ರೈಡರ್ಸ್ ಭೀತಿಯಲ್ಲಿ ಡೇರ್ ಡೆವಿಲ್ಸ್
ರಾಯಪುರ: ಪುಣೆ ವಾರಿಯರ್ಸ್ ವಿರುದ್ಧ ಆಕರ್ಷಕ ಜಯ ಸಾಧಿಸಿ ವಿಶ್ವಾಸ ಹೆಚ್ಚಿಸಿಕೊಂಡಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಜಯ ಸಾಧಿಸಲು ಎದುರು ನೋಡುತ್ತಿದೆ.
ಪಂದ್ಯದಲ್ಲಿ ಜಯ ಸಾಧಿಸುವುದು ಉಭಯ ತಂಡಗಳಿಗೂ ಮಹತ್ವದ್ದಾಗಿದ್ದು, ವಿಶೇಷವಾಗಿ ಈ ಆವೃತ್ತಿಯಲ್ಲಿ ಹೆಚ್ಚು ಪಂದ್ಯಗಳಲ್ಲಿ ಸೋಲನುಭವಿಸಿರುವ ಕೋಲ್ಕತಾಕ್ಕೆ ಜಯ ಸಾಧಿಸುವ ಅನಿರ್ವಾತೆ ಇದೆ.
ಡೆಲ್ಲಿ ಡೇರ್‌ಡೆವಿಲ್ಸ್ ಪಡೆ ಆಡಿರುವ 9 ಪಂದ್ಯಗಳಲ್ಲಿ 7ರಲ್ಲಿ ಸೋಲನುಭವಿಸಿದರೆ, ಕೋಲ್ಕತಾ ನೈಟ್ ರೈಡರ್ಸ್ ಸಹ ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಕೈಚೆಲ್ಲಿದೆ.
'ನಮಗೆ ಇನ್ನು ಉಳಿದಿರುವ ಪ್ರತಿಯೊಂದು ಪಂದ್ಯ ಸಹ ಸೆಮಿಫೈನಲ್' ಎಂದು ಡೇವಿಡ್ ವಾರ್ನರ್ ಹೇಳಿದ್ದರು. ಆದರೆ, ಉಳಿದಿರುವ ಏಳು ಪಂದ್ಯಗಲ್ಲಿ ಏಳನ್ನೂ ಗೆಲ್ಲುವುದು ಎಷ್ಟೊಂದು ಕಠಿಣವಾದ ವಿಷಯ ಎಂಬುದು ವಾರ್ನರ್‌ಗೆ ಗೊತ್ತಿದೆ. ಈ ಏಳೂ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಡೆಲ್ಲಿ ತಂಡ ಪ್ಲೇ ಆಫ್ ಹಂತ ಪ್ರವೇಶಿಸಲಿದೆ.
ಈ ಆವೃತ್ತಿಯ ಕೆಲ ಪಂದ್ಯಗಳಲ್ಲಿ ಗೆಲುವಿನ ಅಂಚಿನಲ್ಲಿ ಡೇರ್‌ಡೆವಿಲ್ಸ್ ತಂಡಕ್ಕೆ ಅದೃಷ್ಟ ಕೈಕೊಟ್ಟಿತ್ತು. ಆದರೆ, ಪುಣೆ ವಿರುದ್ಧ ಜಯ ಕಂಡ ನಂತರ ತಂಡದ ವಿಶ್ವಾಸ ಇಮ್ಮಡಿಗೊಂಡಿದೆ.ಇನ್ನು ಉಭಯ ತಂಡಗಳಲ್ಲಿರುವ ದೇಶೀ ಆಟಗಾರರು ಕಳಪೆ ಪ್ರದರ್ಶನ ನೀಡುತ್ತಿರುವುದು ತಂಡಗಳ ಸೋಲಿಗೆ ಪ್ರಮುಖ ಕಾರಣವಾಗಿ ಪರಿಣಮಿಸಿದೆ.
ಕೋಲ್ಕತಾ ತಂಡದಲ್ಲಿರುವ ಯೂಸುಫ್ ಪಠಾಣ್, ಮನೋಜ್ ತಿವಾರಿ ಇದುವರೆಗೂ ವೈಫಲ್ಯ ಕಂಡರೆ, ಡೆಲ್ಲಿ ತಂಡದಲ್ಲಿ ಮನ್‌ಪ್ರೀತ್ ಜುನೇಜಾ, ಉನ್ಮುಕ್ತ್ ಚಾಂದ್ ಬಂಗಾರದಂತಹ ಅವಕಾಶಗಳನ್ನು ಉಪಯೋಗಿಸಿಕೊಳ್ಳುವಲ್ಲಿ ವೈಫಲ್ಯ ಕಂಡಿದ್ದಾರೆ. ಹೀಗಾಗಿ ಕೋಲ್ಕತಾ ತಂಡದ ಪರ ಉತ್ತಮ ಬ್ಯಾಟಿಂಗ್ ನಡೆಸುತ್ತಿರುವ ನಾಯಕ ಗೌತಮ್ ಗಂಭೀರ್ ಮತ್ತು ಇಯಾನ್ ಮಾರ್ಗನ್ ಮೇಲೆ ಒತ್ತಡ ಇನ್ನಷ್ಟು ಹೆಚ್ಚಾಗುತ್ತಿದೆ.
ಕಳೆದ ಎರಡು ಪಂದ್ಯಗಳಲ್ಲಿ ವೈಫಲ್ಯ ಕಂಡಿರುವ ಗೌತಮ್ ಗಂಭೀರ್ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮಿಂಚುವ ಸಾಧ್ಯತೆಗಳಿವೆ. ಇನ್ನು ಡೇರ್‌ಡೆವಿಲ್ಸ್ ಜಯದ ಜೋಡಿಗಾಗಿ ಎದುರು ನೋಡುತ್ತಿದ್ದು, ಆಶೀಶ್ ನೆಹ್ರಾಗೆ ಅವಕಾಶ ನೀಡಿದರೆ, ಅಜಿತ್ ಅಗರ್ಕರ್ ಸಹ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.
ಪ್ರಸ್ತುತ ಫಾರ್ಮ್‌ನಲ್ಲಿರುವ ಅಗರ್ಕರ್ ಅವರು ನೆಹ್ರಾಗಿಂತ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

