ಸಿಡ್ನಿ: ಆಸ್ಟ್ರೇಲಿಯಾದ ನಾಯಕ ಮೈಕಲ್ ಕ್ಲಾರ್ಕ್ ಮುಂಬರುವ ಐಪಿಎಲ್ ಆರನೇ ಆವೃತ್ತಿಯಲ್ಲಿ ಆಡುವ ಸಾಧ್ಯತೆಗಳು ಹೆಚ್ಚಾಗಿದೆ. ಏಳು ವಾರಗಳ ಕಾಲ ಏಪ್ರಿಲ್ ಹಾಗೂ ಮೇನಲ್ಲಿ ನಡೆಯಲಿರುವ ಈ ಪಂದ್ಯಾವಳಿಗಾಗಿ ಫೆ.3 ರಂದು ಚೆನೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಕ್ಲಾರ್ಕ್ ಈ ಬಾರಿಯ ಐಪಿಎಲ್‌ನಲ್ಲಿ ಆಡುವ ಸಾಧ್ಯತೆಗಳಿವೆ. ಕ್ಲಾರ್ಕ್ ಅವರು ಈ ಪಂದ್ಯಾವಳಿಯಲ್ಲಿ ಆಡುವುದು ಶೇ.100 ರಷ್ಟು ಖಚಿತವಾಗಿಲ್ಲ. ಆದರೆ, ಈ ಬಗ್ಗೆ ಕ್ಲಾರ್ಕ್ ಚಿಂತನೆ ನಡೆಸುತ್ತಿದ್ದು, ಈ ಪಂದ್ಯಾವಳಿಯಲ್ಲಿ ಆಡುವ ಆಸೆ ಕ್ಲಾರ್ಕ್ ಅವರಿಗಿದೆ ಎಂದು ಕ್ಲಾರ್ಕ್‌ನ ನಿರ್ವಾಹಕ ಜೇಮ್ಸ್ ಎರ್ಸ್ಕಿನ್ ತಿಳಿಸಿದರು.