ಕ್ರೀಡೆ

ಸರ್ದಾರ್, ರೀತುಗೆ ಎಎಚ್‌ಎಫ್ ಪ್ರಶಸ್ತಿ

Published On :

ನವದೆಹಲಿ: ಭಾರತ ರಾಷ್ಟ್ರೀಯ ಹಾಕಿ ತಂಡದ ನಾಯಕರಾದ ಸರ್ದಾರ್ ಸಿಂಗ್ (ಪುರುಷರ) ಮತ್ತು ರೀತು ರಾಣಿ (ವನಿತೆಯರ) ಏಷ್ಯನ್ ಹಾಕಿ ಫೆಡರೇಷನ್ (ಎಎಚ್‌ಎಫ್) ವರ್ಷದಆಟಗಾರ ಮತ್ತು ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಳೆದ ಶನಿವಾರ ಕೌಲಾಲಂಪುರದಲ್ಲಿ ನಡೆದ ತನ್ನ ಮಧ್ಯಂತರ ಮಹಾಸಭೆಯಲ್ಲಿ ಸರ್ದಾರ್ ಮತ್ತು ರೀತು ಅವರಿಗೆ ಎಎಚ್‌ಎಫ್ ಈ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಬರುವ ವಾರ ನಡೆಯಲಿರುವ ವಿಶೇಷ ಕಾರ್ಯಕ್ರಮವೊಂದರಲ್ಲಿ ಸರ್ದಾರ್ ರೀತು ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು. ಈ ಗೌರವಕ್ಕೆ ಕಾರಣರಾದ ಇಬ್ಬರಿಗೂ ರಾಷ್ಟ್ರೀಯ ಹಾಕಿ ಫೆಡರೇಷನ್ ತಲಾ ರು 1 ಲಕ್ಷ ಹಣವನ್ನು ಬಹುಮಾನವಾಗಿ ನೀಡಲಿದೆ ಎಂದು ಹಾಕಿ ಇಂಡಿಯಾ ತಿಳಿಸಿದೆ.
'ಏಷ್ಯನ್ ಹಾಕಿ  ಪ್ರತಿಷ್ಠಿತ ಪ್ರಶಸ್ತಿಗಳಿಗೆ ನಮ್ಮ ಇಬ್ಬರು ತಾರೆಗಳು ಆಯ್ಕೆಯಾಗಿದ್ದಾರೆ. ಇದೊಂದು ಗೌರವದ ವಿಷಯ. ಭವಿಷ್ಯದಲ್ಲಿ ಭಾರತದ ಇನ್ನೂ ಹೆಚ್ಚಿನ ಹಾಕಿ ಆಟಗಾರರು ಇಂತಹ ಪ್ರಶಸ್ತಿಗಳನ್ನು ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ' ಎಂದು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಬಾತ್ರಾ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.