ಲಖ್ನೊ: ಧ್ಯಾನ್ಚಂದ್ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ವೇವ್ರೈಡರ್ಸ್ ಹಾಗೂ ಉತ್ತರ ಪ್ರದೇಶ ವಿಝಾರ್ಡ್ಸ್ ನಡುವಿನ ಹಾಕಿ ಇಂಡಿಯಾ ಲೀಗ್ ಪಂದ್ಯದಲ್ಲಿ ಡೆಲ್ಲಿ ತಂಡ 3-0 ಅಂತರದಲ್ಲಿ ಜಯಗಳಿಸಿದೆ. ಪಂದ್ಯಾವಳಿಯ ಆರಂಭದಿಂದಲೂ ಒಂದರ ಹಿಂದೊಂದರಂತೆ ಗೆಲುವು ದಾಖಲಿಸುತ್ತಿರುವ ಡೆಲ್ಲಿಯ ಜೈತ್ರಯಾತ್ರೆ ಮುಂದುವರೆದಿದೆ. ಡೆಲ್ಲಿ ಪರವಾಗಿ ಆಂಡ್ರಿಸ್ ಮಿರ್ ಬೆಲ್, ಸೈಮನ್ ಚೈಲ್ಡ್ ಹಾಗೂ ಗುರ್ವಿಂದರ್ ಸಿಂಗ್ ತಲಾ ಒಂದು ಗೋಲು ಗಳಿಸಿದರು. ಈ ಜಯದಿಂದಾಗಿ, ಇದುವರಿಗಿನ ಪಂದ್ಯಾವಳಿಯಲ್ಲಿ ಡೆಲ್ಲಿ ತಂಡ ಒಟ್ಟು 44 ಅಂಕಗಳನ್ನು ಗಳಿಸಿದೆ.