ಮಹಿಳೆಯರ ಹಾಕಿ ಪಂದ್ಯಾವಳಿಗೆ ಚಾಲನೆ

Updated on: 

ಮೈಸೂರು: ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಮೈಸೂರು ವಿವಿ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಏರ್ಪಡಿಸಿರುವ ಮೇಜರ್ ಧ್ಯಾನ್‌ಚಂದ್ ಆಹ್ವಾನಿತ ಮಹಿಳೆಯರ ಹಾಕಿ ಪಂದ್ಯಾವಳಿಗೆ ಸೋಮವಾರ ಚಾಲನೆ ನೀಡಲಾಯಿತು.
ಕೇಂದ್ರ ಅಬಕಾರಿ ಮತ್ತು ಸೇವಾ ತೆರಿಗೆ ಇಲಾಖೆ ಮುಖ್ಯ ಆಯುಕ್ತ ಅಜಯ್‌ಕುಮಾರ್ ಪ್ರಸಾದ್ ಮತ್ತು ಭಾರತದ ಮಾಜಿ ಹಾಕಿ ಆಟಗಾರ್ತಿ ಬಿ.ಜಿ. ಹೇಮಲತಾ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅಜಯ್‌ಕುಮಾರ್ ಪ್ರಸಾದ್, ಪ್ರತಿಯೊಬ್ಬರೂ ಕ್ರೀಡಾ ಮನೋಭಾವದಿಂದ ಸ್ಪರ್ಧಿಸಿ ಜಯಗಳಿಸುವಂತೆ ಶುಭ ಕೋರಿದರು. ಪಂದ್ಯಾವಳಿ ಎ ಗುಂಪಿನಲ್ಲಿ ಉತ್ತರ ಪ್ರದೇಶದ ಶರಣ್‌ಪುರ್, ಲಕ್ನೋ ಇಲೆವೆನ್, ಆಂಧ್ರಪ್ರದೇಶದ ಆರ್‌ಟಿಡಿಸಿ, ತ್ರಿವೇಂಡ್ರಮ್‌ನ ಎಸ್‌ಎಐ ಸ್ಪೋರ್ಟ್ಸ್ ಹಾಸ್ಟೆಲ್, ಕರ್ನಾಟಕದ ಕೂಡ್ಗಿ ಸ್ಪೋರ್ಟ್ಸ್ ಸ್ಕೂಲ್ ಇದೆ.
ಬಿ ಗುಂಪಿನಲ್ಲಿ ಉತ್ತರ ಪ್ರದೇಶದ ಬುಂಧೇಲ್‌ಖಂಡ್, ಮಧ್ಯಪ್ರದೇಶದ ಭೂಪಾಲ್ ಎಸ್‌ಎಐ ಸ್ಪೋರ್ಟ್ಸ್ ಹಾಸ್ಟೆಲ್, ಮೈಸೂರಿನ ಡಿವೈಎಸ್‌ಎಸ್ ಸ್ಪೋರ್ಟ್ಸ್ ಹಾಸ್ಟೆಲ್, ಕೇರಳದ ಯುಜಿಸಿ ಸ್ಪೋರ್ಟ್ಸ್ ಹಾಸ್ಟೆಲ್ ಮತ್ತು ತಮಿಳುನಾಡಿನ ಕಾಯಿಲ್‌ಪೇಟ್‌ನ ರಾಜೀವ್‌ಗಾಂಧಿ ಸ್ಪೋರ್ಟ್ಸ್ ಕ್ಲಬ್ ತಂಡಗಳು ಭಾಗವಹಿಸಿವೆ. ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಲಯನ್ಸ್ ಸಂಸ್ಥೆಯ ಕೃಷ್ಣೇಗೌಡ, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ಕೃಷ್ಣ, ಡಾ.ಜಿ. ವೆಂಕಟೇಶ್‌ಕುಮಾರ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ. ಸುರೇಶ್ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com