ಕಿಂಗ್ಸ್‌ಗೆ ವಾರಿಯರ್ಸ್ ಸುಲಭ ತುತ್ತು
ಪುಣೆ: ತಂಡದ ನಂಬಿಕಸ್ಥ ಬ್ಯಾಟ್ಸ್‌ಮನ್ ಆದ ಸುರೇಶ್ ರೈನಾ (63) ಅರ್ಧ ಶತಕ ಮತ್ತು ಮಹೇಂದ್ರ ಧೋನಿ (41) ಅವರ ಜವಾಬ್ದಾರಿಯು ಬ್ಯಾಟಿಂಗ್ ಹಾಗೂ ಮೋಹಿತ್ ಶರ್ಮಾ ಬೌಲಿಂಗ್ ಮೋಡಿಯ ಪರಿಣಾಮ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಂಗಳವಾರ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ 37 ರನ್‌ಗಳ ಸುಲಭ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಹೇಂದ್ರ ಸಿಂಗ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಪಡೆ, ನಿಗದಿತ ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 164 ರನ್ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಪುಣೆ ವಾರಿಯರ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿ ಪರಾಭವಗೊಂಡಿತು.
ಚೆನ್ನೈ ಪರ ಆರಂಭಿಕರಾಗಿ ಅಂಗಣಕ್ಕಿಳಿದ ಮೈಕಲ್ ಹಸ್ಸಿ (5) ಮತ್ತು ವೃದ್ಧಿಮಾನ್ ಸಾಹಾ (13) ಜೋಡಿ ತಂಡಕ್ಕೆ ಭದ್ರ ಬುನಾದಿ ಹಾಕುವಲ್ಲಿ ವಿಫಲವಾಯಿತು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲ 10 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 61 ರನ್ ಗಳಿಸಿತ್ತು.
ಆದರೆ, ನಂತರ ಬಂದ ರೈನಾ ಮತ್ತು ಬದ್ರಿನಾಥ್ ಜತೆಯಾಗಿ ತಾಳ್ಮೆಯ ಆಟ ಪ್ರದರ್ಶಿಸುವ ಮೂಲಕ 3ನೇ ವಿಕೆಟ್‌ಗೆ 75 ರ್ ಕಲೆ ಹಾಕಿದರು. ಇದು ತಂಡದ ಮೊತ್ತ 160 ರನ್‌ಗಳ ಗಡಿ ದಾಟಲು ಸಹಾಯಕವಾಯಿತು.
50 ಎಸೆತಗಳನ್ನು ಎದುರಿಸಿದ ರೈನಾ ಮೊತ್ತ (ಅಜೇಯ 63) ದಲ್ಲಿ 1 ಸಿಕ್ಸರ್ ಮತ್ತು 5 ಬೌಂಡರಿಗಳು ಸೇರಿದ್ದವು.
ಆದರೆ, 16ನೇ ಓವರ್‌ನಲ್ಲಿ ಲೂಕ್ ರೈಟ್ ಬೌಲಿಂಗ್‌ನಲ್ಲಿ ಬದ್ರಿನಾಥ್ ಅವರು ಸ್ಮಿತ್‌ಗೆ ಕ್ಯಾಚ್ ನೀಡಿದ್ದರಿಂದ ಇಬ್ಬರ ಜತೆಯಾಟ ಮುರಿಯಿತು.
ಆಗ ಬಂದ ನಾಯಕ ಮಹೇಂದ್ರ ಸಿಂಗ್ ಧೋನಿ (45) ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾಗುವ ಮೂಲಕ ಸುರೇಶ್ ರೈನಾ ಅವರೊಂದಿಗೆ ಮುರಿಯದ ಜೊತೆಯಾಟದಲ್ಲಿ 61ರನ್ ಕಲೆಹಾಕಿದರು. ಧೋನಿ ಮೊತ್ತದಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳು ಸೇರಿದ್ದವು.
ಚೆನ್ನೈ ನೀಡಿದ ಗುರಿಯನ್ನು ಬೆನ್ನಟ್ಟಿದ ಪುಣೆ ತಂಡದ ಬ್ಯಾಟ್ಸ್‌ಮನ್‌ಗಳು ತಮ್ಮ ವೈಫಲ್ಯವನ್ನು ಮುಂದುವರಿಸಿದರು. ಆರಂಭಿಕರಾದ ಉತ್ತಪ್ಪ (10), ಫಿಂಚ್ (15) ಬೇಗನೆ ವಿಕೆಟ್ ಒಪ್ಪಿಸಿ ತಂಡದ ಕುಸಿತಕ್ಕೆ ನಾಂದಿ ಹಾಡಿದರು. ನಂತರ ಬಂದ ಟಿ.ಸುಮನ್ (0), ಯುವರಾಜ್ ಸಿಂಗ್ (5) ಕೂಡ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಕೊಂಚ ಹೋರಾಟ ನೀಡಿದ ಸ್ಟೀವನ್ ಸ್ಮಿತ್ 35 ರನ್‌ಗಳಿಸಿದರು. ಇವರ ನಂತರ ಬಂದ ಬ್ಯಾಟ್ಸ್‌ಮನ್‌ಗಳೂ ವಿಫಲರಾದ ಹಿನ್ನಲೆಯಲ್ಲಿ ಪುಣೆ ತಂಡ ಕೇವಲ 127 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಸ್ಕೋರ್ ಬೋರ್ಡ್
ಚೆನ್ನೈ ಸೂಪರ್ ಕಿಂಗ್ಸ್ 164/3 (20ಓವರ್)
ಹಸ್ಸಿ ಬಿ ರಿಚಡ್‌ಸನ್ 5(8), ಸಾಹ ಎಲ್‌ಬಿಡಬ್ಲ್ಯೂ ಬಿ ಶರ್ಮಾ 13(15), ರೈನಾ ಅಜೇಯ 63 (50), ಬದ್ರಿನಾಥ್ ಸಿ ಸ್ಮಿತ್ ಬಿ ರೈಟ್ 34 (31), ಧೋನಿ ಅಜೇಯ 45(16), ಇತರೆ 4
ವಿಕೆಟ್ ಪತನ: 1-6, 2-28, 3-103
ಬೌಲಿಂಗ್: ಶರ್ಮಾ 4-0-27-1, ಭುವನೇಶ್ವರ್ 4-1-24-0, ರಿಚಡ್‌ಸನ್ 4-0-35-1, ದಿಂಡಾ 4-0-41-0, ನಾಯರ್ 3-0-23-0, ರೈಟ್ 1-0-12-1.
ಪುಣೆ ವಾರಿಯರ್ಸ್: 129/9 (20 ಓವರ್)
ರಾಬಿನ್ ಉತ್ತಪ್ಪ ರನೌಟ್ (ರೈನಾ) 10 (11), ಆರೋನ್ ಫಿಂಚ್ ಸಿ ಧೋನಿ ಬಿ ಮೋಹಿತ್ ಶರ್ಮಾ 15 (9), ಸುಮನ್ ಎಲ್‌ಬಿಡಬ್ಲ್ಯೂ 0 (1), ಯುವರಾಜ್ ಸಿಂಗ್ ಸಿ ಧೋನಿ ಬಿ ಮೋಹಿತ್ ಶರ್ಮಾ 5 (4), ಸ್ಟೀವನ್ ಸ್ಮಿತ್ ಸಿ ಅಂಡ್ ಬಿ ಜಡೇಜಾ 35 (39), ಲೂಕ್ ರೈಟ್ ರನೌಟ್ (ಮಾರ್ಕೆಲ್) 2 (6), ಅಭಿಷೇಕ್ ನಾಯರ್ ರನೌಟ್ (ಮಾರ್ಕೆಲ್/ಅಶ್ವಿನ್) 2 (4), ರಿಚರ್ಡ್‌ಸನ್ ಸಿ ರೈನಾ ಬಿ ಮೋರಿಸ್ 26 (20), ಭುವನೇಶ್ವರ್ ಕುಮಾರ್ 24 (24), ರಾಹುಲ್ ಶರ್ಮಾ ಸಿ ರೈನಾ ಬಿ ಬ್ರಾವೊ 0 (1), ಅಶೋಕ್ ದಿಂಡಾ ಅಜೇಯ 2 (2). ಇತರೆ 6.
ವಿಕೆಟ್ ಪತನ: 1-26, 2-26, 3-29, 4-43, 5-54, 6-61, 7-92, 8-118, 9-124.
ಬೌಲಿಂಗ್: ರವೀಂದ್ರ ಜಡೇಜಾ 4-0-26-1, ಅಲ್ಬೀ ಮಾರ್ಕೆಲ್ 3-0-20-0, ಮೋಹಿತ್ ಶರ್ಮಾ 4-0-21-3, ಕ್ರಿಸ್ ಮೊರಿಸ್ 3-0-21-1, ರವಿಚಂದ್ರನ್ ಅಶ್ವಿನ್ 2-0-20-0, ಡ್ವೈನ್ ಬ್ರಾವೊ 4-0-18-1.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

