ಪಾಕ್ ವಿರುದ್ಧ ಆಫ್ರಿಕೆಗೆ ಭರ್ಜರಿ ಜಯ
ಕೇಪ್ಟೌನ್: ಫಿಲ್ಯಾಂಡರ್ ಹಾಗೂ ರಾಬಿನ್ ಪೀಟರ್ಸನ್ ಇಬ್ಬರ ಆಕ್ರಮಣಕಾರಿ ದಾಳಿಯಿಂದಾಗಿ ದಕ್ಷಿಣ ಆಫ್ರಿಕಾ ಪಾಕಿಸ್ತಾನ ವಿರುದ್ಧ ದ್ವಿತೀಯ ಟೆಸ್ಟ್ನಲ್ಲಿ 4 ವಿಕೆಟ್ಗಳ ಜಯ ಗಳಿಸಿತು.
ಶನಿವಾರ ದಿನಾಂತ್ಯಕ್ಕೆ ಪಾಕಿಸ್ತಾನ ತನ್ನ ದ್ವಿತೀಯ ಇನಿಂಗ್ಸ್ ಅನ್ನು 169 ರನ್ಗಳಿಗೆ ಮುಕ್ತಾಯಗೊಳಿಸಿತು. ಪಂದ್ಯ ಗೆಲ್ಲಲು ಒಟ್ಟು 181 ರನ್ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕಾ, ತನ್ನ ಎರಡನೇ ಇನಿಂಗ್ಸ್ನಲ್ಲಿ 43.1 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ, ಜಯದ ನಗೆ ಬೀರಿತು.
ಶನಿವಾರ ದಿನಾಂತ್ಯಕ್ಕೆ 100 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟ ಪರಿಸ್ಥಿತಿಯಲ್ಲಿದ್ದ ಪಾಕಿಸ್ತಾನದ ಇನಿಂಗ್ಸ್, ಭಾನುವಾರವೂ ಕುಂಟುತ್ತಲೇ ಸಾಗಿತು. ಶನಿವಾರ ದಿನಾಂತ್ಯಕ್ಕೆ ಪಾಕಿಸ್ತಾನದ ಆರಂಭಿಕರಾದ ನಾಸಿರ್ ಜೆಮ್ಷೆಡ್ ಹಾಗೂ ಮೂರನೇ ಕ್ರಮಾಂಕದ ಅಜರ್ ಅಲಿ ಅವರನ್ನು ಮುಲಾಜಿಲ್ಲದೇ ಪೆವಿಲಿಯನ್ಗೆ ಅಟ್ಟಿದ್ದ ಫಿಲ್ಯಾಂಡರ್, ಭಾನುವಾರವೂ ತಮ್ಮ ದಾಳಿ ಮುಂದುವರಿಸಿ ಮಧ್ಯಮ ಕ್ರಮಾಂಕದ ಅಸದ್ ಶಫೀಕ್ ಅವರ ವಿಕೆಟ್ ಅನ್ನು ಬೇಗನೇ ಉರುಳಿಸಿದರು.
ಮೊದಲ ಇನಿಂಗ್ಸ್ನಲ್ಲಿ ಯೂನಿಸ್ ಖಾನ್ ಜೊತೆ 4ನೇ ವಿಕೆಟ್ಗೆ 219 ರನ್ಗಳ ಜೊತೆಯಾಟವಾಡಿ, ಪಾಕಿಸ್ತಾನದ ಇನಿಂಗ್ಸ್ಗೆ ಶಕ್ತಿ ತುಂಬಿದ್ದ ಶಫೀಕ್ ಅವರ ವಿಕೆಟ್ ಬೇಗನೇ ಕಿತ್ತಿದ್ದು ಹರಿಣಗಳ ಪಾಲಿಗೆ ಶುಭದಾಯಕವಾಯಿತು. ಆನಂತರ, ಪಾಕಿಸ್ತಾನದ ಮತ್ತೊಬ್ಬ ಅಪಾಯಕಾರಿಯಾದ ಉಮರ್ ಗುಲ್ ಅವರನ್ನೂ ಫಿಲ್ಯಾಂಡರ್ ಡಕ್ಔಟ್ ಮಾಡಿ ಹೊರಹಾಕಿದ್ದು, ಆಫ್ರಿಕಾಕ್ಕೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿತು.
ಇನ್ನು, ಫಿಲ್ಯಾಂಡರ್ ಅವರೊಂದಿಗೆ ದಾಳಿ ನಡೆಸಿದ ಕೆವಿನ್ ಪೀಟರ್ಸನ್, ಭಾನುವಾರ ದಿನದಾಟದಲ್ಲಿ 3 ವಿಕೆಟ್ ಕಬಳಿಸಿ ತಂಡಕ್ಕೆ ನೆರವಾದರು.
ಶನಿವಾರ ದಿನಾಂತ್ಯಕ್ಕೆ 36 ರನ್ ಗಳಿಸಿ ಅಜೇಯರಾಗಿ ಉಳಿದು, ಭಾನುವಾರ ಅಜರ್ ಅಲಿ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದ ಮಿಸ್ಬಾ ಉಲ್ ಹಕ್ ಅವರನ್ನು ಪೆವಿಲಿಯನ್ಗೆ ಅಟ್ಟಿದ ಪೀಟರ್ಸನ್, ಆನಂತರ, ಮಧ್ಯಮ ಕ್ರಮಾಂಕದ ಸರ್ಫ್ರಾಜ್ ಅಹ್ಮದ್ ಅವರ ವಿಕೆಟನ್ನೂ ಬೇಗನೇ ಕೆಡವಿದರು.
ಈ ಸಂದರ್ಭದಲ್ಲಿ ಹರಿಣಗಳ ಪರವಾಗಿ ದಾಳಿಗಿಳಿದಿದ್ದು ಸ್ಟೇಯ್ನ್. ಶನಿವಾರದ ದಿನದಾಟದಲ್ಲಿ, ಪಾಕಿಸ್ತಾನದ ಆರಂಭಿಕ ಮಹಮ್ಮದ್ ಹಫೀಸ್, ನಾಲ್ಕನೇ ಕ್ರಮಾಂಕದ ಯೂನಿಸ್ ಖಾನ್ ಅವರ ವಿಕೆಟ್ ಕಬಳಿಸಿದ್ದ ಅವರು, ಕೊನೆಯ ಬ್ಯಾಟ್ಸ್ಮನ್ ಆದ ಮಹಮ್ಮದ್ ಇರ್ಫಾನ್ ಅವರ ವಿಕೆಟ್ ಪಡೆದರು. ಈ ಮೂಲಕ, ಪಾಕಿಸ್ತಾನದ ದ್ವಿತೀಯ ಇನಿಂಗ್ಸ್ 169 ರನ್ಗಳಿಗೆ ಅಂತ್ಯಗೊಂಡಿತು.
ಹರಿಣಗಳ ಇನಿಂಗ್ಸ್: ಗೆಲುವಿಗಾಗಿ ಒಟ್ಟು 181 ರನ್ಗಳ ಗುರಿ ಪಡೆದ ಹರಿಣಗಳ ಪಡೆಯ ದ್ವಿತೀಯ ಇನಿಂಗ್ಸ್ನ ಆರಂಭ ಉತ್ತಮವಾಗಿರಲಿಲ್ಲ. ಕೇವಲ 10 ರನ್ ಮೊತ್ತವಾಗಿದ್ದಾಗಲೇ, ಆರಂಭಿಕ ಪೀಟರ್ಸನ್ ಅವರನ್ನು ದಕ್ಷಿಣ ಆಫ್ರಿಕಾ ಕಳೆದುಕೊಂಡಿತು. ಆದರೆ, ನಾಯಕ ಹಾಗೂ ಮತ್ತೊಬ್ಬ ಆರಂಭಿಕ ಸ್ಮಿತ್, ಹಶೀಂ ಆಮ್ಲಾ 2ನೇ ವಿಕೆಟ್ಗೆ 53 ರನ್ ಸೇರಿಸಿತು. ಆದರೆ, 16ನೇ ಓವರ್ನಲ್ಲಿ ಸ್ಮಿತ್ ಔಟಾಗುವ ಮೂಲಕ ಈ ಜೋಡಿ ಮುರಿಯಿತು.
ಆನಂತರ, ಹಶೀಂಗೆ ಜೋಡಿಯಾದ ಕಾಲಿಸ್ 3ನೇ ವಿಕೆಟ್ಗೆ 25 ರನ್ಗಳ ಜೊತೆಯಾಟವಾಡಿದರು. 22ನೇ ಓವರ್ನಲ್ಲಿ ಕಾಲಿಸ್ ವಿಕೆಟ್ ಒಪ್ಪಿಸಿ ಹೊರನಡೆದರು. ಆಗ, ತಂಡದ ಮೊತ್ತ 88 ರನ್. ಆಗ, ಹಶೀಂಗೆ ಜೋಡಿಯಾಗಿದ್ದು ಡಿ ವಿಲಿಯರ್ಸ್. ಈ ಜೋಡಿ, ತಂಡದ ಮೊತ್ತಕ್ಕೆ 62 ರನ್ ಸೇರಿಸುವಷ್ಟರಲ್ಲಿ ಹಶೀಂ ಆಮ್ಲಾ ವಿಕೆಟ್ ಒಪ್ಪಿಸಿದರು. ಆಗ, ಕ್ರೀಸ್ಗೆ ಕಾಲಿಟ್ಟಿದ್ದು ಡು ಪ್ಲೆಸಿಸ್. ಆದರೆ, ಪ್ಲೆಸಿಸ್ ಹೆಚ್ಚು ಆಡಲಿಲ್ಲ. ಅವರ ಹಿಂದೆಯೇ ವಿಲಿಯರ್ಸ್ ಹೊರನಡೆದರು. 42ನೇ ಓವರ್ನಲ್ಲಿ ಅವರು ವಿಕೆಟ್ ಒಪ್ಪಿಸಿದರು.
ನಂತರ ಜೊತೆಯಾದ ಪೀಟರ್ಸನ್, ಎಲ್ಗಾರ್ ತಂಡವನ್ನು ಜಯದ ದಡ ತಲುಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

