ಕ್ರೀಡೆ

ಹಾಕಿ: ಭಾರತ ತಂಡಕ್ಕೆ ಮುಜ್ತಾಬಾ ನಾಯಕ

ಹಾಕಿ: ಭಾರತ ತಂಡಕ್ಕೆ ಮುಜ್ತಾಬಾ ನಾಯಕ
Published On :

ನವದೆಹಲಿ: 22ನೇ ಸುಲ್ತಾನ್ ಅಜ್ಲಾನ್ ಶಾ ಹಾಕಿ ಪಂದ್ಯಾವಳಿಗಾಗಿ ತೆರಳುತ್ತಿರುವ ಭಾರತ ತಂಡಕ್ಕೆ ಫಾರ್ವರ್ಡ್ ಆಟಗಾರ ದನೀಶ್ ಮುಜ್ತಾಬಾ ಅವರನ್ನು ನಾಯಕರನ್ನಾಗಿ ಆರಿಸಲಾಗಿದೆ. ಮಾರ್ಚ್ 6ರಿಂದ 17ರವರೆಗೆ ಮಲೇಷ್ಯಾದಲ್ಲಿ ಈ ಪಂದ್ಯಾವಳಿ ನಡೆಯಲಿದೆ.
ಬುಧವಾರ ಸಭೆ ಸೇರಿದ, ಹಾಕಿ ಇಂಡಿಯಾ ಆಯ್ಕೆದಾರ ಸಯ್ಯದ್ ಅಲಿ, ಮುಖ್ಯ ತರಬೇತುದಾರ ಮೈಕಲ್ ನಾಬ್ಸ್ ಹಾಗೂ ದೈಹಿಕ ತರಬೇತುದಾರ ಜ್ಯಾಸನ್ ಕಾರ್ನಾತ್ ಹಾಗೂ ಸರ್ಕಾರಿ ಪರಿವೀಕ್ಷಕ ಹರ್ಬಿಂದರ್ ಸಿಂಗ್ ಅವರು, ಅಜ್ಲಾನ್ ಶಾ ಪಂದ್ಯಾವಳಿಗಾಗಿ 18 ಜನ ಭಾರತೀಯ ಹಾಕಿ ತಂಡವನ್ನು ಆಯ್ಕೆ ಮಾಡಿದರು. ಇದೀಗ ಆಯ್ಕೆಗೊಂಡಿರುವ 18 ಸದಸ್ಯರುಳ್ಳ ಹಾಕಿ ತಂಡದಲ್ಲಿ 8 ಆಟಗಾರರು ಮೀಸಲು ಆಟಗಾರರಾಗಿದ್ದಾರೆ. ಪ್ರಸ್ತುತ ನಡೆಯುತ್ತಿರವ ಹಾಕಿ ಇಂಡಿಯಾ ಲೀಗ್ ಪಂದ್ಯಾವಳಿಯಲ್ಲಿ ಆಟಗಾರರು ನೀಡಿರುವ ಪ್ರದರ್ಶನದ ಮೇಲೆ ಅಜ್ಲಾನ್ ಶಾ ಪಂದ್ಯಾವಳಿಗೆ ತೆರಳಲಿರುವ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.  ಈ ಬಾರಿಯ ಎಚ್‌ಐಎಲ್ ಅತಿ ಹೆಚ್ಚು ಗೋಲು ದಾಖಲಿಸಿರುವ ಸಂದೀಪ್ ಸಿಂಗ್ ಅವರನ್ನು ಫೆ. 18ರಿಂದ 24ರವರೆಗೆ ನಡೆಯಲಿರುವ ವಿಶ್ವ ಹಾಕಿ ಲೀಗ್‌ನ ದ್ವಿತೀಯ ಸುತ್ತಿನ ಪಂದ್ಯಾವಳಿಯಲ್ಲಿ ಆಡುತ್ತಿರುವ ಭಾರತ ತಂಡದಲ್ಲಿ ಮೀಸಲು ಆಟಗಾರರನ್ನಾಗಿ ಈಗಾಗಲೇ ಆಯ್ಕೆ ಮಾಡಲಾಗಿದೆ.
ಇನ್ನು, ಅಜ್ಲಾನ್ ಶಾ ಪಂದ್ಯಾವಳಿಗಾಗಿ ತೆರಳುತ್ತಿರುವ ಭಾರತ ತಂಡದಲ್ಲಿ ಪಿ.ಆರ್. ಶ್ರೀಜೇಶ್ ಅವರಿಗೆ ತಂಡದ ಉಪ-ನಾಯಕನ ಜವಾಬ್ದಾರಿ ನೀಡಲಾಗಿದೆ. ತಂಡದಲ್ಲಿ 8 ಜನ ಫಾರ್ವರ್ಡ್‌ಗಳು, ಐವರು ಮಿಡ್ ಫೀಲ್ಡರ್‌ಗಳು ಹಾಗೂ ಮೂವರು ಡಿಫೆಂಡರ್‌ಗಳು ಇದ್ದಾರೆ. ಪ್ರಕಟಗೊಂಡಿರುವ ತಂಡ ಈ ಕೆಳಗಿನಂತಿದೆ.
ಗೋಲ್ ಕೀಪರ್‌ಗಳು: ಪಿ.ಆರ್. ಶ್ರೀಜೇಶ್ (ಉಪ-ನಾಯಕ), ಸುಶಾಂತ್ ಟಿರ್ಕೆ.
ಫುಲ್ ಬ್ಯಾಕ್ಸ್: ರೂಪಿಂದರ್ ಸಿಂಗ್, ಹರ್ಬಿರ್ ಸಿಂಗ್, ಗುರ್ವಿಂದರ್ ಸಿಂಗ್.
ಹಾಫ್ ಬ್ಯಾಕ್ಸ್: ಅಮಿತ್ ರೋಹಿದಾಸ್, ಗುರುಮೇಲ್ ಸಿಂಗ್, ಮನ್‌ಪ್ರೀತ್ ಸಿಂಗ್, ಕೊಥಾಜಿತ್ ಖಡಂಗ್‌ಬಮ್, ಎಂ.ಬಿ. ಅಯ್ಯಪ್ಪ.
ಫಾರ್ವಡ್ಸ್: ದನೀಶ್ ಮುಜ್ತಾಬಾ (ನಾಯಕ), ನಿತಿನ್ ತಿಮ್ಮಯ್ಯ, ಸತ್ಬೀರ್ ಸಿಂಗ್, ಮನದೀಪ್ ಸಿಂಗ್, ಆಕಾಶ್‌ದೀಪ್ ಸಿಂಗ್, ಚಿಗ್ಲೆನ್ಸಾ ಸಿಂಗ್ ಕಂಗುಜಮ್, ಧರಮ್‌ವೀರ್ ಸಿಂಗ್, ಗುರ್ವಿಂದರ್ ಸಿಂಗ್ ಚಾಂಡಿ.
ಸ್ಟಾಂಡ್ ಬೈ ಆಟಗಾರರು: ಕೇಶವ್ ದತ್ (ಗೋಲ್ ಕೀಪರ್), ಸಂದೀಪ್ ಸಿಂಗ್ (ಡಿಫೆಂಡರ್), ಪ್ರದೀಪ್ ಮೋರ್ (ಮಿಡ್ ಫೀಲ್ಡರ್), ಸುರೇಂದರ್ ಕುಮಾರ್ (ಮಿಡ್ ಫೀಲ್ಡರ್), ಮಾಲಕ್ ಸಿಂಗ್ (ಫಾರ್ವರ್ಡ್), ಇಮ್ರಾನ್ ಖಾನ್ (ಫಾರ್ವರ್ಡ್), ಅಮೋನ್ ಮಿರಾಶ್ ಟಿರ್ಕೆ (ಫಾರ್ವರ್ಡ್), ಸಿದ್ದಾರ್ಥ ಶಂಕರ್ (ಫಾರ್ವರ್ಡ್).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.