ಕ್ರೀಡೆ

ಟಿ20 ಟೂರ್ನಿ: ಕರ್ನಾಟಕಕ್ಕೆ ವಿನಯ್ ನಾಯಕ

Published On :

ಬೆಂಗಳೂರು: ವೇಗದ ಬೌಲರ್ ಆರ್. ವಿನಯ್ ಕುಮಾರ್ ಸೈಯೀದ್ ಮುಸ್ತಾಕ್ ಅಲಿ ಟ್ರೋಫಿ ದಕ್ಷಿಣ ವಲಯ ಟಿ20 ಪಂದ್ಯಾವಳಿಯಲ್ಲಿ ರಾಜ್ಯ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಪಂದ್ಯಾವಳಿ ಮಾರ್ಚ್ 17ರಿಂದ 22ರವಗೆ ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಲ್ಲಿ ನಡೆಯಲಿದೆ. ಸ್ಟುವರ್ಟ್ ಬಿನ್ನಿ ಉಪ ನಾಯಕರಾಗಿರುವ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ಸುಬ್ಬಯ್ಯ ಪಿಳ್ಳೈ ಪಂದ್ಯಾವಳಿಗೆ ಈ ಮುನ್ನ ಆಯ್ಕೆಯಾಗಿದ್ದ ಗಣೇಶ್ ಸತೀಶ್, ಜೆ. ಸುಚಿತ್ ಹಾಗೂ ಎಸ್.ಎಲ್ ಅಕ್ಷಯ್ ಬದಲಾಗಿ ಕುನಾಲ್ ಕಪೂರ್, ಕೆ. ಗೌತಮ್ ಹಾಗೂ ರೋನಿತ್ ಮೋರೆ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.
ತಂಡ: ವಿನಯ್ ಕುಮಾರ್ (ನಾಯಕ), ಸ್ಟುವರ್ಟ್ ಬಿನ್ನಿ (ಉಪ ನಾಯಕ), ರಾಬಿನ್ ಉತ್ತಪ್ಪ, ಮಾಯಾಂಕ್ ಅಗರ್ವಾಲ್, ಕೆ.ಎಲ್ ರಾಹುಲ್, ಮನೀಶ್ ಪಾಂಡೆ, ಸಿ.ಎಂ ಗೌತಮ್ (ವಿಕೆಟ್ ಕೀಪರ್), ಕರುಣ್ ನಾಯರ್, ಅಭಿಮನ್ಯು ಮಿಥುನ್, ಕೆ.ಪಿ ಅಪ್ಪಣ, ಎಚ್.ಎಸ್ ಶರತ್, ಕೆ. ಗೌತಮ್, ಕುನಾಲ್ ಕಪೂರ್, ರೋನಿತ್ ಮೋರೆ ಹಾಗೂ ಅಮಿತ್ ವರ್ಮಾ. ಜೆ, ಅರುಣ್ಕುಮಾರ್ (ಬ್ಯಾಟಿಂಗ್ ತರಬೇತುದಾರ), ಮನ್ಸೂರ್ ಅಲಿ ಖಾನ್ (ಬೌಲಿಂಗ್ ತರಬೇತುದಾರ), ಶರಣ್ (ದೈಹಿಕ ತಜ್ಞ), ವಿವೇಕ್ ರಾಮಕೃಷ (ಟ್ರೈನರ್), ಸಂತೋಷ್ (ವಿಡಿಯೋ ವಿಶ್ಲೇಷಕ) ಹಾಗೂ ಜೆ ಅಭಿರಾಮ್ (ಮ್ಯಾನೇಜರ್).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.