

ನವದೆಹಲಿ: ಸುದೀರ್ಘ 23 ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಸೇವೆ ಸಲ್ಲಿಸಿರುವ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡುಲ್ಕರ್, ಯುವ ಪೀಳಿಗೆಗೆ ತಮ್ಮ ಸಲಹೆ ನೀಡಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿ ಇತರರಿಂದ ಗೌರವ ಪಡೆಯಲು ಕಠಿಣ ಪರಿಶ್ರಮ ಅಗತ್ಯವಿದೆ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿ ವಾಹಿನಿಯೊಂದರ ಸಪೋರ್ಟ್ ಮೈ ಸ್ಕೂಲ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿನ್, ಜೀವನದಲ್ಲಿನ ಸ್ಫರ್ಧೆಯಿಂದ ನಿಮಗೆ ತೊಂದರೆಯಾಗ ಬಾರದು.
ನೀವು ನಿಮ್ಮ ಬದ್ಧತೆ, ಪರಿಶ್ರಮ ಹಾಗೂ ನಿಮ್ಮ ಕೊಡುಗೆ ಬಗ್ಗೆ ಯೋಚಿಸಬೇಕು. ಸ್ಫರ್ಧೆ ಸಾಮಾನ್ಯ ನೀವು ಬೇರೆಯವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಚಿಂತನೆ ಮಾಡಬಾರದು.
ನೀವು ಉತ್ತಮ ಕೆಲಸ ಮಾಡಿದರೆ ಈಡಿ ತಂಡವೇ ಅದನ್ನು ಹಿಂಬಾಲಿಸುವುದು ಎಂದು ಸಚಿನ್ ತಿಳಿಸಿದ್ದಾರೆ.
ನೀವು ಕಠಿಣ ಪರಿಶ್ರಮ ಹಾಕಿದರೆ ಅದೃಷ್ಟ ನಿಮ್ಮ ಕಡೆ ಬರುವುದು.
ಬದುಕಿನಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ, ಈ ಎಲ್ಲಾ ಸವಾಲುಗಳನ್ನು ಸರ್ಮರ್ಥವಾಗಿ ಮೆಟ್ಟಿ ನಿಲ್ಲಲು ಕಠಿಣ ಪರಿಶ್ರಮದ ಅಗತ್ಯವಿದೆ ಎಂದು ಸಚಿನ್ ಕಿವಿಮಾತು ತಿಳಿಸಿದರು.