್ದ ಡ್ವೇನ್ ಸ್ಮಿತ್, ಚಾವ್ಲಾ ಎಸೆತದಲ್ಲಿ ಮಿಲ್ಲರ್ಗೆ ಕ್ಯಾಚ್ ನೀಡಿದರು.
ನಂತರ ಜತೆಯಾದ ನಾಯಕ ರೋಹಿತ್ ಶರ್ಮಾ ಹಾಗೂ ಪೊಲಾರ್ಡ್ ತಂಡಕ್ಕೆ 88 ರನ್ಗಳ ಉತ್ತಮ ಜತೆಯಾಟ ನೀಡಿದರು. ಈ ವೇಳೆ ರೋಹಿತ್ ಶರ್ಮಾ 39 ಎಸೆತಗಳಲ್ಲಿ 79 ರನ್ಗಳಿಸಿ ಅಜೇಯರಾಗಿ ಉಳಿದರು. ಶರ್ಮಾಗೆ ಉತ್ತಮ ಸಾಥ್ ನೀಡಿದ ಪೊಲಾರ್ಡ್ 21 ಎಸೆತಗಳಲ್ಲಿ 20 ರನ್ಗಳಿಸಿದರು. ಅಂತಿಮ ಓವರ್ಗಳಲ್ಲಿ ಬಿರುಸಿನ ಆಟ ಪ್ರದರ್ಶಿಸಿದ ಈ ಜೋಡಿ ತಂಡದ ಮೊತ್ತ 174 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಲು ನೆರವಾದರು.
ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ತಂಡ 20 ಓವರ್ಗಳಲ್ಲಿ 10 ವಿಕೆಟ್ ಕಳೆದುಕೊಂಡು 170 ರನ್ಗಳಿಸಿ 4 ರನ್ಗಳ ವಿರೋಚಿತ ಸೋಲನುಭವಿಸಿತು.
ತಂಡದ ಆರಂಭಿಕರಾದ ಮಂದೀಪ್ (9), ಮಾರ್ಷ್ (10), ವೊಹ್ರಾ (1) ರನ್ಗಳಿಸಿ ಔಟಾಗುವ ಮೂಲಕ ತಂಡದ ಆರಂಭಿಕ ಕುಸಿತಕ್ಕೆ ಕಾರಣರಾದರು. ನಂತರ ಬಂದ ಹಸ್ಸಿ (34), ಮಿಲ್ಲರ್ (56) ರನ್ಗಳಿಸಿ ತಂಡವನ್ನು ಕುಸಿತದಿಂದ ಮೇಲೆತ್ತುವ ಪ್ರಯತ್ನ ನಡೆಸಿದರು. ಇವರ ನಂತರ ಬಂದ ಎಲ್ಲಾ ಬ್ಯಾಟ್ಸ್ಮನ್ಗಳು ಎರಡಂಕ್ಕಿ ದಾಟಲಿಲ್ಲ. ಅಂತಿಮವಾಗಿ ಹೋರಾಟ ನಡೆಸಿದ ಪ್ರವೀಣ್ ಕುಮಾರ್ 15 ಎಸೆತದಲ್ಲಿ 24 ರನ್ ಗಳಿಸಿದರಾದರು ತಂಡವನ್ನು ಗೆಲವಿನ ದಡ ಸೇರಿಸುವಲ್ಲಿ ವಿಫಲರಾದರು.
ಸ್ಕೋರ್ ಬೋರ್ಡ್
ಮುಂಬೈ ಇಂಡಿಯನ್ಸ್: 174/3 (20 ಓವರ್)
ಡ್ವೈನ್ ಸ್ಮಿತ್ ಸಿ ಮಿಲ್ಲರ್ ಬಿ ಚಾವ್ಲಾ 33 (32), ಸಚಿನ್ ತೆಂಡೂಲ್ಕರ್ ಬಿ ಕುಮಾರ್ 9 (10), ದಿನೇಶ್ ಕಾರ್ತಿಕ್ ಬಿ ಗೋನಿ 25 (19), ರೋಹಿತ್ ಶರ್ಮಾ ಅಜೇಯ 79 (39), ಕೀರನ್ ಪೊಲಾರ್ಡ್ ಅಜೇಯ 20 (21). ಇತರೆ 8.
ವಿಕೆಟ್ ಪತನ: 1-11, 2-43, 3-86.
ಬೌಲಿಂಗ್: ಪ್ರವೀಣ್ ಕುಮಾರ್ 4-0-24-1, ಅಜರ್ ಮಹಮೂದ್ 4-0-32-0, ಪರ್ವಿಂದರ್ ಆವಾನಾ 4-0-16-0, ಮನ್ಪ್ರೀತ್ ಗೋನಿ 4-0-43-1, ಫಿಯೂಶ್ ಚಾವ್ಲಾ 2-0-24-1, ಡೇವಿಡ್ ಹಸ್ಸಿ 2-0-32-0.
ಕಿಂಗ್ಸ್ ಇಲೆವೆನ್ ಪಂಜಾಬ್: 170 (20 ಓವರ್)
ಮನ್ಪ್ರೀತ್ ಸಿಂಗ್ ಬಿ ಮಾಲಿಂಗ 9 (8), ಶಾನ್ ಮಾರ್ಷ್ ಸಿ ಪೊಲಾರ್ಡ್ ಬಿ 10 (12), ಮನನ್ ವೊಹ್ರಾ ಸಿ ಪೊಲಾರ್ಡ್ ಬಿ ಜಾನ್ಸನ್ 1 (2), ಡೇವಿಡ್ ಹಸ್ಸಿ ಸಿ ಜಾನ್ಸನ್ ಬಿ ಓಜಾ 34 (18), ಡೇವಿಡ್ ಮಿಲ್ಲರ್ ಸಿ ತೆಂಡೂಲ್ಕರ್ ಬಿ ಜಾನ್ಸನ್ 56 (34), ಗುರುಕೀರತ್ ಸಿಂಗ್ ಸಿ ಸ್ಮಿತ್ ಬಿ ಹರ್ಭಜನ್ ಸಿಂಗ್ 2 (4), ಅಜರ್ ಮಹಮೂದ್ ಸಿ ಕಾರ್ತಿಕ್ ಬಿ ಹರ್ಭಜನ್ ಸಿಂಗ್ 9 (13), ಮನ್ಪ್ರೀತ್ ಗೋನಿ ಸಿ ಕಾರ್ತಿಕ್ ಬಿ ಹರ್ಭಜನ್ ಸಿಂಗ್ 0 (3), ಫಿಯೂಶ್ ಚಾವ್ಲಾ ಸಿ ರಾಯುಡು ಬಿ ಕುಲಕರ್ಣಿ 12 (10), ಪ್ರವೀಣ್ ಕುಮಾರ್ ಸಿ ತೆಂಡೂಲ್ಕರ್ ಬಿ ಕುಲಕರ್ಣಿ 24 (15), ಅವಾನಾ ಅಜೇಯ 0 (2). ಇತರೆ 13.
ವಿಕೆಟ್ ಪತನ: 1-12, 2-16, 3-55, 4-76, 5-79, 6-110, 7-111, 8-132, 9-149, 10-170.
ಬೌಲಿಂಗ್: ಜಾನ್ಸನ್ 4-0-29-2, ಮಾಲಿಂಗ 4-0-39-1, ಕುಲಕರ್ಣಿ 4-0-44-2, ಓಜಾ 3-0-22-2, ಹರ್ಭಜನ್ 4-0-14-3, ಪೊಲಾರ್ಡ್ 1-0-15-0.
ಪಂದ್ಯಶ್ರೇಷ್ಠ: ರೋಹಿತ್ ಶರ್ಮಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

