ಎಫ್1: ವೆಟಲ್ ಉತ್ತಮ ಆರಂಭ
ಮೆಲ್ಬರ್ನ್: ವಿಶ್ವ ಚಾಂಪಿಯನ್ ಸೆಬಾಸ್ಟಿಯನ್ ವೆಟಲ್ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದು, ಶುಕ್ರವಾರ ನಡೆದ ಆಸ್ಟ್ರೇಲಿಯನ್ ಗ್ರ್ಯಾನ್ ಪ್ರೀನ ಅಭ್ಯಾಸದಲ್ಲಿ ಮುನ್ನಡೆ ಸಾಧಿಸುವ ಮೂಲಕ ಪ್ರಸಕ್ತ ಋತುವಿನಲ್ಲಿ ಉತ್ತಮ ಆರಂಭ ಪಡೆದಿದ್ದಾರೆ. ಭಾನುವಾರ ನಡೆಯಲಿರುವ ಪ್ರಮುಖ ಸುತ್ತಿಗೆ ಅಭ್ಯಾಸ ನಡೆಸಿದ ರೆಡ್ ಬುಲ್ನ ವೆಟಲ್, ತಮ್ಮ ಎದುರಾಳಿ ತಂಡಗಳಾದ ಫೆರಾರಿ ಹಾಗೂ ಮೆಕ್ಲಾರೆನ್ ತಂಡವನ್ನು ಹಿಂದಿಕ್ಕಿದರು. ವೆಟಲ್ 1 ನಿಮಿಷ 25.908 ಸೆಕೆಂಡ್ಗಳಲ್ಲಿ ತಮ್ಮ ವೇಗದ ಲ್ಯಾಪ್ ಮುಗಿಸಿ ಅಗ್ರ ಸ್ಥಾನ ಪಡೆದರೆ, ಮಾರ್ಕ್ ವೆಬರ್ (1.26.172)ಸೆ. ಗಳಲ್ಲಿ ಲ್ಯಾಪ್ ಮುಗಿಸಿ ದ್ವಿತೀಯ ಸ್ಥಾನ ಪಡೆದರು. ನಿಕೊ ರೋಸ್ಬರ್ಗ್ (1.26.322)ಸೆ. ಗಳಲ್ಲಿ ಲ್ಯಾಪ್ ಮುಗಿಸಿ ಮೂರನೇ ಸ್ಥಾನ ಪಡೆದರೆ, ಕಳೆದ ನಾಲ್ಕು ಆಸ್ಟ್ರೇಲಿಯನ್ ಗ್ರ್ಯಾನ್ ಪ್ರಿನಲ್ಲಿ ಮೂರರಲ್ಲಿ ಜಯಗಳಿಸಿದ್ದ ಜೇನ್ಸನ್ ಬಟನ್ 2.386 ನಿಮಿಷದಲ್ಲಿ ಲ್ಯಾಪ್ ಮುಗಿಸಿ, 11ನೇ ಸ್ಥಾನ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

