ಕ್ರೀಡೆ

ಏಷ್ಯನ್ ಟೂರ್ನಿ: ಭಾರತಕ್ಕೆ ಪಾಕಿಸ್ತಾನದ ಸ್ನೂಕರ್ ತಾರೆಗಳು

Published On :

ನವದೆಹಲಿ: ಭಾರತದ ಸ್ನೂಕರ್ ತಾರೆಗಳಿಗೆ ಪಾಕಿಸ್ತಾನಕ್ಕೆ ತೆರಳಲು ಮತ್ತು ಪಾಕಿಸ್ತಾನದ ಸ್ನೂಕರ್ ತಾರೆಗಳು ಭಾರತ ಪ್ರವಾಸ ಬೆಳೆಸಲು ಭದ್ರತಾ ಸಮಸ್ಯೆಗಳು ಎದುರಾಗಿಲ್ಲ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಲಿದೆ. ಇಂದೋರ್‌ನಲ್ಲಿ ನಡೆಯಲಿರುವ 21 ವರ್ಷದೊಳಗಿನ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು, ಈಗ ಪಾಕಿಸ್ತಾನದ ನಾಲ್ವರು ಸ್ನೂಕರ್ ತಾರೆಗಳು ಭಾರತ ಪ್ರವಾಸ ಬೆಳೆಸಲು ಸಿದ್ಧವಾಗಿದ್ದಾರೆ. ಈ ಕುರಿತು ಪಾಕಿಸ್ತಾನ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಅಸೋಸಿಯೇಷನ್ ಅಧ್ಯಕ್ಷ ಅಲಾಮಗಿರಿ ಎ ಶೇಖ್ ತಿಳಿಸಿದ್ದಾರೆ.
'ಏಪ್ರಿಲ್ 1ರಿಂದ 7ರವರೆಗೆ ನಡೆಯಲಿರುವ 21 ವರ್ಷದೊಳಗಿನ ಏಷ್ಯನ್ ಸ್ನೂಕರ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ನಾಲ್ವರು ಆಟಗಾರರು ಭಾಗವಹಿಸುವುದು ಖಚಿತ. ಈ ಪಂದ್ಯಾವಳಿಯಲ್ಲಿ ಭಾಗವಹಿಸವುದರಿಂದ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಕ್ಕೆ ಯಾವುದೇ ರೀತಿ ಅಡ್ಡಿಯಾಗುವುದಿಲ್ಲ. ಆಟಗಾರರು ವೀಸಾ ಪಡೆಯಲು ನಾವು ಶೀಘ್ರದಲ್ಲೇ ಅರ್ಜಿಸಲ್ಲಿದ್ದೇವೆ. ವೀಸಾ ದೊರಕಲಿದೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ' ಎಂದು ಪಾಕಿಸ್ತಾನದ ಶೇಖ್ ಕರಾಚಿಯಿಂದ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. 'ಏಷ್ಯನ್ ಕಾನ್ಫೆಡರೇಷನ್ ಬಿಲಿಯರ್ಡ್ಸ್ ಸ್ಪೋರ್ಟ್ಸ್ ಸಂಸ್ಥೆ ನಮ್ಮನ್ನು ಆಹ್ವಾನಿಸಿದೆ. ಮೊಹ್ಮದ್ ಮಜೀದ್ ಮತ್ತು ಹಮ್ಜಾ ಅಕ್ಬರ್ ಅವರೊಂದಿಗೆ ಇನ್ನಿಬ್ಬರು ಆಟಗಾರರು ಪಂದ್ಯಾವಳಿಗೆ ತೆರಳಲಿದ್ದು, 1994ರ ವಿಶ್ವ ಸ್ನೂಕರ್ ಚಾಂಪಿಯನ್ ಮೊಹ್ಮದ್ ಯೂಸುಫ್ ಅವರು ತಂಡದ ತರಬೇತುದಾರರಾಗಿದ್ದಾರೆ. ಮಾರ್ಚ್ 28 ಅಥವಾ 29ರಂದು  ಆಟಗಾರರು ತೆರಳಲಿದ್ದಾರೆ' ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.