ಸಾನಿಯಾ-ಬೆಥಾನಿ ಕೈ ತಪ್ಪಿದ ಪ್ರಶಸ್ತಿ
ನವದೆಹಲಿ: ಸಾನಿಯಾ ಮಿರ್ಜಾ ಹಾಗೂ ಬೆಥಾನಿ ಮ್ಯಾಟೆಕ್-ಸ್ಯಾಂಡ್ಸ್ ಜೋಡಿ, ಪೊರ್ಶ್ ಟೆನಿಸ್ ಗ್ರಾಂಡ್ ಪ್ರಿಕ್ಸ್ನ ಮಹಿಳೆಯರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಸಾನಿಯಾ-ಬೆಥಾನಿ ಜೋಡಿ ಸಬೈನ್ ಲಿಸಿಕಿ ಹಾಗೂ ಮೋನಾ ಬಾರ್ಥೆಲ್ ಜೋಡಿ ವಿರುದ್ಧ 4-6, 5-7 ಅಂತರದಲ್ಲಿ ಸೋಲು ಕಂಡಿತು.
ಪ್ರಸಕ್ತ ಟೆನಿಸ್ ಋತುವಿನಲ್ಲಿ ಮೂರನೇ ಬಾರಿ ಪಂದ್ಯಾವಳಿಯೊಂದರ ಫೈನಲ್ ಪ್ರವೇಶಿಸಿರುವ ಮಿರ್ಜಾ-ಬೆಥಾನಿ, ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದರು. ಆದರೆ, ಒಂದು ಗಂಟೆ 33 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯ ಈ ಭರವಸೆಯನ್ನು ಹುಸಿಗೊಳಿಸಿತು.
ಆರಂಭಿಕ ಸೆಟ್ನಲ್ಲಿ ಸಾನಿಯಾ ಹಾಗೂ ಬೆಥಾನಿ ಜೋಡಿಗೆ ನಾಲ್ಕು ಬಾರಿ ಬ್ರೇಕ್ ಪಾಯಿಂಟ್ ಪಡೆಯುವ ಅವಕಾಶಗಳು ಲಭ್ಯವಾದರೂ, ಅವುಗಳ ಸದ್ಬಳಕೆ ಮಾಡಿಕೊಳ್ಳುವಲ್ಲಿ ಇಬ್ಬರೂ ಎಡವಿದರು.ಅಲ್ಲದೇ, ಅಲ್ಲಲ್ಲಿ ಈ ಜೋಡಿ ಎಸೆದ ತಪ್ಪುಗಳು ಎದುರಾಳಿಗೆ ಅಂಕ ಗಳಿಕೆಗೆ ಅನುಕೂಲ ಮಾಡಿಕೊಟ್ಟಿತು.
ಎರಡನೇ ಸೆಟ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ಸಾನಿಯಾ-ಬೆಥಾನಿ ಜೋಡಿ, ಎದುರಾಳಿ ಜೋಡಿಗಿಂತ ಹಿನ್ನಡೆ ಅನುಭವಿಸಿತ್ತು. ಆದರೆ, ಆರನೇ ಗೇಮ್ನಲ್ಲಿ ಸಾನಿಯಾ-ಬೆಥಾನಿಗೆ ಎದುರಾಳಿಗಳ ವಿರುದ್ಧ ಸಮಬಲ ಸಾಧಿಸುವ ಅವಕಾಶ ಸಿಕ್ಕಿತ್ತು. ಆದರೆ, ಆ ಅವಕಾಶವನ್ನು ಇವರಿಬ್ಬರೂ ಕೈ ಚೆಲ್ಲಿದರು. ಮೊದಲ ಸೆಟ್ನಲ್ಲಿ ಮಾಡಿದ ತಪ್ಪುಗಳನ್ನು ಸಾನಿಯಾ- ಬೆಥಾನಿ ಜೋಡಿ, ಪುನಃ ಪುನಃ ಎಸಗುತ್ತಾ ಸಾಗಿದರು. ಅಂತಿಮವಾಗಿ, ಈ ಸೆಟ್ನಲ್ಲಿ 5-7 ಅಂತರದ ಜಯ ಕಂಡ ಲಿಸಿಕಿ-ಮೋನಾ, ಪಂದ್ಯದಲ್ಲೂ ಜಯ ಸಾಧಿಸಿ, ಪ್ರಶಸ್ತಿಗೆ ಭಾಜನರಾದರು. ಭಾರತ-ಅಮೆರಿಕಾ ಜೋಡಿ, ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಡಬೇಕಾಯ್ತು.
ಈ ಪಂದ್ಯ ಫಲಿತಾಂಶಗನುಗುಣವಾಗಿ ಸಾನಿಯಾ ಹಾಗೂ ಬೆಥಾನಿ, ತಲಾ 320 ರ್ಯಾಂಕಿಂಗ್ ಅಂಕಗಳನ್ನು ಪಡೆದುಕೊಂಡಿದ್ದಾರೆ. ರನ್ನರ್ ಅಪ್ ಪ್ರಶಸ್ತಿ ಹಾಗೂ 17,046 ಯೂರೋ ಮೊತ್ತವನ್ನು ಬಹುಮಾನ ರೂಪದಲ್ಲಿ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

