ಐ- ಲೀಗ್ಗೆ ಬೆಂಗಳೂರು ಸಜ್ಜು
ಬೆಂಗಳೂರು: ಐ-ಲೀಗ್ ಎರಡನೇ ಡಿವಿಷನ್ನ ಸಿ ಗುಂಪಿನ ಪಂದ್ಯಗಳ ವೇಳಾ ಪಟ್ಟಿ ಬಿಡುಗಡೆಯಾಗಿದ್ದು, ಮಾ.11 ರಿಂದ ಮಾ.27ರವರೆಗೆ ನಗರದ ರಾಜ್ಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಹಾಗೂ ಐ-ಲೀಗ್ ಮುಖ್ಯಸ್ಥ ಎ.ಆರ್.ಕಲೀಲ್ ತಿಳಿಸಿದ್ದಾರೆ. ಗುರುವಾರ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಕಲೀಲ್, ಪಂದ್ಯಾವಳಿಯ ವಿವರಣೆಯನ್ನು ನೀಡಿದರು.
ಐ-ಲೀಗ್ 2ನೇ ಡಿವಿಷನ್ನಲ್ಲಿ ಎ,ಬಿ ಮತ್ತು ಸಿ ಗುಂಪುಗಳಿದ್ದು, ಎ ಮತ್ತು ಬಿ ಗುಂಪಿನ ಪಂದ್ಯಗಳು ಕ್ರಮವಾಗಿ ಬೋಪಾಲ್ ಹಾಗೂ ಇಂದೋರ್ನಲ್ಲಿ ನಡೆಯಲಿದ್ದು, ಸಿ ಗುಂಪಿನ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ.
2ನೇ ಡಿವಿಷನ್ನ ಮೂರು ಗುಂಪಿನಿಂದ ತಲಾ 2 ತಂಡಗಳಂತೆ ಒಟ್ಟು 6 ತಂಡಗಳು ಅಂತಿಮ ಸುತ್ತಿಗೆ ಆಯ್ಕೆಯಾಗಲಿವೆ. ಈ ಆರು ತಂಡಗಳು ಅಂತಿಮ ಸುತ್ತಿನಲ್ಲಿ ಡಬಲ್ ರೌಂಡ್ ರಾಬಿನ್ ಪಂದ್ಯಗಳನ್ನಾಡಲಿದ್ದು, ಈ ಸುತ್ತಿನಲ್ಲಿ ಮೊದಲೆರಡು ಸ್ಥಾನಗಳಿಸುವ ತಂಡಗಳು ಮುಂದಿನ ವರ್ಷದ ಐ-ಲೀಗ್ನ ಪ್ರಮುಖ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಸಿ ಗುಂಪಿನಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಈ ಗುಂಪಿನಲ್ಲಿ ಬೆಂಗಳೂರಿನ ಸೌತ್ ಯುನೈಟೆಡ್ ತಂಡವೂ ಭಾಗವಹಿಸಲಿದೆ. ಈ 8 ತಂಡಗಳಲ್ಲಿ ಮೊದಲೆರಡು ತಂಡಗಳು ಮುಂದಿನ ಹಂತಕ್ಕೆ ಆಯ್ಕೆಯಾಗಲಿವೆ.
ಮಾ.13ರಂದು ಕೇವಲ ಒಂದು ಪಂದ್ಯ ನಡೆಯಲಿದ್ದು, ಉಳಿದ ಎಲ್ಲಾ ದಿನಗಳಲ್ಲೂ ಮಧ್ಯಾಹ್ನ 2 ಗಂಟೆ ಹಾಗೂ ಸಂಜೆ 4 ಗಂಟೆಗೆ ಎರಡು ಪಂದ್ಯಗಳು ನಡೆಯಲಿವೆ.
ಪಂದ್ಯಾವಳಿಯಲ್ಲಿ ಪ್ರತಿ ಪಂದ್ಯದಲ್ಲಿ ಜಯ ಸಾಧಿಸಿದ ತಂಡಕ್ಕೆ 3 ಅಂಕ, ಡ್ರಾ ಸಾಧಿಸಿದರೆ ಉಭಯ ತಂಡಗಳಿಗೆ ತಲಾ 1 ಅಂಕ ನೀಡಲಾಗುವುದು.
ಎಲ್ಲಾ ಪಂದ್ಯಗಳಿಗೆ ಟಿಕೆಟ್ ದರ ನಿಗಧಿಪಡಿಸಲಾಗಿದ್ದು, ರು. 20, 50 ಹಾಗೂ 100 ಮೊತ್ತದ ಟಿಕೆಟ್ ನೀಡಲಾಗುವುದು ಎಂದು ಕಲೀಲ್ ತಿಳಿಸಿದರು.
ಅಕಾಡೆಮಿ ಆರಂಭ: 2017ರ ಅಂಡರ್ 17 ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗೆ ಭಾರತ ತಯಾರಿ ನಡೆಸುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಫುಟ್ಬಾಲ್ ಸಂಸ್ಥೆ, ಫುಟ್ಬಾಲ್ ಅಕಾಡೆಮಿಯನ್ನು ಪ್ರಾರಂಭಿಸುತ್ತಿದೆ. ಅಕಾಡೆಮಿಯಲ್ಲಿ ತರಬೇತುದಾರರಿಗೆ ವಿದೇಶಿ ಕೋಚ್ಗಳಿಂದ ಉನ್ನತ ಮಟ್ಟದ ತರಬೇತಿಗಳನ್ನು ನೀಡಲಾಗುವುದು. ಅಕಾಡೆಮಿಯಲ್ಲಿ 14 ವರ್ಷದೊಳಗಿನ 30 ಫುಟ್ಬಾಲ್ ಆಟಗಾರರನ್ನು ಆಯ್ಕೆ ಮಾಡಿ ಅವರಿಗೆ ಉಚಿತ ತರಬೇತಿ, ಶಿಕ್ಷಣ ಹಾಗೂ ಊಟ ವಸತಿಯನ್ನು ನೀಡಲಾಗುವುದು ಎಂದು ಕಲೀಲ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

