ಕ್ರೀಡೆ

ಮನೋರಮಾ, ದೆಬೋರಾಗೆ ಕಂಚು

ಮನೋರಮಾ, ದೆಬೋರಾಗೆ ಕಂಚು
Published On :

ಏಷ್ಯನ್ ಸೈಕ್ಲಿಂಗ್ ಚಾಂಪಿಯನ್‌ಷಿಪ್: ಭಾರತಕ್ಕೆ ಎರಡನೇ ಪದಕ

ನವದೆಹಲಿ: ಭಾರತದ ದೆಬೋರಾ ಮತ್ತು ಮನೋರಮಾ ದೇವಿ ಜೋಡಿ, ಏಷ್ಯನ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ ತಂಡ ಸ್ಪ್ರಿಂಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಆತಿಥೇಯ ಭಾರತಕ್ಕೆ ಪಂದ್ಯಾವಳಿಯಲ್ಲಿ ಇದು ಎರಡನೇ ಪದಕವಾಗಿದೆ.
ತಮ್ಮ ಎದುರಾಳಿ ತಂಡ ಮಲೇಷ್ಯಾದ ಫೈಹಾ ಶಾವತಿ ಮೊಹ್ದ್ ಅದ್ನಾನ್ ಮತ್ತು ನೂರುಲ್ ಅಲಿಸ್ಸಾ ಮೊಹ್ಮದ್ ಅಜ್ಮಾನ್ ಜೋಡಿಗಿಂತ 0.148 ಸೆಕೆಂಡ್‌ಗಳ ಮುನ್ನ ಗುರಿ ಸೇರಿದ ಭಾರತದ ಮನೋರಮಾ ಮತ್ತು ದೆಬೋರಾ ಪ್ರಶಸ್ತಿ ಗೆದ್ದುಕೊಂಡರು.
ಸ್ಪರ್ಧೆಯ ಮೊದಲ ಲ್ಯಾಪ್‌ನಲ್ಲಿ ಕೊಂಚ ನಿಧಾನವಾಗಿ ಸಾಗಿದ ಮನೋರಮಾ 22. 243 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರೆ, ಅವರ ಎದುರಾಳಿ 21.527 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.
ಆದರೆ, ಅವಕಾಶವನ್ನು ಉಪಯೋಗಿಸಿಕೊಂಡ ದೆಬೋರಾ 38.645 ಸೆಕೆಂಡ್‌ಗಳಲ್ಲಿ ಸ್ಪರ್ಧೆಯನ್ನು ಮುಕ್ತಾಯಗೊಳಿಸಿ, ಜೂನಿಯರ್ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ಪ್ರಶಸ್ತಿಯನ್ನು ತಂದುಕೊಟ್ಟರು. ಮಲೇಷ್ಯಾದ ಜೋಡಿ 38.793 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಅಲ್ಪ ಅಂತರದಲ್ಲಿ ಪ್ರಶಸ್ತಿಯಿಂದ ವಂಚಿತವಾಯಿತು.
'ದೇಶಕ್ಕಾಗಿ ಪದಕ ಗೆದ್ದಿರುವುದು ನನಗೆ ಸಂತಸ ಉಂಟುಮಾಡಿದೆ. ನನ್ನ ತರಬೇತುದರರಾದ ಇಬಾಂಚಾ ಮೋತುಮ್ ಮತ್ತು ನನ್ನ ಚಿಕ್ಕಪ್ಪ ಇಂಗೆಂಜಿಯೋ ಅವರಿಗೆ ಈ ಶ್ರೇಯಸ್ಸು ಸಲ್ಲಬೇಕು' ಎಂದಿದ್ದಾರೆ ಪ್ರಶಸ್ತಿ ಗೆದ್ದ ನಂತರ ಮಾತನಾಡಿದ ಮನೋರಮಾ.
ದಿನದ ಆರಂಭದಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ಭಾರತದ ಜೋಡಿಗಿಂತ (39.245 ಸೆಕೆಂಡ್) ಮಲೇಷ್ಯಾ ಜೋಡಿ (38.848 ಸೆಕೆಂಡ್) ಉತ್ತಮ ಸಾಧನೆ ಮಾಡಿತ್ತು. ಆದರೆ, ಅಂತಿಮ ಸುತ್ತಿನಲ್ಲಿ ಭಾರತದ ಜೋಡಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಯಿತು.
'ನಮ್ಮಿಬ್ಬರಲ್ಲಿ ಇದ್ದ ಹೊಂದಾಣಿಕೆ ಪದಕ ಗೆಲ್ಲಲು ನೆರವಾಯಿತು. ಚಾಂಪಿಯನ್‌ಷಿಪ್‌ಗೆ ಇಲ್ಲಿಗೆ ಆಗಮಿಸಿದ ನಂತರ ನಾವು ಇಬ್ಬರೂ ಸೇರಿ ಅಭ್ಯಾಸ ನಡೆಸಿದೆವು. ಉತ್ತಮ ಪ್ರದರ್ಶನ ನೀಡುವ ಕುರಿತು ವಿಶ್ವಾಸ ಹೊಂದಿದ್ವೆವು. ಇದು ಉತ್ತಮ ಫಲವನ್ನೇ ನೀಡಿತು' ಎಂದು ಪಂದ್ಯದ ನಂತರ ಮಾತನಾಡಿದ ದೆಬೋರಾ ಹೇಳಿದರು.
ಈ ವಿಭಾಗದಲ್ಲಿ 37.219 ಗುರಿ ತಲುಪಿ ಹೊಸ ದಾಖಲೆ ನಿರ್ಮಿಸಿದ ತೈಪೇಯ ಯು ಶಿಯೋ ಚೆಂಗ್ ಮತ್ತು ಯೂ ಟಿಂಗ್ ಹಂಗ್ ಜೋಡಿ ಚಿನ್ನದ ಪದಕಕ್ಕೆ ಭಾಜನವಾದರೆ, ಕೊರಿಯಾ ಜೋಡಿ ಬೆಳ್ಳಿ ಪದಕ ಗೆದ್ದುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.