ಮುಂಬೈ: ಈ ಬಾರಿಯ ರಣಜಿ ಪೈನಲ್ ಪಂದ್ಯದಲ್ಲಿ ಜಯ ಗಳಿಸಿದ್ದಕ್ಕೆ ತಮ್ಮ ತಂಡದ ಆಟಗಾರರ ಉತ್ತಮ ಪ್ರದರ್ಶನವೇ ಕಾರಣ ಎಂದು ಮುಂಬೈ ತಂಡದ ನಾಯಕ ಅಜಿತ್ ಅಗರ್ಕರ್ ತಿಳಿಸಿದ್ದಾರೆ.
'ಇಡೀ ಸರಣಿಯಲ್ಲಿ ನಮ್ಮ ತಂಡದ ಪ್ರತಿಯೊಬ್ಬ ಆಟಗಾರರೂ ಉತ್ತಮವಾಗಿ ಆಡಿದ್ದಾರೆ. ಒಬ್ಬರು ತಪ್ಪಿದರೆ ಒಬ್ಬರು ಉತ್ತಮವಾಗಿ ಆಡಿದ್ದರಿಂದಲೇ ನಾವು ಪಂದ್ಯಾವಳಿ ಗೆಲ್ಲಲು ಸಾಧ್ಯವಾಯಿತು' ಎಂದು ಅವರು ತಿಳಿಸಿದರು.
'ಅದರಲ್ಲೂ ವಿಶೇಷವಾಗಿ, ಸಚಿನ್ ತೆಂಡೂಲ್ಕರ್ ತಂಡಕ್ಕೆ ಆಗಮಿಸಿದ್ದು ನಮ್ಮ ತಂಡದಲ್ಲಿನ ಆತ್ಮವಿಶ್ವಾಸವನ್ನು ಮತ್ತಷ್ಟು ವೃದ್ಧಿಸಿತು' ಎಂದು ಅಗರ್ಕರ್ ಅಭಿಪ್ರಾಯ ವ್ಯಕ್ತಪಡಿಸಿದರು.