'ಸುದ್ದಿ ಕೇಳಿ ತಲ್ಲಣಗೊಂಡೆ'

ನವದೆಹಲಿ: ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ವಿಜೇಂದರ್ ಈ ಬಗ್ಗೆ ತಲ್ಲಣ ವ್ಯಕ್ತಪಡಿಸಿದ್ದಾರೆ.
'ಸುದ್ದಿ ಕೇಳಿದ ತಕ್ಷಣ ನಾನು ತಲ್ಲಣಗೊಂಡೆ. ಸದ್ಯಕ್ಕೆ ನಾನು ಕಾರ್ಯನಿಮಿತ್ತ ಮುಂಬೈಗೆ ಆಗಮಿಸಿದ್ದೇನೆ. ನನ್ನ ಪತ್ನಿಯ ಕಾರಿನಲ್ಲಿ ನನ್ನ ಸ್ನೇಹಿತರು ನನ್ನನ್ನು ವಿಮಾನ ನಿಲ್ದಾನಕ್ಕೆ ತಲುಪಿಸಿದರು. ಆದರೆ, ಕಾರು ಜಿರಾಕ್ಪುರ ಫ್ಲಾಟ್ಗೆ ಹೇಗೆ ತಲುಪಿತು ಎಂಬುದೇ ನನಗೆ ಗೊತ್ತಾಗಿಲ್ಲ' ಎಂದು ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ವಿಜಿ ತಿಳಿಸಿದ್ದಾರೆ.
'ನನ್ನನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟ ಬಳಿಕ ಕಾರನ್ನು ನನ್ನ ಸ್ನೇಹಿತರು ಉಪಯೋಗಿಸಿರಬಹುದು. ಆದರೆ, ಪ್ರಕರಣದಲ್ಲಿ ನನ್ನ ಹೆಸರನ್ನು ಹೇಗೆ ಎಳೆಯಲಾಯಿತು ಎಂಬುದು ನನಗೆ ಅರ್ಥವಾಗುತ್ತಿಲ್ಲ. ನನ್ನ ಕಾರಿನಲ್ಲಿ ಯಾವುದೇ ರೀತಿಯ ನಿಷೇಧಿತ ಮಾದಕ ವಸ್ತು ವಶಪಡಿಸಿಕೊಂಡಿಲ್ಲ ಎಂದು ಪೊಲೀಸರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಪೊಲೀಸರು ನನ್ನನ್ನು ಇದುವರೆಗೂ ಸಂಪರ್ಕಿಸಿಲ್ಲ' ಎಂದಿದ್ದಾರೆ ವಿಜಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


