ಕ್ರೀಡೆ

'ಏಕದಿನ ಪ್ರಶಸ್ತಿ'ಗೆ ಹರಿಣಗಳ ಪಡೆ ಭಾಜನವಾಗುವುದೇ ?

Published On :

ದುಬೈ: ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಐದು ದಿನಗಳ ಸರಣಿ ಆರಂಭವಾಗಲಿದ್ದು, ಈ ಸರಣಿಯಲ್ಲಿ ಹರಿಣಗಳು 5-0 ಅಂತರದಲ್ಲಿ ಗೆದ್ದುಕೊಂಡರೆ, ಅದು ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಂದು ಕೂರುತ್ತದೆ. ಸದ್ಯಕ್ಕೆ ಭಾರತ, ಈ ಪಟ್ಟಿಯ ಮೊದಲ ಸ್ಥಾನದಲ್ಲಿದೆ.  ಸದ್ಯಕ್ಕೆ ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ನಾಲ್ಕನೇ ಸ್ಥಾನದಲ್ಲಿದೆ. ಇಂಗ್ಲೆಂಡ್ 2ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿದೆ. ಹೀಗೆ, ನಾಲ್ಕನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ಹೋಗಬೇಕಾದಲ್ಲಿ ಹರಿಣಗಳ ಪಡೆ, ಪಾಕಿಸ್ತಾನದ ವಿರುದ್ಧ 'ವೈಟ್ ವಾಷ್‌' (5-0 ಅಂತರದ) ಗೆಲುವು ಪಡೆಯಲೇಬೇಕು.
ಮತ್ತೊಂದು ಗರಿ: ನಿರ್ದಿಷ್ಟ ಕ್ರಿಕೆಟ್ ಋತುವಿನಲ್ಲಿ ಏಕದಿನ ರ್ಯಾಂಕಿಂಗ್ ಪಟ್ಟಿಯ ಅಗ್ರಸ್ಥಾನ ಗಳಿಸುವ ತಂಡಕ್ಕೆ ನೀಡಲಾಗುವ 'ಏಕದಿನ ಪ್ರಶಸ್ತಿ'ಯನ್ನು ದಕ್ಷಿಣ ಆಫ್ರಿಕಾ ಈ ಮೊದಲು ಎರಡು ಬಾರಿ ಪಡೆದಿದೆ. 2008ರಲ್ಲಿ ಈ ಗೌರವವನ್ನು ಪಡೆದಿದ್ದ ಅದು, 2009ರಲ್ಲೂ ಪಡೆದಿತ್ತು.
ಈಗ, 2012-13ನೇ ವರ್ಷದ ಕ್ರಿಕೆಟ್ ಋತು ಏಪ್ರಿಲ್‌ಗೆ ಕೊನೆಗೊಳ್ಳಲಿದೆ. ಆ ಹೊತ್ತಿಗೆ, ದಕ್ಷಿಣ ಆಫ್ರಿಕಾ-ಪಾಕಿಸ್ತಾನ ಏಕದಿನ ಸರಣಿಯೂ ಮುಗಿದಿರುತ್ತದೆ. ಹಾಗಾಗಿ, ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ, ಪಾಕಿಸ್ತಾನವನ್ನು 5-0 ಅಂತರದಲ್ಲಿ ಜಯಗಳಿಸಿದರೆ, ನಂಬರ್‌ವನ್ ಪಟ್ಟಕ್ಕೆ ಬರುವುದಷ್ಟೇ ಅಲ್ಲ, 'ಏಕದಿನ ಪ್ರಶಸ್ತಿ'ಯ ಗೌರವವನ್ನು 3ನೇ ಬಾರಿಗೆ ಪಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.