ಸೋತ ದಕ್ಷಿಣ ವಲಯ
ಗುವಾಹತಿ: ವಿಜಯ್ ಜೋಲ್ (75) ಮತ್ತು ಯೂಸುಫ್ ಪಠಾಣ್ (56) ಅರ್ಧ ಶತಕದ ನೆರವಿನೊಂದಿಗೆ ಪಶ್ಚಿಮ ವಲಯ, ದೇವಧರ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯದ ವಿರುದ್ಧ 5 ವಿಕೆಟ್ ಅಂತರದಿಂದ ಕೈಚೆಲ್ಲಿತು. ಹೀಗಾಗಿ ದಕ್ಷಿಣ ವಲಯ ಫೈನಲ್ ಪ್ರವೇಶಿಸುವ ಅವಕಾಶದಿಂದ ವಂಚಿತವಾಯಿತು.
ಬುಧವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪಶ್ಚಿಮ ವಲಯ ತಂಡ ಉತ್ತರ ವಲಯವನ್ನು ಎದುರಿಸಲಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಪಶ್ಚಿಮ ವಲಯ ತಂಡ ದಕ್ಷಿಣ ವಲಯವನ್ನು 258 ರನ್ಗಳಿಗೆ ಕಟ್ಟಿ ಹಾಕಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ಪಶ್ಚಿಮ ವಲಯ 41.1 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 259 ರನ್ ಗಳಿಸುವ ಮೂಲಕ ವಿಜಯದ ಕೇಕೆ ಹಾಕಿತು.
ಪಶ್ಚಿಮ ವಲಯದ ಪರ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಯೂಸುಫ್ ಪಠಾಣ್ ಮೊತ್ತದಲ್ಲಿ 2 ಸಿಕ್ಸರ್ ಮತ್ತು 8 ಬೌಂಡರಿಗಳು ಸೇರಿದ್ದವು. ಇದರೊಂದಿಗೆ ವಿಜಯ್ ಹಜಾರೆ ಮತ್ತು ದೇವಧರ ಟ್ರೋಫಿ ಸೇರಿದಂತೆ ಸತತ ಮೂರು ಪಂದ್ಯಗಳಲ್ಲಿ ಯೂಸುಫ್ ಪಠಾಣ್ 60ಕ್ಕೂ ಹೆಚ್ಚು ರನ್ ದಾಖಲಿಸಿದ್ದಾರೆ.
19 ವರ್ಷದೊಳಗಿನ ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರ ವಿಜಯ್ ಜೋಲ್ ಮೊತ್ತದಲ್ಲಿ 1 ಸಿಕ್ಸರ್ ಮತ್ತು 11 ಬೌಂಡರಿಗಳು ಸೇರಿದ್ದವು
ಮೊದಲ ಏಳು ಓವರ್ಗಳಲ್ಲಿ ನಿಯಂತ್ರಣ ಸಾಧಿಸಿದ್ದ ದಕ್ಷಿಣ ವಲಯ 26 ರನ್ಗಳಿಗೆ ಎರಡು ವಿಕೆಟ್ ಪಡೆದಿತ್ತು. ಆದರೆ, ನಂತರ ವಿಜಯ್ ಜೋಲ್ ಮತ್ತು ಅಂಬಾಟಿ ರಾಯಿಡು (31) ಜತೆಯಾಟದಲ್ಲಿ 71 ರನ್ ಪೇರಿಸುವ ಮೂಲಕ ಪಶ್ಚಿಮ ವಲಯ ತಂಡದ ರನ್ಗತಿ ನಿಧಾನವಾಗಿ ಏರಿಕೆ ಕಂಡಿತು.
ರಾಯಿಡು ಎಡಗೈ ಸ್ಪಿನ್ನರ್ ಸುಧಾಕರ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದಾಗ, ಅಂಗಣಕ್ಕಿಳಿದ ಪಠಾಣ್ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದರು. ನಂತರ ಕ್ರೀಸ್ಗೆ ಕಚ್ಚಿಕೊಂಡ ಪಠಾಣ್ ದಕ್ಷಿಣ ವಲಯ ಬೌಲರ್ಗಳ ಬೆವರಳಿಸಿದರು.
ಪಶ್ಚಿಮ ವಲಯದ ಇನ್ನೊಬ್ಬ ಬ್ಯಾಟ್ಸ್ಮನ್ ಕೇದಾರ್ ಜಾಧವ್ (ಅಜೇಯ 56) ಸಹ 8 ಬೌಂಡಿರಿಗಳನ್ನು ಬಾರಿಸುವ ಮೂಲಕ ದಕ್ಷಿಣ ವಲಯ ಬೌಲರ್ಗಳಿಗೆ ಹಿನ್ನಡೆಯುಂಟು ಮಾಡಿದರು.
ಇದಕ್ಕೂ ಮುನ್ನ ದಕ್ಷಿಣ ವಲಯದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಸ್ಟುವರ್ಟ್ ಬಿನ್ನಿ 65 ಮತ್ತು ಸಚಿನ್ ಬೇಬಿ 58 ಅರ್ಧ ಶತಕ ದಾಖಲಿಸುವ ಮೂಲಕ ತಂಡದ ಮೊತ್ತ 250 ರನ್ಗಳ ಗಡಿ ದಾಟಲು ನೆರವಾಗಿದ್ದರು.
ಸಂಕ್ಷಿಪ್ತ ಸ್ಕೋರ್:
ದಕ್ಷಿಣ ವಲಯ 285/5
ಸ್ಟುವರ್ಟ್ ಬಿನ್ನಿ 65, ಸಚಿನ್ ಬೆಬಿ 58ಬೌಲಿಂಗ್: ಮುನಾಫ್ ಪೇಟಲ್ 2/48, ಅಭಿಷೇಕ್ ನಾಯರ್ 2/49
ಪಶ್ಚಿಮ ವಲಯ 259/5
ವಿಜಯ್ 75, ಯೂಸುಫ್ 68
ಬೌಲಿಂಗ್: ವಿನಯ್ 50/ 2, ಮಿಥುನ್ 45/2
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

