ಭಾರತ ತಂಡಕ್ಕೆ ಸಿಂಧು ನೇತೃತ್ವ

ನವದೆಹಲಿ: ಮಂಗಳವಾರದಿಂದ ಆರಂಭಗೊಳ್ಳಲಿರುವ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ಗಾಗಿ ತೆರಳಲಿರುವ ಭಾರತ ತಂಡದ ನೇತೃತ್ವವನ್ನು ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರಿಗೆ ನೀಡಲಾಗಿದೆ. ಏ. 30ರಿಂದ ಮೇ 4ರವರೆಗೆ ಈ ಪಂದ್ಯಾವಳಿ ನಡೆಯಲಿದೆ.
ಸಿಂಧು ಅವರ ಜೊತೆಗೆ ತೆರಳಲಿರುವ ಭಾರತೀಯ ಮಹಿಳೆಯರ ತಂಡದಲ್ಲಿ ಪಿ.ಸಿ. ತುಳಸಿ, ಅರುಂಧತಿ ಪಂಟಾವನೆ, ತನ್ವಿ ಲಾಡ್, ರಿತುಪರ್ಣ ದಾಸ್ ಹಾಗೂ ಜಿ. ರುತ್ವಿಕಾ ಇದ್ದಾರೆ. ತುಳಸಿ, ಅರುಂಧತಿ, ತನ್ವಿ ಅವರು ಮುಖ್ಯ ಪಂದ್ಯಾವಳಿಯಲ್ಲಿ ಆಡುವ ಅರ್ಹತೆ ಪಡೆದುಕೊಂಡಿದ್ದು, ರಿತುಪರ್ಣ ದಾಸ್ ಹಾಗೂ ರುತ್ವಿಕಾ ಅರ್ಹತಾ ಸುತ್ತಿನಲ್ಲಿ ಮೊದಲು ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಿದೆ.
ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್ನಲ್ಲಿ 15ನೇ ಸ್ಥಾನದಲ್ಲಿರುವ ಸಿಂಧು, ಮಹಿಳಾ ಸಿಂಗಲ್ಸ್ ಸುತ್ತಿನ ತಮ್ಮ ಮೊದಲ ಪಂದ್ಯದಲ್ಲಿ ಸಿಂಗಪೂರ್ನ ಚೆನ್ ಜಿಯಾಯುನ್ ಅವರನ್ನು ಎದುರಿಸಲಿದ್ದಾರೆ.
ಪುರುಷರ ವಿಭಾಗ: ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರಳುತ್ತಿರುವ ಭಾರತದ ಪುರುಷರ ತಂಡದಲ್ಲಿ ಎಚ್.ಎಸ್. ಪ್ರಣಯ್, ಗುರುಸಾಯಿದತ್, ಸಮೀರ್ ವರ್ಮಾ, ಅಭಿಮನ್ಯು ಸಿಂಗ್, ಆಸ್ಕರ್ ಬನ್ಸಾಲ್ ಹಾಗೂ ಕೆ. ಶ್ರೀಕಾಂತ್ ಇದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರಿಸ್ನಲ್ಲಿ ವಿಶ್ವದ ಮಾಜಿ ನಂಬರ್ಒನ್ ಆಟಗಾರ ತೌಫೀಕ್ ಹಿದಾಯತ್ ಅವರನ್ನು ಸೋಲಿಸಿದ್ದ ಪ್ರಣಯ್, ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು.
ಮಲೇಷ್ಯಾ ಓಪನ್ನ ಮೊದಲ ಸುತ್ತಿಗೆ ವಾಕ್ ಓವರ್ ಮೂಲಕ ಪ್ರವೇಶ ಪಡೆದಿರುವ ಪ್ರಣಯ್, ಅಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದಾರೆ.
ಇನ್ನು, ಇಂಡಿಯಾ ಓಪನ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಗುರುಸಾಯಿದತ್, ಮಲೇಷ್ಯಾ ಓಪನ್ನ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಗಪೂರ್ನ ಚಾವೊ ಹಾಂಗ್ ಅವರನ್ನು ಎದುರಿಸಲಿದ್ದಾರೆ.
ಸಮೀರ್ ಅವರು ತಮ್ಮ ಮೊದಲ ಸುತ್ತಿನಲ್ಲಿ, ವೆಯ್ ಜಿಯಾನ್ (ಮಲೇಷ್ಯಾ) ಅವರನ್ನು ಎದುರಿಸಲಿದ್ದು, ಅಭಿಮನ್ಯು ಅವರು ಹಾಂಗ್ಕಾಂಗ್ನ ಯಾನ್ ಕಿಟ್ ಅವರನ್ನು ಎದುರಿಸಲಿದ್ದಾರೆ.
ಡಬಲ್ಸ್ನಲ್ಲಿ ಭಾರತ: ಇನ್ನು, ಮುಖ್ಯ ಪಂದ್ಯಾವಳಿಯಲ್ಲಿ ಎಸ್. ಸಂಜೀತ್ ಹಾಗೂ ಜಗದೀಶ್, ಪುರುಷರ ವಿಭಾಗದ ಡಬಲ್ಸ್ನಲ್ಲಿ ಸೆಣೆಸಲಿದ್ದು, ಇದೇ ವಿಭಾಗದ ಅರ್ಹತಾ ಸುತ್ತಿನಲ್ಲಿ ಡಿ. ಗುರುಪ್ರಸಾದ್ ಹಾಗೂ ವಿನೀತ್ ಮ್ಯಾನುಲ್ ಜೋಡಿ ತಮ್ಮ ಸಾಮರ್ಥ್ಯವನ್ನು ಪರೀಕ್ಷೆಗೊಡ್ಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


