ಮುಂಬೈ: ಹಣಕಾಸು ಅವ್ಯವಹಾರ ಹಾಗೂ ಷೇರು, ವಿದೇಶಿ ವಿನಿಮಯಗಳ ಉಲ್ಲಂಘನೆ ಆರೋಪದಡಿ, ಕೇಂದ್ರ ಜಾರಿ ನಿರ್ದೇಶನಾಲಯ ತನಗೆ ನೀಡಿರುವ ರು 98.5 ಕೋಟಿ ಮೊತ್ತದ ದಂಡ ಪಾವತಿ ನೋಟಿಸ್ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜಸ್ಥಾನ ರಾಯಲ್ಸ್ ನಿರ್ಧರಿಸಿದೆ.
'ಜಾರಿ ನಿರ್ದೇಶನಾಲಯ ನೀಡಿರುವ ನೋಟಿಸ್, ಸೋಮವಾರ ನಮ್ಮ ಕೈ ಸೇರಿದ್ದು, ನೋಟಿಸ್ನ ಅಂಶಗಳನ್ನು ನಮ್ಮ ವಕೀಲರ ಬಳಿ ಚರ್ಚಿಸುತ್ತಿದ್ದೇವೆ. ಶೀಘ್ರದಲ್ಲೇ, ನೋಟಿಸ್ ವಿರುದ್ಧ ನಾವು ಮೇಲ್ಮನವಿ ಸಲ್ಲಿಸಲಿದ್ದೇವೆ' ಎಂದು ರಾಜಸ್ಥಾನ ರಾಯಲ್ಸ್ ತಂಡದ ಆಂತರಿಕ ಮೂಲಗಳು ಹೇಳಿವೆ.