ಡ್ರಾದಲ್ಲಿ ಅಂತ್ಯಗೊಂಡ ನ್ಯೂಜಿಲೆಂಡ್ - ಇಂಗ್ಲೆಂಡ್ ಟೆಸ್ಟ್
ಡುನೆದಿನ್: ಮೊದಲ ಇನಿಂಗ್ಸ್ನಲ್ಲಿ ನ್ಯೂಜಿಲೆಂಡ್ ಬೌಲರ್ಗಳ ದಾಳಿಗೆ ತತ್ತರಿಸಿದ್ದ ಆಂಗ್ಲರು ಪಂದ್ಯದ ಐದನೇ ದಿನ ಸಂಪೂರ್ಣವಾಗಿ ಬ್ಯಾಟಿಂಗ್ ನಡೆಸಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಪಂದ್ಯದ ನಾಲ್ಕನೇ ದಿನ ಬ್ಯಾಟಿಂಗ್ ಆರಂಭಿಸಿದ್ದ ಆಂಗ್ಲರು ನಾಯಕ ಕುಕ್ ಹಾಗೂ ಕಾಂಪ್ಟನ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ದಿನಾಂತ್ಯಕ್ಕೆ 234ರನ್ಗಳಿಗೆ 1 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ನೈಟ್ ವಾಚ್ಮನ್ ಆಗಿ ಕಣಕ್ಕಿಳಿದಿದ್ದ ಫಿನ್ ಐದನೇ ದಿನ ಬ್ಯಾಟಿಂಗ್ ಮುಂದುವರಿಸಿ ಉತ್ತಮ ಪ್ರದರ್ಶನ ನೀಡಿದರು.
ಕಾಂಪ್ಟನ್ ಹಾಗೂ ಫಿನ್ ಜೋಡಿ, ಕೇವಲ 31ರನ್ ಕಲೆ ಹಾಕಿತು ಈ ವೇಳೆ 117 ರನ್ ದಾಖಲಿಸಿದ್ದ ಕಾಂಪ್ಟನ್ ವಾಂಗ್ನರ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಹೊರನಡೆದರು. ನಂತರ ಬಂದ ಟ್ರಾಟ್, ಫಿನ್ ಜತೆಗೆ 90 ರನ್ಗಳ ಜತೆಯಾಟ ನೀಡಿದರು. ಈ ವೇಳೆ 52ರನ್ಗಳಿಸಿದ್ದ ಟ್ರಾಟ್ ವಾಂಗ್ನರ್ ಎಸೆತದಲ್ಲಿ ಕಾಟ್ ಅಂಡ್ ಬೌಲ್ ಆಗುವ ಮೂಲಕ ಹೊರ ನಡೆದರು. ನಂತರ ಬಂದ ಪೀಟರ್ಸನ್ ಕೂಡ ಕೇವಲ 12 ರನ್ಗಳಿಸಿ ವಾಂಗ್ನರ್ ಎಸೆತದಲ್ಲಿ ವಾಲ್ಟಿಂಗ್ಗೆ ಕ್ಯಾಚ್ ನೀಡಿ ಹೊರ ನಡೆದರು.ತಂಡದ ಮೊತ್ತ 386 ರನ್ ಆಗಿದ್ದಾಗ 56ರನ್ಗಳಿಸಿ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಫಿನ್, ಮಾರ್ಟಿನ್ ಎಸೆತದಲ್ಲಿ ಎಲ್ಬಿ ಬಲೆಗೆ ಬೀಳುವ ಮೂಲಕ ತಮ್ಮ ಉತ್ತಮ ಇನಿಂಗ್ಸ್ ಅಂತ್ಯಗೊಳಿಸಿದರು. ನಂತರ ಬಂದ ರೂಟ್ ಕೂಡ ಖಾತೆ ತೆರೆಯುವ ಮೂನ್ನವೇ ಸೌಥೀ ಫೀಲ್ಡಿಂಗ್ನಲ್ಲಿ ರನೌಟ್ ಆದರು. ಮೊದಲ ಇನಿಂಗ್ಸ್ನಲ್ಲಿ 293 ರನ್ಗಳ ಹಿನ್ನಡೆ ಅನುಭವಿಸಿದ್ದ ಇಂಗ್ಲೆಂಡ್ ತಂಡ, ತಮ್ಮ ಎರಡನೇ ಇನಿಂಗ್ಸ್ನಲ್ಲಿ 421 ರನ್ಗಳಿಸಿತು. ಈ ಪಂದ್ಯದ ಮೊದಲ ದಿನ ಅತಿಯಾದ ಮಳೆ ಸುರಿದ ಪರಿಣಾಮ ದಿನದಾಟ ರದ್ದಾಗಿತ್ತು.
ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್ ಪ್ರಥಮ ಇನಿಂಗ್ಸ್ 167/10
ನ್ಯೂಜಿಲೆಂಡ್ ಪ್ರಥಮ ಇನಿಂಗ್ಸ್ 460/9 (ಡಿ.)
ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ 421/6
ಕಾಂಪ್ಟನ್ 117, ಫಿನ್ 56
ಬೌಲಿಂಗ್: ವಾಂಗ್ನರ್ 141/3, ಬೌಲ್ಟ್ 49/1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

