ಕ್ರೀಡೆ

ಏಷ್ಯನ್ ಬಿಲಿಯರ್ಡ್ಸ್ ಆಯ್ಕೆ ಶಿಬಿರ

Published On :

ನವದೆಹಲಿ: ಏಪ್ರಿಲ್‌ನಲ್ಲಿ ನಡೆಯಲಿರುವ ಒಳಾಂಗಣ ಏಷ್ಯನ್ ಬಿಲಿಯರ್ಡ್ಸ್ ಮತ್ತು 21 ವರ್ಷದೊಳಗಿನ ಏಷ್ಯನ್ ಸ್ನೂಕರ್ ಚಾಂಪಿಯನ್‌ಷಿಪ್‌ಗಾಗಿ ಫೆಬ್ರುವರಿ 25ರಿಂದ 28ರವರೆಗೆ ರಾಜಧಾನಿಯಲ್ಲಿ ಆಯ್ಕೆ ಶಿಬಿರ ನಡೆಯಲಿದೆ.
ಗ್ವಾಲಿಯರ್‌ನಲ್ಲಿ ನಡೆದ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಅಗ್ರ 8 ಸ್ಥಾನ ಪಡೆದ ಆಟಗಾರರು ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿದ್ದಾರೆ. ಅಲೋಕ್ ಕುಮಾರ್, ಬಿ. ಭಾಷ್ಕರ್, ರೂಪೇಶ್ ಶಾ, ಕೆ. ವೆಂಕಟೇಶನ್, ಧ್ವಜ ಹಾರಿಯಾ, ಮನೀಶ್ ಜೈನ್, ಅಶೋಕ್ ಶ್ಯಾಂಡಿಲ್ಯ ಹಾಗೂ ರಾಫತ್ ಹಬೀಬ್ ಅವರು ಬಿಲಿಯರ್ಡ್ಸ್ ಆಯ್ಕೆ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. 21 ವರ್ಷದೊಳಗಿನ ಸ್ನೂಕರ್ ಚಾಂಪಿಯನ್‌ಷಿಪ್ ಶಿಬಿರದಲ್ಲಿ ಭಾಗವಹಿಸಲು ಧ್ವಜ ಹಾರಿಯಾ, ಮಾರ್ಕ್ ಮೆಮೆಜಸ್, ನಿತಿನ್ ಶರ್ಮಾ, ಐಶ್‌ಪ್ರೀತ್ ಚಂಧಾ ಭಾಗವಹಿಸಲಿದ್ದಾರೆ. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಆರು ಭಾರತೀಯ ಆಟಗಾರರು ಭಾಗವಹಿಸಬಹುದಾಗಿದೆ. ಗ್ವಾಲಿಯರ್‌ನ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಅಗ್ರ ನಾಲ್ಕು ಸ್ಥಾನ ಪಡೆದವರು ಚಾಂಪಿಯನ್‌ಷಿಪ್‌ಗೆ ನೇರ ಪ್ರವೇಶ ಪಡೆಯಲಿದ್ದಾರೆ. ನಂತರದ ನಾಲ್ವರು ಎರಡು ಸ್ಥಾನಗಳಿಗೆ ಸ್ಪರ್ಧೆ ನಡೆಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.