ಪುಣೆ: ಭಾರತದ ಪೌರತ್ವ ಒಪ್ಪಿಕೊಳ್ಳುವುದು ನನ್ನ ಜೀವನದ ಕಠಿಣ ತೀರ್ಮಾನಗಳಲ್ಲೊಂದಾಗಿತ್ತು, ಎಂದು ಭಾರತ ಫುಟ್ಬಾಲ್ ತಂಡದಲ್ಲಿ ಸ್ಥಾನ ಪಡೆದಿರುವ ಮೊದಲ ಭಾರತೀಯ ಮೂಲದ ವ್ಯಕ್ತಿ ಅರತಾ ಇಜುಮಿ ಬುಧವಾರ ಹೇಳಿದ್ದಾರೆ.
ಜಪಾನ್‌ನಲ್ಲಿ ಜನಿಸಿರುವ ಭಾರತೀಯ ಮೂಲದ ಅರತಾ, ಪೆಲೆಸ್ತೇನ್ ವಿರುದ್ಧ ನಡೆಯಲಿರುವ ಸಹಾರ್ಧ ಪಂದ್ಯಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
'ಭಾರತೀಯ ಪೌರತ್ವ ಒಪ್ಪಿಕೊಂಡಿರುವುದು ನನ್ನ ಜೀವನದ ಕಠಿಣ ತೀರ್ಮಾನಗಳಲ್ಲೊಂದು. ಈ ಬಗ್ಗೆ ನಾನು ಸಾಕಷ್ಟು ವಿಚಾರಿಸಿದೆ. ಹಲವಾರು ಜನರನ್ನು ಸಂಪರ್ಕಿಸಿ ಈ ಬಗ್ಗೆ ಮಾತನಾಡಿದೆ. ಅಂತಿಮವಾಗಿ ಭಾರತ ಪೌರತ್ವ ಒಪ್ಪಿಕೊಳ್ಳಲು ತೀರ್ಮಾನಿಸಿದೆ. ಅಲ್ಲದೆ, ಈ ಕುರಿತು ನನಗೆ ಸಂತೋಷವೆನಿಸುತ್ತಿದೆ' ಎಂದು ಅರತಾ ಹೇಳಿದ್ದಾರೆ.