ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಾಜಿ ಬೌಲರ್ಗಳಾದ ಗ್ಲೇನ್ ಮೆಗ್ರಾತ್ ಹಾಗೂ ಚಾರ್ಲಿ ಟರ್ನರ್ ಅವರು ತಮ್ಮ ವೃತ್ತಿ ಜೀವನದಲ್ಲಿ ಮಾಡಿದ ಸಾಧನೆಗಾಗಿ ಆಸ್ಟ್ರೇಲಿಯಾದ ಹಾಲ್ ಆಫ್ ಫೇಮ್ ಪಟ್ಟಿಗೆ ಆಯ್ಕೆ ಮಾಡಿ ಗೌರವ ನೀಡಲಾಗಿದೆ. ಈ ಮಾಜಿ ಆಟಗಾರರು ಈ ವರ್ಷ ಹಾಲ್ ಆಫ್ ಫೇಮ್ ಪಟ್ಟಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಸೋಮವಾರ ನಡೆಯಲಿರುವ ಈ ವರ್ಷದ ಆಲನ್ ಬಾರ್ಡರ್ ಪದಕ ಪ್ರಧಾನ ಸಮಾರಂಭದಲ್ಲಿ ಈ ಗೌರವ ನೀಡಲಾಗುವುದು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಹಾಲ್ ಆಫ್ ಫೇಮ್ನ ಅಧ್ಯಕ್ಷ ಡೇವಿಡ್ ಕ್ರೋವ್ ತಿಳಿಸಿದ್ದಾರೆ. ಇಬ್ಬರು ಆಟಗಾರರೂ ಬಲಗೈ ವೇಗಿಗಳಾಗಿದ್ದು, ಬ್ಯಾಟ್ಸ್ಮನ್ಗಳಿಗೆ ದುಃಸ್ವಪ್ನವಾಗಿ ಕಾಡಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಈ ಬೌಲರ್ಗಳು ಉತ್ತಮ ದಾಖಲೆ ಹೊಂದಿದ್ದಾರೆ ಎಂದು ಡೇವಿಡ್ ತಿಳಿಸಿದರು.