ಪರ್ತ್: ಭಾರತದ ವಿರುದ್ಧ ಬರುವ ತಿಂಗಳು ನಡೆಯಲಿರುವ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಗುರುವಾರ ತಂಡ ಪ್ರಕಟಿಸಲಿದೆ. 'ಜಾನ್ ಇನ್ವೇರರಿಟಿ ಅವರನ್ನೊಳಗೊಂಡ ಆಸ್ಟ್ರೇಲಿಯಾ ಕ್ರಿಕೆಟ್ ರಾಷ್ಟ್ರೀಯ ಆಯ್ಕೆ ಸಮಿತಿ, ಭಾರತ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡಲಿದೆ' ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಣೆಯಲ್ಲಿ ತಿಳಿಸಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಫೆ.22ರಿಂದ ಮಾರ್ಚ್ 26ರವರೆಗೆ ಚೆನ್ನೈ, ಹೈದರಾಬಾದ್, ಮೊಹಾಲಿ ಹಾಗೂ ಡೆಲ್ಲಿಯಲ್ಲಿ ಪಂದ್ಯಗಳು ನಡೆಯಲಿವೆ.