ಲಂಡನ್: ಇತ್ತೀಚಿನ ದಿನಗಳಲ್ಲಿ ಭಾರತ ತಂಡದ ಕೆಟ್ಟ ಪ್ರದರ್ಶನದಿಂದ ಟೀಕೆಗಳ ಸುರಿಮಳೆಯನ್ನು ಎದುರಿಸಿದ್ದ ನಾಯಕ ಧೋನಿಗೆ ಇಂಗ್ಲೆಂಡ್ನ ಮಾಜಿ ನಾಯಕ ಜೆಫ್ರಿ ಬಾಯ್ಕಾಟ್ ತಮ್ಮ ಶಹಬಾಶ್ಗಿರಿ ನೀಡಿದ್ದಾರೆ. ಧೋನಿಯಂತಹ ನಾಯಕ ಹಾಗೂ ಆಟಗಾರನನ್ನು ಪಡೆಯಲು ಭಾರತ ತಂಡ ಅದೃಷ್ಟ ಮಾಡಿದೆ ಎಂದು ಬಾಯ್ಕಾಟ್ ತಿಳಿಸಿದ್ದಾರೆ. ಪ್ರಸ್ತುತ ಸ್ಥಿತಿಯಲ್ಲಿ ತಂಡ ಸಾಧಾರಣ ಪ್ರದರ್ಶನ ನೀಡುತ್ತಿದ್ದು, ತಂಡದಲ್ಲಿನ ಗುಣಮಟ್ಟದ ಕೊರತೆಯಿಂದ ಬರುತ್ತಿರುವ ಟೀಕೆಗಳನ್ನು ನಾಯಕ ಧೋನಿ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದು ಬಾಯ್ಕಾಟ್ ಹೇಳಿದ್ದಾರೆ.