ಕ್ರೀಡೆ

ಸ್ವಿಸ್ ಓಪನ್: ಅರುಂಧತಿಗೆ ಜಯ

Published On :

ಬಸೆಲ್: ಉತ್ತಮ ಪ್ರದರ್ಶನದ ನೀಡುವ ಮೂಲಕ ಇಲ್ಲಿ ನಡೆಯುತ್ತಿರುವ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಅರುಂಧತಿ ಪಂತ್ವಾನೆ ಮೊದಲ ಅರ್ಹತಾ ಸುತ್ತಿಯಲ್ಲಿ ಜಯ ಸಾಧಿಸಿದ್ದಾರೆ.
ಅರುಂಧತಿ ತಮ್ಮ ಪ್ರತಿಸ್ಫರ್ಧಿ ತೈಪೆನ ಯಾ ಲಾನ್ ಚಾಂಗ್ ಅವರನ್ನು 21-16, 21-15 ನೇರ ಸೆಟ್‌ಗಳಲ್ಲಿ ಮಣಿಸಿದರು. ಕೇವಲ 26 ನಿಮಿಷಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು. ಅರುಂಧತಿ ತಮ್ಮ ಎದರಾಳಿ ವಿರುದ್ಧ ಆಕ್ರಮಾಣಕಾರಿ ಆಟ ಪ್ರದರ್ಶಿಸಿದ್ದು ಪಂದ್ಯದಲ್ಲಿ 17 ಸ್ಮ್ಯಾಶ್‌ಗಳನ್ನು ಹೊಡೆದಿದ್ದು, ಚಾಂಗ್ ಕೇವಲ 6 ಸ್ಮ್ಯಾಶ್‌ಗಳನ್ನು ಹೊಡೆದರು. ಪಂದ್ಯದ ಮೊದಲ ಸೆಟ್14-14ರವರೆಗೆ ಸಮಬಲದಲ್ಲೇ ಸಾಗಿತಾದರೂ ನಂತರ ಅರುಂಧತಿ ಸತತ ನಾಲ್ಕು ಪಾಯಿಂಟ್ ಪಡೆಯುವ ಮೂಲಕ 14-18 ಅಂತರದಲ್ಲಿ ಮುನ್ನಡೆ ಸಾಧಿಸಿದರು.
ಎರಡನೇ ಸೆಟ್‌ನಲ್ಲೂ ಕೂಡ 12-12ರವರೆಗೆ ಸಮಬಲದಲ್ಲೇ ಸಾಗಿತಾದರೂ, ನಂತರ ಅರುಂಧತಿ ಸತತ ಐದು ಪಾಯಿಂಟ್‌ಗಳನ್ನು ತನ್ನದಾಗಿಸಿಕೊಂಡು 17-12ರ ಮುನ್ನಡೆ ಸಾಧಿಸಿದರು.
ಅರುಧಂತಿ ತಮ್ಮ ಮುಂದಿನ ಸುತ್ತಿನಲ್ಲಿ ಚಿನಾದ ಸನ್ ಯು ಅವರನ್ನು ಎದುರಿಸಲಿದ್ದಾರೆ. ತಮ್ಮ ಮೊದಲ ಸುತ್ತಿನಲ್ಲಿ ಅರುಂಧತಿ ಜಯ ಸಾಧಿಸಿದರೆ, ಭಾರತದ ಮತ್ತೋರ್ವ ಆಟಗಾರ್ತಿ ತನ್ವಿ ಲಡ್ ಮೊದಲ ಅರ್ಹತಾ ಸುತ್ತಿನಲ್ಲಿ ಸೋಲನುಭವಿಸುವ ಮೂಲಕ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ತನ್ವಿ ತಮ್ಮ ಎದುರಾಳಿ ಜಪಾನ್‌ನ ಶಿಜುಕಾ ಉಚಿದಾ ವಿರುದ್ಧ 15-21, 10-21 ಅಂತರದಲ್ಲಿ ಸೋಲನುಭವಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.