ಕ್ರೀಡೆ

ವಿಂಡೀಸ್ ಮಡಿಲಿಗೆ ಸರಣಿ

ವಿಂಡೀಸ್ ಮಡಿಲಿಗೆ ಸರಣಿ
Published On :

ಆಂಟಿಗುವಾ: ದುರ್ಬಲ ಜಿಂಬಾಬ್ವೆ ವಿರುದ್ಧ ತಮ್ಮ ಗೆಲುವಿನ ಸವಾರಿ ಮುಂದುವರಿಸಿದ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ, ಸೋಮವಾರ ನಡೆದ 2ನೇ ಟಿ20 ಪಂದ್ಯದಲ್ಲಿ 41 ರನ್‌ಗಳ ಜಯ ಸಾಧಿಸುವುದರೊಂದಿಗೆ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಎರಡು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದಿದ್ದ ಕೆರಿಬಿಯನ್ನರು ಎರಡನೇ ಪಂದ್ಯವನ್ನು ಗೆದ್ದು ಜಿಂಬಾಂಬ್ವೆ ತಂಡವನ್ನು ವೈಟ್‌ವಾಶ್ ಮಾಡಿದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ವಿಂಡೀಸ್ ತಂಡ, ತಮ್ಮ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕಿತು.
ಆರಂಭಿಕರಾಗಿ ಕಣಕ್ಕಿಳಿದ ಸಿಮನ್ಸ್ ಮೊದಲ ಪಂದ್ಯದಲ್ಲಿ ನೀಡಿದ ಉತ್ತಮ ಪ್ರದರ್ಶನವನ್ನೇ ಮುಂದುವರಿಸಿದರು.39 ಎಸೆತಗಳನ್ನು ಎದುರಿಸಿದ ಸಿಮನ್ಸ್ 1 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದಂತೆ 41 ರನ್ ಗಳಿಸಿದರು.
ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್ ಚಾರ್ಲ್ಸ್ ಕೇವಲ 8 ರನ್‌ಗಳನಷ್ಟೇ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಡ್ವೇನ್ ಬ್ರಾವೊ 24 ರನ್‌ಗಳಿಸಿದರು. ನಂತರ ಬಂದ ಬ್ರಾನ್‌ವೆಲ್ ಕೇವಲ 7 ರನ್‌ಗಳಿಸಿದರು. ಆಮೇಲೆ ಬಂದ ಪೊಲಾರ್ಡ್ ಉತ್ತಮ ಪ್ರದರ್ಶನ ನೀಡಿದರಲ್ಲದೇ ತಂಡದ ಮೊತ್ತ 150ರ ಗಡಿ ದಾಟುವಂತಾಯಿತು. 24 ಎಸೆತಗಳನ್ನು ಎದುರಿಸಿದ ಪೊಲಾರ್ಡ್ 3 ಬಾಂಡರಿ ಹಾಗೂ 3 ಸಿಕ್ಸರ್ ಸೇರಿದ ಅಜೇಯ 45 ರನ್ ಗಳಿಸಿದರು.
ನಂತರ ವಿಂಡೀಸ್ ಗುರಿ ಬೆನ್ನಟ್ಟಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 117ರನ್‌ಗಳನಷ್ಟೇ ಗಳಿಸಲು ಶಕ್ತವಾಯಿತು. ಜಿಂಬಾಂಬ್ವೆ ತಂಡದ ಪರ ಮಸಕಜಾ ಅಜೇಯ 53ರನ್‌ಗಳಿಸಿದ್ದು ಹೊರತು ಪಡಿಸಿದರೆ ಉಳಿದ ಯಾವುದೇ ಬ್ಯಾಟ್ಸ್‌ಮನ್ ಹೆಚ್ಚು ಹೊತ್ತ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 51 ಎಸೆತಗಳನ್ನು ಎದುರಿಸಿದ ಮಸಕಜಾ 6 ಬೌಂಡರಿ ಸೇರಿದಂತೆ 53 ರನ್‌ಗಳಿಸಿದರಲ್ಲದೇ ಅಜೇಯರಾಗುಳಿದರು.
ಅಂತಿಮವಾಗಿ, ಜಿಂಬಾಂಬ್ವೆ 41 ರನ್‌ಗಳ ಸೋಲು ಅನುಭವಿಸಬೇಕಾಯಿತು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ 158/7 (20 ಓವರ್)
ಪೊಲಾರ್ಡ್ ಅಜೇಯ 45 (24)
ಸಿಮನ್ಸ್ 41 (39)
ಬೌಲಿಂಗ್: ಮುಶಾಂಗ್ವೆ 33/2, ಮುತೊಂಬೊಜಿ 28/2
ಜಿಂಬಾಂಬ್ವೆ 117/6 (20 ಓವರ್)
ಮಸಕಜಾ 53 (51)
ಎರ್ವಿನ್ 15 (16)
ಬೌಲಿಂಗ್: ಬದ್ರಿ 17/3, ಬ್ರಾವೊ 15/2

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.