ಕ್ರೀಡೆ

ಆಜ್ಲಾನ್ ಶಾ: ಸಮಾಧಾನಕರ ಗೆಲುವಿಗಾಗಿ ಭಾರತದ ಸಿದ್ಧತೆ

ಆಜ್ಲಾನ್ ಶಾ: ಸಮಾಧಾನಕರ ಗೆಲುವಿಗಾಗಿ ಭಾರತದ ಸಿದ್ಧತೆ
Published On :

ಐಪೋ (ಮಲೇಷ್ಯಾ): ಈ ಬಾರಿಯ ಸುಲ್ತಾನ್ ಆಜ್ಲಾನ್ ಶಾ ಹಾಕಿ ಪಂದ್ಯಾವಳಿಯಲ್ಲಿ ಫೈನಲ್ ತಲುಪುವ ಕನಸು ಭಗ್ನಗೊಂಡ ನಂತರ, ಭಾರತ ತಂಡ, ಶನಿವಾರ ನಡೆಯಲಿರುವ ರೌಂಡ್ ರಾಬಿನ್ ವಿಭಾಗದ ತನ್ನ ಕೊನೆಯ ಪಂದ್ಯದಲ್ಲಿ ಮಲೇಷ್ಯಾವನ್ನು ಎದುರಿಸಲಿದೆ.
ಆತಿಥೇಯ ಮಲೇಷ್ಯಾ ತಂಡ, ಪಂದ್ಯಾವಳಿಯಲ್ಲಿನ ತನ್ನ ಇದುವರೆಗಿನ ಪಯಣದಲ್ಲಿ ಒಟ್ಟು ಎಂಟು ಅಂಕಗಳನ್ನು ಪಡೆದಿದ್ದು, ಭಾನುವಾರ ನಡೆಯಲಿರುವ ಫೈನಲ್ ಹಣಾಹಣಿಯಲ್ಲಿ ಆಡುವ ಅವಕಾಶವನ್ನು ಮತ್ತಷ್ಟು ಗಟ್ಟಿಗೊಳಿಸುವತ್ತ ಚಿಂತನೆ ನಡೆಸಿದೆ. ಆದರೆ, ಭಾರತ ತಂಡ, ತಾನು ಆಡಿರುವ ನಾಲ್ಕು ಪಂದ್ಯಗಳಿಂದ ಕೇವಲ ಮೂರು ಅಂಕಗಳನ್ನು ಮಾತ್ರ ಗಳಿಸಿಕೊಂಡಿದೆ. ಹಾಗಾಗಿ, ಫೈನಲ್‌ನಲ್ಲಿ ಆಡುವ ಅವಕಾಶವನ್ನು ತಪ್ಪಿಸಿಕೊಂಡಿರುವ ಮುಜ್ತಾಬಾ ಪಡೆ, ಪಂದ್ಯಾವಳಿಯ ಮೂರನೇ ಸ್ಥಾನಕ್ಕಾಗಿಯಾದರೂ ಪ್ರಬಲವಾದ ಪೈಪೋಟಿ ನಡೆಸಬಹುದು. ಸದ್ಯಕ್ಕೆ ಅದೊಂದೇ ಗುರಿ ಆ ತಂಡಕ್ಕಿದೆ.
ಫೈನಲ್ ಕನಸಿನಲ್ಲಿ ಆಸೀಸ್: ತಾನು ಆಡಿರುವ ನಾಲ್ಕು ಪಂದ್ಯಗಳಿಂದ ಎಂಟು ಅಂಕಗಳನ್ನು ಗಳಿಸಿರುವ ಆಸ್ಟ್ರೇಲಿಯಾ ತಂಡ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನ್ಯೂಜಿಲೆಂಡ್ ವಿರುದ್ಧದ ರೌಂಡ್ ರಾಬಿನ್ ಪಂದ್ಯದಲ್ಲಿ ಅದು ಸೆಣೆಸಬೇಕಿದೆ. ಕಿವೀಸ್ ವಿರುದ್ಧದ ಆ ಪಂದ್ಯದಲ್ಲಿ ಡ್ರಾ ಮಾಡಿಕೊಂಡರೂ, ಆಸೀಸ್ ಫೈನಲ್ ಪ್ರವೇಶಿಸಲಿದೆ. ಆದರೆ, ಕಿವೀಸ್‌ನ ಪರಿಸ್ಥಿತಿ ಹಾಗಿಲ್ಲ. ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿರುವ ಅದು, ಆಸೀಸ್ ವಿರುದ್ಧ ಜಯಗಳಿಸಿದರೆ, ಫೈನಲ್‌ಗೆ ಲಗ್ಗೆಯಿಡುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.