ಕ್ರೀಡೆ

ಸಿಂಧು, ಕಶ್ಯಪ್‌ಗೂ ಸೋಲು

Published On :

ಐಪೋ: ಸೈನಾ ಅವರನ್ನು ಹೊರತುಪಡಿಸಿದಂತೆ, ಈ ಬಾರಿಯ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಉದಯೋನ್ಮುಖ ಆಟಗಾರರಾದ ಪಿ.ವಿ. ಸಿಂಧು, ಪರುಪಳ್ಳಿ ಕಶ್ಯಪ್, ಎಚ್.ಎಸ್. ಪ್ರಣಯ್ ಅವರು ಶುಕ್ರವಾರ ಸೋಲು ಕಂಡು ಪಂದ್ಯಾವಳಿಯಿಂದ  ನಿರ್ಗಮಿಸಿದರು.
ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಸಿಂಧು ಅವರು, ಜಪಾನ್‌ನ ಯುಯ್ ಹ್ಯಾಶಿಮಿಟೋ ಅವರ ವಿರುದ್ಧ 21-23, 11-21 ಅಂತರದಲ್ಲಿ ಸೋತರು.
ಅತ್ತ, ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಪರುಪಳ್ಳಿ ಕಶ್ಯಪ್ ಅವರು, ಮಲೇಷ್ಯಾದ ವೆಯ್ ಫೆಂಗ್ ಚಾಂಗ್ ಅವರ ವಿರುದ್ಧ 21-18, 7-21, 16-21 ಅಂತರದಲ್ಲಿ ಸೋತು ಪಂದ್ಯಾವಳಿಯಿಂದ ಆಚೆ ನಿರ್ಗಮಿಸಿದರು.
ಶುಕ್ರವಾರವೇ ನಡೆದ ಮತ್ತೊಂದು ಪುರುಷರ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಚ್‌ಎಸ್ ಪ್ರಣಯ್ ಅವರು, ತೈಪೇನ ಟಿಯೆನ್ ಚೌ ಅವರ ವಿರುದ್ಧ 16-21, 21-15, 15-21 ಅಂತರದಲ್ಲಿ ಪರಾಭವಗೊಂಡರು.
ಡಬಲ್ಸ್‌ನಲ್ಲೂ ನಿರಾಸೆ: ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಕಂಡಿದ್ದ ಪ್ರಣವ್, ಪುರುಷರ ಡಬಲ್ಸ್ ವಿಭಾಗದಲ್ಲೂ ಸೋಲು ಕಂಡರು. ಜೊತೆಗಾರ ಅಕ್ಷಯ್‌ದೇವಾಲ್ಕರ್ ಅವರ ಜೊತೆ, ಶುಕ್ರವಾರ ನಡೆದ ಪಂದ್ಯದಲ್ಲಿ ಕೊರಿಯಾದ ಅಗ್ರ ಜೋಡಿಯಾದ ಸಂಗ್ ಹ್ಯೂನ್ ಕೊ ಹಾಗೂ ಯಂಗ್ ಡೇ ಲೀ ಅವರ ವಿರುದ್ಧ ಸೆಣೆಸಿದ್ದ ಭಾರತದ ಜೋಡಿ,  21-14, 21-12 ಅಂತರದಲ್ಲಿ ಸೋಲು ಕಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.