ಮೆಲ್ಬರ್ನ್: ಬಿಗ್ಬ್ಯಾಷ್ ಟಿ20 ಪಂದ್ಯಾವಳಿಯಲ್ಲಿ ಶೇನ್ ವಾರ್ನ್ ಜತೆ ಕಾದಾಟಕ್ಕಿಳಿದಿದ್ದ ವೆಸ್ಟ್ ಇಂಡೀಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಮರ್ಲಾನ್ ಸ್ಯಾಮ್ಯುಯೆಲ್ಸ್, ಈ ಪ್ರಕರಣದ ಶಿಕ್ಷೆಯಿಂದ ಬಚಾವಾಗಿದ್ದಾರೆ. ಈ ಪ್ರಕರಣದಿಂದ ಸ್ಯಾಮ್ಯುಯೆಲ್ಸ್ ಕ್ರಿಕೆಟ್ ಆಸ್ಟ್ರೇಲಿಯಾದ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ಸ್ಯಾಮ್ಯುಯೆಲ್ಸ್ ಅವರ ವರ್ತನೆ ಮಿತಿ ಮೀರಿದ ಪ್ರಚೋಧನೆಯಿಂದ ಉಂಟಾಗಿರುವುದಾಗಿ ಪರಿಗಣಿಸಿದ ಕ್ರಿಕೆಟ್ ಆಸ್ಟ್ರೇಲಿಯಾದ, ಅವರಿಗೆ ವಾಗ್ದಂಡನೆ ನೀಡಿ ಶಿಕ್ಷೆಯಿಂದ ಮುಕ್ತಗೊಳಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇನ್ ವಾರ್ನ್ ಅವರಿಗೆ ಒಂದು ಪಂದ್ಯದ ನಿಷೇಧ ಹಾಗೂ 2.5 ಲಕ್ಷ ದಂಡ ವಿಧಿಸಲಾಗಿತ್ತು.