ಕ್ರೀಡೆ

ಸಿಹಿ ಕಳೆದುಕೊಂಡ ಸಕ್ಕರೆ!

Published On :

ಯಾರೇನೇ ಹೇಳಿದರೂ ಯುಎಸ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ನನ್ನ ಹೆಸರು ಬದಲಾಯಿಸಲ್ಲ ಎಂದು ಮಾರಿಯ ಶರಪೋವಾ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಆಕೆ ಯುಎಸ್ ಓಪನ್‌ನಿಂದಲೇ ಹೊರನಡೆಯಬೇಕಾಗಿದ್ದು ವಿಪರ್ಯಾಸ. ಅಂದಹಾಗೆ, ಇದು ಯಾರ ಕೈವಾಡವೂ ಅಲ್ಲ. ಇತ್ತೀಚೆಗಷ್ಟೇ, ಮಾರಿಯಾ ಶರಪೋವಾ ಅವರು ತಮ್ಮ ಸಿಹಿ ತಿನಿಸು ತಯಾರಿಕಾ ಕಂಪನಿಯ ಹೆಸರಾದ ಶುಗರ್‌ಪೋವಾ ಹೆಸರಿನಲ್ಲೇ ಯುಎಸ್ ಓಪನ್ ಆಡುತ್ತಾರೆ. ಆ ಮೂಲಕ, ತಮ್ಮ ಬ್ರ್ಯಾಂಡ್ ಅನ್ನು ಜಗಜ್ಜಾಹೀರು ಮಾಡುತ್ತಾರೆ ಎಂಬ ವರದಿಗಳು ಬಂದಿದ್ದವು. ಆದರೆ, ಮಾರಿಯಾ ಇದನ್ನು ಒಪ್ಪಿರಲಿಲ್ಲ. ಅಯ್ಯೋ ಇದೆಲ್ಲಾ ಗಾಳಿಸುದ್ದಿ. ಶರಪೋವಾ ನಮ್ಮ ಮನೆತನದ ಹೆಸರು. ಅದನ್ನು ಟೂರ್ನಿಗಳಲ್ಲಿ ಬದಲಾಯಿಸಲಾರೆ ಎಂದು ಸ್ಪಷ್ಟನೆ ಕೊಟ್ಟ ಮರುದಿನವೇ ಆಕೆ ಭುಜದ ಗಾಯಕ್ಕೊಳಗಾಗಿ ಯುಎಸ್ ಓಪನ್‌ನಿಂದ ಆಚೆ ನಡೆಯಬೇಕಾಯಿತು. ಅವರ ಸ್ಪಷ್ಟನೆಗೂ, ಪಂದ್ಯಾವಳಿಯಿಂದ ಅವರ ನಿರ್ಗಮನಕ್ಕೂ ಯಾವುದೇ ನಂಟಿಲ್ಲ. ಆದರೆ, ಅಮೆರಿಕದಲ್ಲಿರುವ ಆಕೆಯ ಸೌಂದರ್ಯಾರಾಧಕರಿಗೆ ಆಕೆಯ ಅಂದದ ಆಟ ನೋಡಲು ಅವಕಾಶ ಸಿಗಲಿಲ್ಲವಷ್ಟೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.