ಬೆಂಗಳೂರು: ಇದೇ ವಾರ ಕೇರಳದಲ್ಲಿ ನಡೆಯಲಿರುವ ಸಂತೋಷ್ ಟ್ರೋಫಿ ರಾಷ್ಟ್ರೀಯ ಹಿರಿಯರ ಫುಟ್ಬಾಲ್ ಚಾಂಪಿಯನ್ಸ್‌ಷಿಪ್‌ಗಾಗಿ ಕರ್ನಾಟಕ ರಾಜ್ಯ ತಂಡ ಸೋಮವಾರ ಕೇರಳಕ್ಕೆ ಪ್ರಯಾಣ ಬೆಳೆಸಿದೆ. ಅಲ್ಲಿನ ಸ್ಥಳಿಯ ವಾತಾವರಣಕ್ಕೆ ಹಾಗೂ ಅಲ್ಲಿನ ಮೈದಾನದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಲುವಾಗಿ ರಾಜ್ಯ ತಂಡ ನಾಲ್ಕು ದಿನಗಳ ಮುನ್ನವೇ ಪ್ರಯಾಣ ಬೆಳೆಸಿದ್ದು, ಸೋಮವಾರ ಸಂಜೆ 4 ಗಂಟೆಗೆ ಪ್ರಯಾಣ ಬೆಳೆಸಿದೆ.
28 ಆಟಗಾರರನ್ನೊಳಗೊಂಡ ಕರ್ನಾಟಕ ತಂಡಕ್ಕೆ ಚೇತನ್ ಕುಮಾರ್ ಬಿ.ವಿ ಮುಂದಾಳತ್ವ ವಹಿಸಿದ್ದಾರೆ. ಈ ತಂಡದಲ್ಲಿ ಎಂಇಜಿ, ಸೌಥ್ ಯುನೈಟೆಡ್, ಪೊಸ್ಟಲ್, ಕೆಎಸ್‌ಪಿ, ಎಚ್‌ಎಎಲ್, ಎಡಿಇ, ಸಿಐಎಲ್‌ಎಲ್, ಬಿಇಎಂಎಲ್ ಕೆಜಿಎಫ್, ಮಂಗಳೂರು, ಮೈಸೂರು, ಶಿವಮೊಗ್ಗ ತಂಡದ ಆಟಗಾರರನ್ನು ಆಯ್ಕೆ ಮಾಡಲಾಗಿದೆ.
ಫೆ.10 ರಂದು ರಾಜ್ಯ ತಂಡ ಹಿಮಾಚಲ ಪ್ರದೇಶ ತಂಡದ ವಿರುದ್ಧ ತಮ್ಮ ಮೊದಲ ಪಂದ್ಯವನ್ನಾಡಲಿದ್ದು, ಫೆ.12 ರಂದು ಡಮನ್ ಡೈವ್ ವಿರುದ್ಧ ಎರಡನೇ ಪಂದ್ಯವನ್ನಾಡಲಿದೆ.
ಫೆ.16 ಹಾಗೂ 18 ರಂದು ಕ್ರಮವಾಗಿ ಅರುಣಾಚಲ ಪ್ರದೇಶ ಹಾಗೂ ಬಿಹಾರ್ ವಿರುದ್ಧ ತಮ್ಮ ಮೂರನೇ ಹಾಗೂ ನಾಲ್ಕನೇ ಪಂದ್ಯವನ್ನಾಡಲಿದೆ.
ತಂಡ
ಗೋಲ್ ಕೀಪರ್‌ಗಳು: ಶರತ್ ನಾರಾಯಣ, ಹರ್ಪ್ರೀತ್ ಸಿಂಗ್
ಡಿಫೆಂಡರ್‌ಗಳು- ಚೇತನ್ ಕುಮಾರ್ ಬಿ.ವಿ (ನಾಯಕ), ಪ್ರದೀಪ್ ಬಿ.ವಿ, ಜೈ ಕುಮಾರ್ ವೈ, ಎಡ್ವಿನ್ ಘೋಶುಲಾ, ಜಯಂತ್ ರಾಜ್ ಭಂಶಿ, ಬಿ.ರಮೇಶ್, ಟಿಕೆನ್ ಸಿಂಗ್.ಕೆ
ಮಿಡ್ ಫೀಲ್ಡರ್‌ಗಳು: ವಿಘ್ನೇಶ್.ಜಿ, ಅಮೋಸ್.ಟಿ, ಲೊಕೇಶ್.ಎಂ, ಬಿ.ಪ್ರಕಾಶ್, ಶ್ರೀನಾಥ್.ಆರ್, ಅರುಣ್ ಕುಮಾರ್, ರಾಮು.ವಿ.
ಸ್ಟ್ರೈಕರ್‌ಗಳು: ಗೋಪಿ.ಪಿ, ವಿನೋತ್.ವಿ, ಸ್ಟೀಫನ್, ರಾಜೇಶ್.ಎಸ್, ಸಿರಿಲ್.ಎ, ಅಭಿಲಾಶ್.ಎಂ.ಎಸ್.
ಸ್ಟ್ಯಾಂಡ್ ಬೈಗಳು: ಥೋಮಸ್, ಶಹಜಾದ್, ಪ್ರದೀಪ್, ಸಂತೋಷ್, ಕಿರಣ್, ಪ್ರತೀಕ್ ದೇವ್.
ಅಧಿಕಾರಿಗಳು: ಎಸ್.ಕೃಷ್ಣಾಜಿ ರಾವ್ (ಮ್ಯಾನೇಜರ್), ಥಾಮಸ್ ಜೋಸೆಫ್ (ಮುಖ್ಯ ಕೋಚ್), ಎಸ್.ಎಸ್. ಶಶಿ (ಕೋಚ್), ಸಿ.ರವಿಕುಮಾರ್ (ಕೋಚ್), ಸೈಯದ್ ಸೋಹೆಲ್ ಹಸನ್ (ಡಾಕ್ಟರ್).