ಆಮ್ಲಾ-ವಿಲಿಯರ್ಸ್ ವಿಶ್ವ ದಾಖಲೆಯಾಟ
ಜೋಹಾನ್ಸ್ಬರ್ಗ್: ಮೂರನೇ ವಿಕೆಟ್ಗೆ 238 ರನ್ ಗಳಿಸಿ, ವಿಶ್ವ ದಾಖಲೆ ನಿರ್ಮಿಸಿದ ಹಶೀಂ ಆಮ್ಲಾ (122) ಮತ್ತು ಡಿವಿಲಿಯರ್ಸ್ (128) ಜತೆಯಾಟದ ನೆರವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ 3ನೇ ಏಕದಿನ ಪಂದ್ಯದಲ್ಲಿ 34 ರನ್ಗಳ ಅಂತರದಿಂದ ಜಯ ಸಾಧಿಸಿದೆ.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ದಕ್ಷಿಣ ಆಫ್ರಿಕಾ, ನಿಗದಿತ ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 343 ರನ್ ಗಳಿಸಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ, 48.1 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 309 ರನ್ ಗಳಿಸಿ ಪರಾಭವ ಹೊಂದಿತು. ಇದರೊಂದಿಗೆ ಸರಣಿಯಲ್ಲಿ ಆಫ್ರಿಕಾ 2-1ರಿಂದ ಮುನ್ನಡೆ ಕಂಡುಕೊಂಡಿದೆ.
ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಜತೆಯಾಟದಲ್ಲಿ (237) ಕೀನ್ಯಾ ವಿರುದ್ಧ 1999ರಲ್ಲಿ ಮಾಡಿದ್ದ ದಾಖಲೆಯನ್ನು ಆಮ್ಲಾ ಮತ್ತು ವಿಲಿಯರ್ಸ್ ಜೋಡಿ ಪಾಕ್ ವಿರುದ್ಧ ಮುರಿದು ಹಾಕಿತು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ 343/5 (50 ಓವರ್)
ಆಮ್ಲಾ 122, ವಿಲಿಯರ್ಸ್ 128
ಬೌಲಿಂಗ್: ಇರ್ಫಾನ್ 34/2, ರಿಯಾಜ್ 93/2
ಪಾಕಿಸ್ತಾನ 309/10 (48.1 ಓವರ್)
ಅಫ್ರಿದಿ 88, ಹಫೀಜ್ 57
ಬೌಲಿಂಗ್: ಸೊಸೆಬೆ 74/3, ಮೆಕ್ಲಾರೆನ್ 56/3
ಆಮ್ಲಾ , ವಿಲಿಯರ್ಸ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

