ಮೊಹಾಲಿಯಲ್ಲಿ ಅಭ್ಯಾಸ ನಡೆಸಿದ ಆಸೀಸ್ ಆಟಗಾರರು
ಮೊಹಾಲಿ: ಭಾರತದ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ, ತಮ್ಮ ಕಳಪೆ ಪ್ರದರ್ಶನದಿಂದ ಚೇತರಿಸಿಕೊಳ್ಳಲು ಎದುರು ನೋಡುತ್ತಿರುವ ಆಸ್ಟ್ರೇಲಿಯಾ ತಂಡ ಮೊಹಾಲಿಯಲ್ಲಿ ಭಾನುವಾರ ನಾಲ್ಕು ಗಂಟೆಗಳ ಕಾಲ ಅಭ್ಯಾಸ ನಡೆಸಿತು.
ಚೆನ್ನೈ ಮತ್ತು ಹೈದರಾಬಾದ್ನ ಎರಡು ಟೆಸ್ಟ್ ಪಂದ್ಯಗಳಲ್ಲಿ ಈಗಾಗಲೇ ಸೋಲನುಭವಿಸಿರುವ ಆಸ್ಟ್ರೇಲಿಯಾ, ಮೂರನೇ ಟೆಸ್ಟ್ಗೆ 7 ದಿನಗಳ ಕಾಲ ಸಿಕ್ಕಿರುವ ಸಮಯಾವಕಾಶವನ್ನು ಉಪಯೋಗಿಸಿಕೊಳ್ಳಲು ಎದುರು ನೋಡುತ್ತಿದೆ.
ಮೈಕಲ್ ಕ್ಲಾರ್ಕ್ ನಾಯಕತ್ವದ ಆಸೀಸ್ ಪಡೆ ಬೆಳಗಿನ ಹೊತ್ತಿನಲ್ಲಿ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂಗೆ ತೆರಳಿತ್ತು. ಆಲ್ರೌಂಡರ್ ಮೊಯ್ಸಿಸ್ ಹೆನ್ರೀಕೆಸ್, ಮಿಚೆಲ್ ಸ್ಟಾರ್ಕ್, ಪೀಟರ್ ಸಿಡ್ಲ್ ಹಾಗೂ ಜೇಮ್ಸ್ ಪ್ಯಾಟಿನ್ಸನ್ ಸೇರಿದಂತೆ ಎಲ್ಲ ಬೌಲರ್ಗಳು 6ರಿಂದ 7 ಓವರ್ಗಳ ಬೌಲಿಂಗ್ ಪ್ರದರ್ಶಿಸಿದರು. ಡೇವಿಡ್ ವಾರ್ನರ್, ಶೇನ್ ವ್ಯಾಟ್ಸನ್ ಹಾಗೂ ಕ್ಲಾರ್ಕ್ ಬ್ಯಾಟಿಂಗ್ ನಡೆಸಿದರು. ತಂಡದ ತರಬೇತುದಾರ ಮಿಕ್ಕಿ ಅರ್ಥರ್ ಆಟಗಾರರ ಅಭ್ಯಾಸವನ್ನು ವೀಕ್ಷಿಸಿದರು. ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳಿಗೆ ಅಭ್ಯಾಸದಲ್ಲಿ ಯುವ ಸ್ಪಿನ್ ಬೌಲರ್ಗಳು ಬೌಲಿಂಗ್ ಮಾಡಿದರು.
ಆಸ್ಟ್ರೇಲಿಯಾ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಭಾರತದ ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ವೈಫಲ್ಯ ಕಂಡಿದೆ. ಹೀಗಾಗಿ ಆಸೀಸ್ ಬ್ಯಾಟ್ಸ್ಮನ್ಗಳು ಸ್ಪಿನ್ ಬೌಲರ್ಗಳನ್ನು ಎದುರಿಸುವತ್ತ ಹೆಚ್ಚು ಗಮನಹರಿಸಿದರು. ಭಾರತ ತಂಡದ ಆಟಗಾರರು ತಮ್ಮ ತವರಿನಿಂದ ಸೋಮವಾರ ಮೊಹಾಲಿಗೆ ತೆರಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

