ಕ್ರೀಡೆ

ರಾಮ್‌ಸಿಂಗ್ ಅಮಾನತು

Published On :

ವಿಜೇಂದರ್ ಸಿಂಗ್ ಬಗ್ಗೆ ಹೆಚ್ಚಿದ ಅನುಮಾನ
ಪಟಿಯಾಲ:  ನಿಷೇಧಿತ ಮಾದಕ ವಸ್ತು ಸೇವಿಸಿದ ಬಗ್ಗೆ ತಪ್ಪೊಪ್ಪಿಕೊಂಡ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಸ್ನೇಹಿತ, ಬಾಕ್ಸರ್ ರಾಮ್ ಸಿಂಗ್ ಅವರನ್ನು ರಾಷ್ಟ್ರೀಯ ಕ್ರೀಡಾ ಸಂಸ್ಥೆಯಿಂದ ಅಮಾನತುಗೊಳಿಸಲಾಗಿದೆ. ಅಲ್ಲದೆ ಪಟಿಯಾಲದಲ್ಲಿ ನಡೆಯುತ್ತಿದ್ದ ಬಾಕ್ಸಿಂಗ್ ಶಿಬಿರದಿಂದಲೂ ಹೊರಹಾಕಲಾಗಿದೆ.
ಆದರೆ, ಆತ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ವಿಜೇಂದ್ರ ಸಿಂಗ್ ಅವರನ್ನು ಶೀಘ್ರದಲ್ಲೇ, ಪೊಲೀಸರಿಂದ ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ.
ಸೂಪರ್ ಹೇವಿವೇಟ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಎನಿಸಿರುವ ಮತ್ತು ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ರಾಮ್ ಸಿಂಗ್, ವಿಜೇಂದರ್ ಜತೆ ಸೇರಿ ಮಾದಕ ವಸ್ತು ಸೇವಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಆದರೆ, ಪ್ರಕರಣದಲ್ಲಿ ತಮ್ಮ ಪಾತ್ರವಿರುವ ಕುರಿತು ಕೇಳಿಬಂದಿರುವ ಆರೋಪಗಳನ್ನು ಆರಂಭದಲ್ಲಿ ಅಲ್ಲಗಳೆದಿದ್ದ ವಿಜೇಂದರ್ ಸಿಂಗ್, ತಮ್ಮ ಆಪ್ತ ಸ್ನೇಹಿತ ರಾಮ್ ಸಿಂಗ್ ಹೇಳಿಕೆ ನಂತರ ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ಇದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪಂಜಾಬ್‌ನ ಮೊಹಲಿ ಜಿಲ್ಲೆಯ ಜಿರಾಕ್ಪುರ ನಗರದ ಹೊರ ವಲಯದಲ್ಲಿರುವ ಭಾರತೀಯ ಮೂಲದ ನಿವಾಸಿ ಅನೂಪ್ ಸಿಂಗ್ ಮನೆಯಲ್ಲಿ ರು. 130 ಕೋಟಿ ಮೊತ್ತದ ಹೆರಾಯಿನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹೆರಾಯಿನ್ ವಸಪಡಿಸಿಕೊಂಡ ನಿವಾಸದ ಸಮೀಪವೇ ವಿಜೇಂದರ್ ಸಿಂಗ್ ಪತ್ನಿಯ ಕಾರು ಪತ್ತೆಯಾಗಿತ್ತು. ಇದರೊಂದಿಗೆ ಭಾರತದ ಈ ಇಬ್ಬರು ಬಾಕ್ಸರ್‌ಗಳು ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ.
'ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ನಾಲ್ಕರಿಂದ ಐದು ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ' ಎಂದು ಮಾತ್ರ ಹೇಳಿರುವ ಪೊಲೀಸರು ವಿಜೇಂದಂದರ್ ವಿಚಾರಣೆಗೊಳಪಡಿಸುವ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ.
ಏತನ್ಮಧ್ಯೆ, ಮಾದಕ ವಸ್ತು ತಯಾರಿಸುತ್ತಿರುವ ಫ್ಯಾಕ್ಟರಿ ಆರ್ಜುನ್ ಪ್ರಶಸ್ತಿ ಪಡೆದಿರುವ ಕುಸ್ತಿಪಟುವೊಬ್ಬರ ಸಂಬಂಧಿಯೊಬ್ಬರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ.
'ಕಳೆದ ಹತ್ತು ವರ್ಷದಿಂದ ನನಗೆ ವಿಜೇಂದರ್ ಸಿಂಗ್ ಗೊತ್ತು. ಹಲವಾರು ಬಾರಿ ಆತ ಡೋಪಿಂಗ್ ಪರೀಕ್ಷೆಗೊಳಗಾಗಿದ್ದಾನೆ. ಆದರೆ, ಯಾವತ್ತೂ ಮಾದಕ ವಸ್ತು ಸೇವಿಸಿದ ಬಗ್ಗೆ ವರದಿಯಾಗಿಲ್ಲ. ನಾನು ತರಬೇತಿ ನೀಡಿದ ಶಿಸ್ತಿನ ಆಟಗಾರರಲ್ಲಿ ವಿಜೇಂದರ್ ಸಹ ಒಬ್ಬ ಬಾಕ್ಸರ್‌' ಎಂದಿದ್ದಾರೆ  ರಾಮ್ ಸಿಂಗ್ ಹೇಳಿಕೆ ನಂತರ ಮೌನ ಮುರಿಯದ ವಿಜೇಂದರ್ ಸಿಂಗ್ ಬಗ್ಗೆ ಮಾತನಾಡಿದ ಸಂಧು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.