ಬೆಳಗಾವಿ: ನಗರದ ಶಿವಗಂಗಾ ರೋಲರ್ ಸ್ಕೇಟಿಂಗ್ ಕ್ಲಬ್ ಅಂಗಣದಲ್ಲಿ ನಡೆದ 50ನೇ ಸ್ವರ್ಣ ಜಂುಂತಿ ರಾಷ್ಟ್ರೀಂು ರೋಲರ್ ಸ್ಕೇಟಿಂಗ್ ಹಾಕಿ ಚಾಂಪಿಂುನ್ಶಿಪ್ನ್ ಭಾನುವಾರದ ಮಹಿಳೆಯರ ಹಿರಿಯರ ವಿಭಾಗದ ಫೈನಲ್ ಪಂದ್ಯದಲ್ಲಿ ಹರಿಯಾಣ ತಂಡವು ಆಂಧ್ರಪ್ರದೇಶ ತಂಡವನ್ನು 9-1 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಪಂದ್ಯದ ಮೊದಲ ಸುತ್ತಿನಲ್ಲಿ ಹರಿಯಾಣ ತಂಡವು 3 ಗೋಲು ಭಾರಿಸಿ ಮುನ್ನಡೆ ಸಾಧಿಸಿದರೆ, ಆಂಧ್ರಪ್ರದೇಶ ತಂಡವು ಕೇವಲ 1 ಗೋಲು ಕಲೆ ಹಾಕಿತು. ಆದರೆ, ಎರಡನೇ ಸುತ್ತಿನಲ್ಲಿ ಹರಿಯಾಣ ತಂಡದ ಆಟಗಾರರು ಆಕ್ರಮಣಕಾರಿ ಆಟ ಪ್ರದರ್ಶಿಸಿ 6 ಗೋಲು ಬಾರಿಸಿದರೆ ಒತ್ತಡದಲ್ಲೇ ಮೈದಾನಕ್ಕಿಳಿದ ಆಂಧ್ರ ತಂಡದ ಆಟಗಾರರು ಒಂದೇ ಒಂದು ಗೋಲು ಭಾರಿಸುವಲ್ಲೂ ಸಫಲವಾಗಲಿಲ್ಲ.
ಹರಿಯಾಣ ತಂಡದ ಪರವಾಗಿ ಯಶ್ದೀಪ್- 5, ಸಂದೀಪ- 3, ಹರಪ್ರೀತ್-1 ಗೋಲು ಬಾರಿಸುವ ಮೂಲಕ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಆಂಧ್ರಪ್ರದೇಶ ತಂಡದ ಪರವಾಗಿ ಟಿ.ಇ. ಜೋಯಿಸ್-1 ಗೋಲು ಬಾರಿಸಿದರು.
ಸಿನಿಯರ್ ಲಿಗ್ ಫಲಿತಾಂಶ: ಈ ಮೊದಲು ನಡೆದ ಲಿಗ್ ಪಂದ್ಯದ ಪುರುಷರ ಹಿರಿಯ ವಿಭಾಗದಲ್ಲಿ ಚಂಡಿಗಡ ತಂಡವು ಕರ್ನಾಟಕ ತಂಡವನ್ನು 14-0 ಗೋಲುಗಳಿಂದ ಸೋಲಿಸಿತು. ಹರಿಯಾಣ ತಂಡವು ಉತ್ತರ ಪ್ರದೇಶ ತಂಡದ ವಿರುದ್ಧ 7-0 ಗೆದ್ದುಕೊಂಡಿತು. ಜಾರ್ಖಂಡ್ ತಂಡವು ತಮಿಳನಾಡು ತಂಡವನ್ನು 13-1 ಗೋಲುಗಳಿಂದ ಸೋಲಿಸಿತು. ಪಂಜಾಬ್ ತಂಡವು ಮಹಾರಾಷ್ಟ್ರ ತಂಡದ ವಿರುದ್ಧ 4-3 ಗೋಲುಗಳಿಂದ ಗೆಲವಿನ ನಗೆ ಬೀರಿತು.ಜೂನಿಯರ್ ಲೀಗ್ ಫಲಿತಾಂಶ: ತಮಿಳುನಾಡು ತಂಡವು ಕರ್ನಾಟಕ ತಂಡವನ್ನು 9-4 ಗೋಲುಗಳಿಂದ ಸೋಲಿಸಿತು. ದೆಹಲಿ ಮತ್ತು ಉತ್ತರ ಪ್ರದೇಶ ತಂಡದ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.