ಕ್ರೀಡೆ

ಲಂಕಾ ಭರ್ಜರಿ ಮೊತ್ತ; ಆತಂಕದಲ್ಲಿ ಬಾಂಗ್ಲಾ

ಲಂಕಾ ಭರ್ಜರಿ ಮೊತ್ತ; ಆತಂಕದಲ್ಲಿ ಬಾಂಗ್ಲಾ
Published On :

 ತಿರಿಮಾನೆ ಅಜೇಯ 155, ಚಾಂಡೀಮಾಲ್ ಅಜೇಯ 116
ಗಾಲೆ: ಲಾಹಿರು ತಿರಿಮಾನೆ ಹಾಗೂ ದಿನೇಶ್ ಚಂಡಿಮಲ್ ಅವರ ಮೊದಲ ಶತಕಗಳ ಸಹಾಯದಿಂದಾಗಿ ಆತಿಥೇಯ ಶ್ರೀಲಂಕಾ ತಂಡ, ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿಗರ ವಿರುದ್ಧ ಪ್ರಾಬಲ್ಯ ಪಡೆದಿದೆ. ಎಡಗೈ ಬ್ಯಾಟ್ಸ್ಮನ್ ತಿರಿಮಾನೆ ಅವರ ಅಜೇಯ 155 ರನ್ ಹಾಗೂ ಚಂಡಿಮಲ್ ಅವರ ಅಜೇಯ 116 ರನ್ಗಳ ನೆರವಿನಿಂದ ಲಂಕಾ, ತನ್ನ ಮೊದಲ ಇನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 570 ರನ್ ಪೇರಿಸಿ, ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಪಂದ್ಯದ ಮೊದಲ ದಿನವಾದ ಶುಕ್ರವಾರ 3 ವಿಕೆಟ್ ನಷ್ಟಕ್ಕೆ 361 ರನ್ ಗಳಿಸಿದ್ದ ಲಂಕಾ, ಶನಿವಾರ ಕೇವಲ ಒಂದು ವಿಕೆಟ್ ಮಾತ್ರ ಕಳೆದುಕೊಂಡು ತನ್ನ ಮೊತ್ತಕ್ಕೆ 209 ರನ್ ಪೇರಿಸಿ, ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ತದನಂತರ, ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ದಿನಾಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು. 65 ರನ್ ಗಳಿಸಿದ್ದ ಮಹಮ್ಮದ್ ಅಶ್ರಫುಲ್ ಹಾಗೂ 35 ರನ್ ಗಳಿಸಿದ್ದ ಮೊಮಿನುಲ್ ಹಕ್ ಕ್ರೀಸ್ನಲ್ಲಿದ್ದಾರೆ. ಮೊಮಿನುಲ್ ಅವರಿಗೆ ಇದು ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವಾಗಿದೆ.
ಅವಕಾಶ ಕೈಚೆಲ್ಲಿದ ಬಾಂಗ್ಲಾ: ಶುಕ್ರವಾರ ದಿನದಾಟ ಆರಂಭವಾದಾಗ, ಬಾಂಗ್ಲಾದ ಆಟಗಾರರು ಚಂಡಿಮಲ್ ನೀಡಿದ್ದ ಎರಡು ಕ್ಯಾಚ್ಗಳನ್ನು ಕೈಚೆಲ್ಲಿದ್ದರು. ಇದು ಮುಂದೆ ಅವರಿಗೆ ದುಬಾರಿಯಾಗಿ ಪರಿಣಮಿಸಿತು.
ಆತಂಕದಲ್ಲಿ ಬಾಂಗ್ಲಾ: ಲಂಕಾದ ವೇಗಿ ಶಮಿಂದಾ ಎರಂಗಾ ಅವರು ಬಾಂಗ್ಲಾದೇಶದ ಮೊದಲ ವಿಕೆಟ್ ಕಬಳಿಸಿದರು. ಆರಂಭಿಕ ಜಹುರುಲ್ ಇಸ್ಲಾಂ (20) ಅವರು ಕೀಪರ್ ಚಂಡಿಮಲ್ಗೆ ಕ್ಯಾಚ್ ನೀಡಿ, ಇನಿಂಗ್ಸ್ನ 8ನೇ ಓವರ್ನಲ್ಲೇ ನಿರ್ಗಮಿಸಿದರು. ಇದಾದ ನಂತರ, ಸ್ಪಿನ್ನರ್ ಅಜಂತಾ ಮೆಂಡಿಸ್ ಅವರು ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟೆಸ್ಟ್ಗೆ ಪದಾರ್ಪಣೆ ಮಾಡಿರುವ ಅನಾಮುಲ್ ಹಕ್ (13) ಅವರನ್ನು ಕ್ಲೀನ್ಬೌಲ್ಡ್ ಮಾಡಿ ಪೆವಿಲಿಯನ್ಗೆ ಕಳಿಸಿದರು.
ಆದರೆ, ಆನಂತರ ಜೋಡಿಯಾದ ಅಶ್ರಫುಲ್ ಹಾಗೂ ಅನಾಮುಲ್ ಅವರು ಮುರಿಯದ 3ನೇ ವಿಕೆಟ್ಗೆ 70 ರನ್ ಸೇರಿಸಿದರು. 108 ಎಸೆತಗಳನ್ನು ಎದುರಿಸಿದ ಅಶ್ರಫುಲ್, 7 ಬೌಂಡರಿ ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಪ್ರಥಮ ಇನಿಂಗ್ಸ್ 570/4 (ಡಿಕ್ಲೇರ್)
ತಿರಿಮಾನೆ 142, ಚಂಡಿಮಲ್ 116
ಬೌಲಿಂಗ್: ಸೊಹಾಗ್ ಗಾಝಿ 164/3, ಅಬುಲ್ ಹಸನ್ 112/1
ಬಾಂಗ್ಲಾದೇಶ ಪ್ರಥಮ ಇನಿಂಗ್ಸ್ 135/2 (43 ಓವರ್)
(ಶನಿವಾರ ದಿನಾಂತ್ಯಕ್ಕೆ)
ಅಶ್ರಫುಲ್ ಅಜೇಯ 65, ಮೊಮಿನುಲ್ ಅಜೇಯ 35; ಬೌಲಿಂಗ್: ಎರಂಗಾ 25/1, ಮೆಂಡಿಸ್ 28/1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.