ಮಿಶ್ರ ಡಬಲ್ಸ್ನಲ್ಲಿ ಜ್ವಾಲಾಗೆ ಹೊಸ ಜೋಡಿ
ಹೈದರಾಬಾದ್: ಭಾರತದ ಅಗ್ರ ಕ್ರಮಾಂಕದ ಶಟ್ಲರ್ ಜ್ವಾಲಾ ಗುಟ್ಟಾ ಅವರು ಮನು ಅತ್ರಿ ಜೊತೆ ಮಿಶ್ರ ಡಬಲ್ಸ್ನಲ್ಲಿ ಆಡುವುದಾಗಿ ತಿಳಿಸಿದ್ದಾರೆ. ಈವರೆಗೆ ವಿ. ಡಿಜು ಜೊತೆ ಮಿಶ್ರ ಡಬಲ್ಸ್ನಲ್ಲಿ ಕಣಕ್ಕಿಳಿಯುತ್ತಿದ್ದ ಜ್ವಾಲಾ, ಮುಂದಿನ ಪಂದ್ಯಾವಳಿಯಿಂದಲೇ ತಾವು ಮನು ಜೊತೆ ಆಡುವುದಾಗಿ ತಿಳಿಸಿದ್ದಾರೆ. ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಜ್ವಾಲಾ, 'ಮಿಶ್ರ ಡಲ್ಸ್ನಲ್ಲಿ ತಾವು ಹೊಸ ಆಟಗಾರನೊಂದಿಗೆ ಆಡುವ ಬಗ್ಗೆ ಈಗಾಗಲೇ ಸಂಬಂಧಪಟ್ಟ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದೇನೆ' ಎಂದು ತಿಳಿಸಿದರು. ಜ್ವಾಲಾ-ಡಿಜು ಇಬ್ಬರೂ ದೀರ್ಘಕಾಲದಿಂದ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದರು. ಇತ್ತೀಚೆಗಷ್ಟೇ ಮುಕ್ತಾಯವಾದ ಇಂಡಿಯಾ ಸೂಪರ್ ಸೀರಿಸ್ ಪಂದ್ಯಾವಳಿಯ ಮಿಶ್ರ ಡಬಲ್ಸ್ನಲ್ಲಿ ಸ್ಪರ್ಧಿಸಿದ್ದ ಈ ಜೋಡಿ, ಎರಡನೇ ಸುತ್ತಿನ ಪಂದ್ಯದಲ್ಲಿ ಸೋತು ಪಂದ್ಯಾವಳಿಯಿಂದ ಆಚೆ ನಿರ್ಗಮಿಸಿತ್ತು. ಇತ್ತೀಚೆಗಷ್ಟೇ, ಮಹಿಳಾ ಡಬಲ್ಸ್ನಲ್ಲಿ ತಮ್ಮ ಜೋಡಿಯನ್ನು ಜ್ವಾಲಾ ಬದಲು ಮಾಡಿದ್ದರು. ಅಶ್ವಿನಿ ಪೊನ್ನಪ್ಪ ಜೊತೆ ಮಹಿಳಾ ಡಬಲ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದ ಅವರು, ಇತ್ತೀಚೆಗೆ ಪ್ರಜಾಂಕಾ ಜೊತೆ ಕಣಕ್ಕಿಳಿಯಲು ಆರಂಭಿಸಿದ್ದರು. ಇದೀಗ, ಮಿಶ್ರ ಡಬಲ್ಸ್ನಲ್ಲೂ ತಮ್ಮ ಜೋಡಿಯನ್ನು ಬದಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

