ಕ್ರೀಡೆ

ಶರವೇಗದ ಗಳಿಕೆ

ಶರವೇಗದ ಗಳಿಕೆ
Published On :

ಟೆನಿಸ್ ಲೋಕದ ಚೆಲುವೆ ರಷ್ಯಾದ ಮಾರಿಯಾ ಶರಪೋವಾ ದೇಹಸಿರಿ ಮೂಲಕವೇ ಹೆಚ್ಚು ಅಭಿಮಾನಿಗಳನ್ನು ಸೆಳೆದವರು. ಹಾಗಂತ ಅವರು ಉತ್ತಮ ಟೆನಿಸ್ ತಾರೆ ಅಲ್ಲ ಎಂದಲ್ಲ. ಪ್ರತಿಷ್ಠಿತ 4 ಗ್ರ್ಯಾಂಡ್‌ಸ್ಲ್ಯಾಮ್‌ಗಳನ್ನು ಗೆಲ್ಲುವುದರೊಂದಿಗೆ 29 ಬಡ್ಲ್ಯೂಟಿಎ ಪ್ರಶಸ್ತಿಗಳನ್ನೂ ಬಾಚಿಕೊಂಡವರು. ಅದರೆ, ಈಗ ಶರಪೋವಾ ಸುದ್ದಿ ಮಾಡಿರುವುದು ತಮ್ಮ ಸೌಂದರ್ಯ ಮತ್ತು ಪ್ರಶಸ್ತಿಗಳಿಂದ ಅಲ್ಲ. ಬದಲಾಗಿ ವಿಶ್ವದ ಮಹಿಳಾ ಅಥ್ಲೀಟ್‌ಗಳಲ್ಲಿ ಅತಿ ಹೆಚ್ಚು ಗಳಿಕೆ ಹೊಂದಿರುವ ಕಾರಣಕ್ಕಾಗಿ.
ಅಂದಹಾಗೆ, ಶರಪೋವಾ ಅವರ ವಾರ್ಷಿಕ ಅಂದಾಜು ಗಳಿಕೆ ರು. 113 ಕೋಟಿ. ಇದು 'ಫೋರ್ಬ್ಸ್‌' ಪಟ್ಟಿಯಿಂದ ತಿಳಿದುಬಂದಿದೆ. ವಿಶ್ವದ ಯಶಸ್ವಿ ಟೆನಿಸ್ ತಾರೆ ಅಮೆರಿಕದ ಸೆರೆನಾ ವಿಲಿಯಮ್ಸ್ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಅಂದಾಜು ಗಳಿಕೆ ರು. 80 ಕೋಟಿ. ಅಂದರೆ, ತನಗಿಂತ ಮೇಲ್ಮಟ್ಟದಲ್ಲಿರುವ ಆಟಗಾರ್ತಿಯರನ್ನು ಹಿಂದಿಕ್ಕಿ ಶರಪೋವಾ ಶ್ರೀಮಂತೆಯಾಗುತ್ತಿದ್ದಾರೆ. ಸೌಂದರ್ಯವೊಂದಿದ್ದರೆ ಈ ಜಗತ್ತನ್ನೇ ಆಳಬಹುದು ಎಂಬುದಕ್ಕೆ ಮಾರಿಯಾ ಉತ್ತಮ ಉದಾಹರಣೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.