ಇಂಡಿಯನ್ ವೆಲ್ಸ್: ಕ್ವಾರ್ಟರ್ಫೈನಲ್ಗೆ ಫೆಡರರ್
ಇಂಡಿಯನ್ ವೆಲ್ಸ್: ಹಾಲಿ ಚಾಂಪಿಯನ್ ರೋಜರ್ ಫೆಡರರ್ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದು, ಸ್ಟ್ಯಾನಿಸ್ಲಾಸ್ ವಾವ್ರಿಂಕಾ ವಿರುದ್ಧ ಜಯ ಸಾಧಿಸುವುದರೊಂದಿಗೆ ಇಂಡಿಯನ್ ವೆಲ್ಸ್ನ ಕ್ವಾರ್ಟರ್ಫೈನಲ್ ಹಂತಕ್ಕೆ ತಲುಪಿದ್ದಾರೆ.
ಫೆಡರರ್ ವಿರುದ್ಧ 6-3, 6-7(4), 7-5 ಸೆಟ್ಗಳ ಅಂತರದಲ್ಲಿ ಸೋಲನುಭವಿಸಿರುವ ವಾವ್ರಿಂಕಾ,ಈ ಮೂಲಕ ಫೆಡರರ್ ವಿರುದ್ಧ ಸತತ 10ನೇ ಸೋಲು ಅನುಭವಿಸಿದ್ದಾರೆ. ಕಳೆದ ಆಗಸ್ಟ್ ನಂತರ ಮೊದಲ ಎಟಿಪಿ ಟೂರ್ ಪ್ರಶಸ್ತಿಯಲ್ಲಿ ಭಾಗವಹಿಸುತ್ತಿರುವ ಫೆಡರರ್ ತಮ್ಮ ಮುಂದಿನ ಹಂತದಲ್ಲಿ ರಫೆಲ್ ನಡಾಲ್ ಅವರನ್ನು ಎದುರಿಸಲಿದ್ದಾರೆ. ವಿಶ್ವದ 3ನೇ ರ್ಯಾಂಕಿಂಗ್ನ ಆ್ಯಂಡಿ ಮರ್ರೆ ತಮ್ಮ ಎದುರಾಳಿ ಕಾರ್ಲೊಸ್ ಬರ್ಲಕ್ ವಿರುದ್ಧ 7-6(4), 6-4 ಅಂತರದಲ್ಲಿ ಮಣಿಸಿದರು. 6ನೇ ರ್ಯಾಂಕಿಂಗ್ನ ಥಾಮಸ್ ಬರ್ಡಿಕ್ ತಮ್ಮ ಎದುರಾಳಿ ರಿಚರ್ಡ್ ಗಾಸ್ಕ್ವೆಟ್ ಅವರನ್ನು 6-1, 7-5 ಸೆಟ್ಗಳಿಂದ ಸೋಲಿಸಿದರು.
8ನೇ ರ್ಯಾಂಕಿಂಗ್ನ ಜೊ ವಿಲ್ಫ್ರೆಡ್ ತ್ಸೋಂಗಾ 17ನೇ ರ್ಯಾಂಕಿಂಗ್ನ ಮಿಲೊಸ್ ರೌನಿಕ್ ವಿರುದ್ಧ 6-1, 7-5 ಸೆಟ್ಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಇನ್ನು ಕೆವಿನ್ ಆ್ಯಂಡರ್ಸನ್ 13ನೇ ರ್ಯಾಂಕಿಂಗ್ನ ಗಿಲ್ಸ್ ಸಿಮನ್ ವಿರುದ್ಧ 6-3, 1-6, 6-4 ಅಂತರದಿಂದ ಗೆದ್ದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

