ಮತ್ತೆ ಫೀಲ್ಡಿಗೆ...

ಮತ್ತೆ ಫೀಲ್ಡಿಗೆ...
Updated on: 

ಎರಿನಾ ಶಾಕ್ ಈಗ ಮಾಡೆಲಿಂಗ್ ಲೋಕದಲ್ಲಿ ಹೊಸ ಅಲೆ ಎಬ್ಬಿಸಲು ಸಖತ್ ತಯಾರಿ ನಡೆಸಿದ್ದಾಳಂತೆ. ಖ್ಯಾತ ಫುಟ್ಬಾಲಿಗ ಕ್ರಿಶ್ಚಿಯಾನೋ ರೊನಾಲ್ಡೊ ಅವರೊಂದಿಗೆ ವರ್ಷದಿಂದ ಡೇಟಿಂಗ್ ನಡೆಸುತ್ತಿರುವ ಈಕೆಯಲ್ಲಿ ಇದೀಗ ಪ್ರೊಫೆಷನಲಿಸಂ ಎನ್ನುವುದು ಇದ್ದಕ್ಕಿದ್ದಂತೇ ಜಾಗೃತಿಯಾಗಿದೆ. ಮಾಡಲಿಂಗ್ ಲೋಕಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ರೊನಾಲ್ಡೊ ಮಾಯಾಜಾಲದಲ್ಲಿ ಸಿಕ್ಕಿಬಿದ್ದಿದ್ದ ಈಕೆ ಮಾಡೆಲಿಂಗ್‌ನಲ್ಲಿ ಮಿಂಚು ಹರಿಸಿ ಮಾಯವಾಗಿ ಕೆಲವು ವರ್ಷಗಳೇ ಕಳೆದಿದ್ದವು.  ಆದರೆ, ಈಗ ಆಕೆ ಮತ್ತೆ ಮಾಡೆಲಿಂಗ್‌ಗೆ ಬರುತ್ತಿರುವುದು ಆಕೆಯ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.


ವಾರ್ಮ್ ಮಾಡಿದ ವಾರ್ನ್ ಜೋಡಿ

ಎಲಿಜಬೆತ್ ಹರ್ಲೆ ಹಾಗೂ ಆಕೆಯ ಭಾವಿ ಪತಿ ಶೇನ್ ವಾರ್ನ್ ಇಬ್ಬರೂ ಇತ್ತೀಚೆಗೆ ಒಂದು ಸಾಧಾರಣ ಕಾಫಿ ಕೆಫೆಯಲ್ಲಿ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ.  ಆಸ್ಟಿನ್‌ನ ಬ್ರಿಗ್ಟನ್ ಪ್ರಾಂತ್ಯದ ಒಂದು ಸಾಧಾರಣ ಕಾಫಿ ಕೆಫೆಯಲ್ಲಿ ಈ ಇಬ್ಬರೂ ಇದ್ದಕ್ಕಿದ್ದಂತೇ ಪ್ರತ್ಯಕ್ಷವಾಗಿ ಎಲ್ಲರನ್ನೂ ಕೆಲಕಾಲ ದಂಗಾಗಿಸಿದರಂತೆ.
ತಮ್ಮನ್ನು ನೋಡಿ ಅವಾಕ್ಕಾದ ಮಂದಿಯನ್ನು ಕೆಫೆ ಪ್ರವೇಶಿಸಿದೊಡನೇ ಗುರುತಿಸಿದ ಶೇನ್, 'ನಾವೂ ನಿಮ್ಮಂತೆಯೇ ಕಾಫಿ ಕುಡಿಯಲು ಬಂದಿದ್ದೇವೆ. ರಿಲ್ಯಾಕ್ಸ್ ಪ್ಲೀಸ್...' ಎಂದು ಹೇಳಿದರಂತೆ. ಇದರಿಂದಾಗಿ ಜನರ ರೋಮಾಂಚನ ಕೊಂಚ ಇಳಿಮುಖವಾಯಿತಂತೆ. ವಾರ್ನ್ ಅಲ್ಲಿರುವವರೆಗೂ ಅಲ್ಲಿ ಹಬ್ಬದ ವಾತಾವರಣವಿತ್ತು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. ನಂತರ, ಸಾಲು ಸಾಲಾಗಿ ಬಂದು ಹಸ್ತಾಕ್ಷರ ಹಾಕಿಸಿಕೊಂಡು ಹೋದರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com