ಬಾಂಗ್ಲಾ ಬೊಂಬಾಟ್ ಬ್ಯಾಟಿಂಗ್
ಗಾಲೆ: ಮೊದಲ ಇನಿಂಗ್ಸ್ನಲ್ಲಿ ಬೃಹತ್ ಮೊತ್ತ ಗಳಿಸಿದ್ದ ಶ್ರೀಲಂಕಾ ತಂಡಕ್ಕೆ, ಬಾಂಗ್ಲಾದೇಶ ತಿರುಗೇಟು ನೀಡಿದ್ದು, ಮೊದಲ ಟೆಸ್ಟ್ ಪಂದ್ಯದ 3ನೇ ದಿನಾಂತ್ಯಕ್ಕೆ ಕೇವಲ 4 ವಿಕೆಟ್ ಕಳೆದುಕೊಂಡು 438 ರನ್ಗಳಿಸಿದೆ.
ಎರಡನೇ ದಿನದ ಬ್ಯಾಟಿಂಗ್ ಆರಂಭಿಸಿದ್ದ ಬಾಂಗ್ಲಾದೇಶ ದಿನಾಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡು 135 ರನ್ ಕಲೆ ಹಾಕಿತ್ತು. ನಂತರ ಮೂರನೇ ದಿನ ಬ್ಯಾಟಿಂಗ್ ಮುಂದುವರಿಸಿದ ಬಾಂಗ್ಲರು ಅಶ್ರಫುಲ್ ಹಾಗೂ ರಫೀಕ್ ಅವರ ಅದ್ಭುತ ಬ್ಯಾಟಿಂಗ್ ನೆರವಿನೊಂದಿಗೆ 438 ರನ್ ಕಲೆಹಾಕುವ ಮೂಲಕ ಸಿಂಹಳೀಯರಿಗೆ ಉತ್ತಮ ಪ್ರತಿರೋಧ ನೀಡಿದೆ.
ಎರಡನೇ ದಿನಾಂತ್ಯಕ್ಕೆ ಅಜೇಯರಾಗಿ ಉಳಿದಿದ್ದ ಅಶ್ರಫುಲ್ (65) ಹಾಗೂ ಮೊನಿಮುಲ್ ಹಕ್ (35) ಮೂರನೇ ದಿನ ತಮ್ಮ ಬ್ಯಾಟಿಂಗ್ ಮುಂದುವರಿಸಿದರು. ಮೂರನೇ ದಿನ ಕೇವಲ 20 ರನ್ಗಳಿಸಿ ತಮ್ಮ ಅರ್ಧಶತಕ ಪೂರೈಸಿದ ಮೊನಿಮುಲ್ 55ರನ್ಗಳಿಸಿದ್ದಾಗ ಕುಲಸೇಖರ ಎಸೆತದಲ್ಲಿ ಮ್ಯಾಥ್ಯೂಸ್ಗೆ ಕ್ಯಾಚ್ ನೀಡಿದರು. ನಂತರ ಬಂದ ಮೊಹಮದ್ದುಲ್ಲಾ ಖಾತೆ ತೆರಿಯದೆ ಹೆರಾತ್ ಎಸೆತದಲ್ಲಿ ಸ್ಟಂಪ್ಔಟಾದರು.
ಈ ವೇಳೆ ಜತೆಯಾದ ಅಶ್ರಫುಲ್ ಹಾಗೂ ಮುಷ್ಫಿಕು ರಹೀಮ್ ಮುರಿಯದ 251 ರನ್ಗಳ ಜತೆಯಾಟವಾಡಿದರು. ಮೂರನೇ ದಿನ ಮಂದಗತಿಯ ಬ್ಯಾಟಿಂಗ್ ನಡೆಸಿದ ಅಶ್ರಫುಲ್ ದಿನಾಂತ್ಯದ ವೇಳೆಗೆ ಅಜೇಯ 189 ರನ್ಗಳಿಸಿದ್ದು, ದ್ವಿಶತಕದ ಹೊಸ್ತಿಲಲ್ಲಿದ್ದಾರೆ. ಇನ್ನು ರಹೀಮ್ ಕೂಡ ಉತ್ತಮ ಬ್ಯಾಟಿಂಗ್ ನಡೆಸಿದ್ದು, ಅಜೇಯ 152 ರನ್ಗಳಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಪ್ರಥಮ ಇನಿಂಗ್ಸ್ 570/4 (ಡಿ)
ಬಾಂಗ್ಲಾದೇಶ ಪ್ರಥಮ ಇನಿಂಗ್ಸ್ 438/4 (3ನೇ ದಿನಾಂತ್ಯಕ್ಕೆ)
ಅಶ್ರಫುಲ್ ಅಜೇಯ 189
ರಹೀಮ್ ಅಜೇಯ 152
ಬೌಲಿಂಗ್: ಕುಲಸೇಖರ 76/1, ಹೆರಾತ್ 103/1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

