ಉತ್ತರಾಂಚಲ, ಚೆನ್ನೈಗೆ ಜಯ

Updated on: 

ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರದಿಂದ ಆರಂಭವಾದ ರಾಷ್ಟ್ರೀಯ ಫೆಡರೇಷನ್ ಕಪ್ ಬಾಸ್ಕೆಟ್‌ಬಾಲ್ ಪಂದ್ಯಾವಳಿಯ ಮೊದಲ ದಿನ ಪುರುಷರ ವಿಭಾಗದಲ್ಲಿ ಉತ್ತರಾಂಚಲದ ಒಎನ್‌ಜಿಸಿ ಮತ್ತು ಚೆನ್ನೈನ ಓವರ್‌ಸೀಸ್ ಬ್ಯಾಂಕ್ ತಂಡಗಳು ಶುಭಾರಂಭ ಮಾಡಿದವು.
ಒಎನ್‌ಜಿಸಿ ತಂಡ ಸಿಕಂದರ್‌ಬಾದ್‌ನ ದಕ್ಷಿಣ ರೇಲ್ವೆ ತಂಡವನ್ನು 83-56 ಅಂಕಗಳಿಂದ ಪರಾಭವಗೊಳಿಸಿತು. ಮೊದಲ ಕ್ವಾರ್ಟರ್ 21-21 ಮತ್ತು ದ್ವಿತೀಯ ಕ್ವಾರ್ಟರ್‌ನಲ್ಲಿ 16-18 ಅಂಕಗಳೊಂದಿಗೆ ಪಂದ್ಯ ಸಮಬಲದಲ್ಲಿ ಸಾಗಿತ್ತು. ಆದರೆ, ಮೂರನೇ ಮತ್ತು ನಾಲ್ಕನೇ ಕ್ವಾರ್ಟರ್‌ಗಳಲ್ಲಿ 20-09, 20-08 ಪಾರಮ್ಯ ಮರೆದ ಒಎನ್‌ಜಿಸಿ ಪಂದ್ಯ ಜಯಿಸುವಲ್ಲಿ ಯಶಸ್ವಿಯಾಯಿತು. ಎರಡನೇ ಪಂದ್ಯದಲ್ಲಿ ಚೆನ್ನೈನ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ತಂಡ ಹರ್ಯಾಣದ ಜಿಂದ್ ಡಿಸ್ಟ್ ತಂಡವನ್ನು 96-48 ಅಂಕಗಳಿಂದ ಪರಾಭವಗೊಳಿಸಿತು. ಪಂದ್ಯದಲ್ಲಿ ಮೊದಲ ಕ್ವಾರ್ಟರ್ 28-21 ಕೊಂಚ ಪೈಪೋಟಿಂದ ಕೂಡಿತ್ತು. ಆದರೆ ನಂತರ ಮೂರು ಕ್ವಾರ್ಟರ್‌ಗಳಲ್ಲಿ ಚೆನ್ನೈ ಪಾರಮ್ಯ ಮೆರೆದು ಜಯ ಕಂಡುಕೊಂಡಿತು. ಇನ್ನು ಮಹಿಳೆಯರ ವಿಭಾಗದ ಮೊದಲ ಪಂದ್ಯದಲ್ಲಿ ತಮಿಳುನಾಡು ತಂಡ ಆಂಧ್ರಪ್ರದೇಶವನ್ನು 60-20 ಭಾರಿ ಅಂತರದಿಂದ ಸೋಲಿಸಿತು.
ತೀವ್ರ ಪೈಪೋಟಿಯಿಂದ ಕೂಡಿದ್ದ ಮತ್ತೊಂದು ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ಚತ್ತಿಸ್‌ಗಡವನ್ನು 73-62 ಅಂತರಿಂದ ಸೋಲಿಸಿತು. ಮೊದಲ ಕ್ವಾರ್ಟರ್‌ನಲ್ಲಿ 19-17ರಿಂದ ಮುನ್ನಡೆ ಸಾಧಿಸಿದ್ದ ಚತ್ತೀಸ್‌ಗಡ ನಂತರ ಎರಡನೇ ಮತ್ತು 3ನೇ ಕ್ವಾರ್ಟರ್‌ಗಳಲ್ಲಿ 18-22, 08-21ರಿಂದ ಹಿನ್ನಡೆ ಅನುಭವಿಸಿತು. 4ನೇ ಮತ್ತು ಅಂತಿಮ ಕ್ವಾರ್ಟರ್‌ನಲ್ಲಿ 17-13ರಿಂದ ಕೊಂಚ ಪ್ರತಿರೋಧ ನೀಡಿತಾದರೂ ಜಯ ಸಾಧಿಸಲು ಸಾಧ್ಯವಾಗಲಿಲ್ಲ. ಮಹಿಳೆಯರ ವಿಭಾಗದ ದಿನದ ಮೂರನೇ ಪಂದ್ಯದಲ್ಲಿ ಕೇರಳ ತಂಡ ಕರ್ನಾಟಕವನ್ನು 85-79 ಅಂಕಗಳ ಅಂತರದಿಂದ ಸೋಲಿಸಿತು. ಪಂದ್ಯದ ಎರಡನೇ ಕ್ವಾರ್ಟರ್‌ನಲ್ಲಿ 18-33 ಮಾತ್ರ ಉತ್ತಮ ಹೋರಾಟ ನಡೆಸಿದ ಕರ್ನಾಟಕ ಮೊದಲ ಮತ್ತು ಕೊನೆಯ ಎರಡು ಕ್ವಾರ್ಟರ್‌ಗಳಲ್ಲಿ ಹಿನ್ನಡೆ ಅನುಭವಿಸಿದ್ದು ಸೋಲಿಗೆ ಕಾರಣವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com