ಕಿವೀಸ್ ಪಡೆ ಮೇಲೆ ಕುಕ್ ಬಳಗದ ಹಿಡಿತ
ವೆಲ್ಲಿಂಗ್ಟನ್: ಮೊದಲ ದಿನ ಬ್ಯಾಟ್ಸ್ಮನ್ಗಳ ಉತ್ತಮ ಪ್ರದರ್ಶನದ ಮೂಲಕ ನ್ಯೂಜಿಲೆಂಡ್ ಬೌಲರ್ಗಳ ಮೇಲೆ ಹಿಡಿತ ಸಾಧಿಸಿದ್ದ ಇಂಗ್ಲೆಂಡ್, ಎರಡನೇ ದಿನ ಬೌಲರ್ಗಳ ಮಾರಕ ದಾಳಿಯಿಂದ ಕಿವೀಸ್ ಬ್ಯಾಟ್ಸ್ಮನ್ಗಳ ಮೇಲೆ ಹಿಡಿತ ಸಾಧಿಸಿದೆ.
ಮೊದಲನೇ ದಿನಾಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 267 ರನ್ಗಳಿಸಿದ್ದ ಇಂಗ್ಲೆಂಡ್, ಎರಡನೇ ದಿನ ತಮ್ಮ ಬ್ಯಾಟಿಂಗ್ ಮುಂದುವರಿಸಿತು. ಮೊದಲ ದಿನ ಅಜೇಯರಾಗಿ ಉಳಿದಿದ್ದ ಟ್ರಾಟ್ ಹಾಗೂ ಪೀಟರ್ಸನ್ ಜೋಡಿ, ಎರಡನೇ ದಿನ ತನ್ನ ಖಾತೆ ತೆರೆಯಲಿಲ್ಲ. ಶತಕಗಳಿಸಿದ್ದ ಟ್ರಾಟ್ ಬೌಲ್ಟ್ ಎಸೆತದಲ್ಲಿ ವಾಲ್ಟಿಂಗ್ಗೆ ಕ್ಯಾಚ್ ನೀಡಿದರು. ನಂತರ ತಮ್ಮ ಬ್ಯಾಟಿಂಗ್ ಮುಂದುವರಿಸಿದ ಪೀಟರ್ಸನ್ 7 ಬೌಂಡರಿ ಹಾಗೂ 1 ಸಿಕ್ಸರ್ಗಳಿಸುವ ಮೂಲಕ 73ರನ್ ಪೇರಿಸಿದರು. ಈ ವೇಳೆ ಪೀಟರ್ಸನ್, ಮಾರ್ಟಿನ್ಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಬೆಲ್ 11, ರೂಟ್ 10 ರನ್ಗಳಿಸಿ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಕಣಕ್ಕಿಳಿದ ಮ್ಯಾಟ್ ಪ್ರಯರ್ 10 ಬೌಂಡರಿ ಹಾಗೂ 2 ಸಿಕ್ಸರ್ಗಳಿಂದ 82 ರನ್ ಕಲೆಹಾಕಿದರು. ಇವರಿಗೆ ಸ್ವಲ್ಪ ಮಟ್ಟಿಗೆ ಸಾಥ್ ನೀಡಿದ ಫಿನ್ 24 ರನ್ಗಳಿಸಿದರು. ಅಂತಿಮವಾಗಿ 465 ರನ್ಗಳಿಸುವ ಮೂಲಕ ಆಂಗ್ಲರು ತಮ್ಮ ಮೊದಲ ಇನಿಂಗ್ಸ್ ಮುಗಿಸಿದರು.
ನಂತರ ತಮ್ಮ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡ ಆರಂಭಿಕ ಕುಸಿತ ಎದುರಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿದೆ. ಆರಂಭಿಕರಾಗಿ ಕಣಕ್ಕಿಳಿದ ಫುಲ್ಟಾನ್ ಹಾಗೂ ರದರ್ಫೋರ್ಡ್ ತಂಡಕ್ಕೆ ಕೇವಲ 6ರನ್ಗಳ ಆರಂಭ ನೀಡಿದರು. ಈ ವೇಳೆ ಕೇವಲ 1 ರನ್ಗಳಿಸಿದ್ದ ಫುಲ್ಟಾನ್, ಆ್ಯಂಡರ್ಸನ್ಗೆ ವಿಕೆಟ್ ಒಪ್ಪಿಸಿದರು. ನಂತರ ಜತೆಯಾದ ವಿಲಿಯಮ್ಸನ್, ರದರ್ಫೋರ್ಡ್ ಜತೆ ಸೇರಿ 47ರನ್ಗಳ ಜತೆಯಾಟವಾಡಿದರು. ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕಗಳಿಸಿದ್ದ ರದರ್ಫೋರ್ಡ್ ಕೇವಲ 23ರನ್ಗಳಿಸಿ ಬ್ರಾಡ್ಗೆ ವಿಕೆಟ್ ಒಪ್ಪಿಸಿದರು. ರದರ್ಫೋರ್ಡ್ ಔಟಾದ ನಂತರದ ಎಸೆತದಲ್ಲೇ ರಾಸ್ ಟೇಲರ್, ಬ್ರಾಡ್ ಎಸೆತದಲ್ಲಿ ಬೌಲ್ಡ್ ಆದರು ಈ ಮೂಲಕ ಕಿವೀಸ್ 48 ರನ್ಗಳಿಗೆ ತನ್ನ ಪ್ರಮುಖ 3 ವಿಕೆಟ್ ಕಳೆದುಕೊಂಡಿದೆ. ಅಂತಿಮವಾಗಿ ಎರಡನೇ ದಿನಾಂತ್ಯಕ್ಕೆ ಕಿವೀಸ್ ತಂಡ 66 ರನ್ಗಳಿಸಿದ್ದು, ವಿಲಿಯಮ್ಸನ್ ಅಜೇಯ 32 ಹಾಗೂ ಬ್ರೌನ್ಲಿ ಅಜೇಯ 8 ರನ್ಗಳಿಸಿ ಕ್ರೀಸ್ನಲ್ಲಿಇದ್ದಾರೆ.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಪ್ರಥಮ ಇನಿಂಗ್ಸ್ 465/10 (2ನೇದಿನ ಮುಂದುವರಿದು)
ಟ್ರಾಟ್ 121
ಪೀಟರ್ಸನ್ 73
ಪ್ರಯರ್ 82
ಬೌಲಿಂಗ್: ಮಾರ್ಟೀನ್ 130/4, ವಿಲಿಯಮ್ಸನ್ 16/2
ನ್ಯೂಜಿಲೆಂಡ್ ಪ್ರಥಮ ಇನಿಂಗ್ಸ್ 66/3 (2ನೇ ದಿನಾಂತ್ಯಕ್ಕೆ)
ವಿಲಿಯಮ್ಸನ್ ಅಜೇಯ 32
ರದರ್ಫೋರ್ಡ್ 23
ಬೌಲಿಂಗ್: ಬ್ರಾಡ್ 18/2, ಆ್ಯಂಡರ್ಸನ್ 17/1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

