ನವದೆಹಲಿ: ಕೊರಿಯಾ ವಿರುದ್ಧ ನಡೆದ ಡೇವಿಸ್ ಕಪ್ ಪಂದ್ಯದ ಸಂದರ್ಭ ಶನಿವಾರ ಭಾರತದ ಟೆನಿಸ್ ತಾರೆಗಳಾದ ಲಿಯಾಂಡರ್ ಪೇಸ್ ಮತ್ತು ಮಾಜಿ ಆಟಗಾರ ಜೈದೀಪ್ ಮುಖರ್ಜಿ ಅವರಿಗೆ ಅಖಿಲ ಭಾರತ ಟೆನಿಸ್ ಸಂಸ್ಥೆ ಸನ್ಮಾನ ಮಾಡಿತು.
ಟೆನಿಸ್ ಸಂಸ್ಥೆ ಭಾರತದ ಒಟ್ಟು 8 ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದರೆ, ಕಾರ್ಯಕ್ರಮಕ್ಕೆ ಹಾಜರಾಗಿದ್ದು ಪೇಸ್ ಮತ್ತು ಜೈದೀಪ್ ಮುಖರ್ಜಿ ಮಾತ್ರ. ಆನಂದ್, ವಿಜಯ ಅಮೃತ್‌ರಾಜ್, ರಮೇಶ್ ಮತ್ತು ರಾಮನಾಥನ್ ಕೃಷ್ಣನ್, ಮಹೇಶ್ ಭೂಪತಿ ಅವರೊಂದಿಗೆ ದಿವಂಗತ ಪ್ರೇಮ್‌ಜೀತ್ ಲಾಲ್ ಅವರ ಹೆಸರನ್ನೂ ಸನ್ಮಾನಕ್ಕೆ ಆಯ್ಕೆ ಮಾಡಲಾಗಿತ್ತು.
ಟೆನಿಸ್ ಸಂಸ್ಥೆಯೊಂದಿಗೆ ಮುನಿಸಿಕೊಂಡಿರುವ ಭೂಪತಿ ಕಾರ್ಯಕ್ರಮ ಹಾಜರಾಗದಿರುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ, ಇತರ ಆಟಗಾರರು ಬಾರದಿರುವುದು ಅನುಮಾನಕ್ಕೆ ಎಡೆ ಮಾಡಿತ್ತು.