ವಿಶ್ರಾಂತಿ ಆಸೀಸ್ಗೆ ಸಹಾಯವಾಗಲಿದೆ
ಮೆಲ್ಬರ್ನ್: ಭಾರತ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿದ ನಂತರ ಆಸ್ಟ್ರೇಲಿಯಾ ತಂಡ ಎಂಟು ದಿನಗಳ ವಿಶ್ರಾಂತಿ ಪಡೆದಿದ್ದು, ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವಿಶ್ರಾಂತಿ ಪಡೆದಿರುವುದು ಆಸೀಸ್ ತಂಡ ಸರಣಿಯಲ್ಲಿ ಹೊಸ ಆರಂಭ ಪಡೆಯಲು ಸಹಕಾರಿಯಾಗಲಿದೆ ಎಂದು ಆಸೀಸ್ ಮಾಜಿ ಆಟಗಾರ ಆ್ಯಡಮ್ ಗಿಲ್ಕ್ರಿಸ್ಟ್ ಅಭಿಪ್ರಾಯಪಟ್ಟಿದ್ದಾರೆ. ಕೆಲವೊಮ್ಮೆ ಈ ರೀತಿಯ ಸೋಲಿನಿಂದ ಹೊರ ಬರಲು ವಿರಾಮದ ಅವಶ್ಯಕತೆ ಇರುತ್ತದೆ. ಹಾಗಾಗಿ ಆಸೀಸ್ ತಂಡ ಮೂರನೇ ಟೆಸ್ಟ್ ಪಂದ್ಯಕ್ಕು ಮುನ್ನ 8 ದಿನಗಳ ವಿರಾಮ ಪಡೆದಿರುವುದು ಆಸೀಸ್ ಅನುಕೂಲವಾಗಲಿದೆ. 8 ದಿನಗಳ ವಿರಾಮ ಆಟಗಾರರು ಸೋಲಿನ ಕಹಿ ಮರೆತು ಸರಣಿಯನ್ನು ಹೊಸದಾಗಿ ಆರಂಭಿಸಲು ಸಹಾಯವಾಗಲಿದೆ ಎಂದು ಅವರು ತಿಳಿಸಿದರು. ಈ ವಿರಾಮದಿಂದ ಆಟಗಾರರಿಗೆ ಹೊಸ ಹುಮ್ಮಸ್ಸು ನೀಡಲಿದ್ದು ಪಂದ್ಯಾವಳಿಯಲ್ಲಿ ಮರು ಹೋರಾಟ ನಡೆಸಲು ಸಹಾಯವಾಗಲಿದೆ. ವಿರಾಮದ ನಂತರ ಆಟಗಾರರೆಲ್ಲರು ಹುಮ್ಮಸ್ಸಿನಿಂದ ಹೊಸ ಸರಣಿ ಆಡುವಂತೆ ಕಣಕ್ಕಿಳಿಯುತ್ತಾರೆ ಇದರಿಂದ ಆಟಗಾರರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

